ಭಾವೈಕ್ಯತೆ ಗಜಾನನ ಸಮಿತಿ ಹಾಗೂ ಗೋಪಿ ರಕ್ತ ಭಂಡಾರ ಇವರ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇ ವರ್ಷದ ಗಜಾನನೋತ್ಸವ ನಿಮಿತ್ಯ ರಕ್ತದಾನ ಶಿಬಿರ…

ಗಂಗಾವತಿ ನಗರದ 16ನೇ ವಾರ್ಡಿನ ಬಸವೇಶ್ವರ ಆಯಿಲ್ ಮಿಲ್ ಹತ್ತಿರ ಭಾವೈಕ್ಯತೆ ಗಜಾನನ ಸಮಿತಿ ಹಾಗೂ ಗೋಪಿ ರಕ್ತ ಭಂಡಾರ ಇವರ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇ ವರ್ಷದ ಗಜಾನನೋತ್ಸವ ನಿಮಿತ್ಯ ರಕ್ತದಾನ ಶಿಬಿರದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಅವರು ಭಾಗವಹಿಸಿ ಮಾತನಾಡುತ್ತಾ ಭಾವೈಕ್ಯತ ಗಜಾನನ ಸಮಿತಿಯವರು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಅತ್ಯಂತ ಶ್ಲಾಘನೀಯ ಕಾರ್ಯ ತುರ್ತು ಸಂದರ್ಭದಲ್ಲಿ ಜೀವ ರಕ್ಷಕವಾದ ರಕ್ತ ಅತ್ಯವಶ್ಯಕವಾಗಿರುವುದರಿಂದ ಸುಮಾರು 60 ಯುವಕರು ರಕ್ತದಾನ ಮಾಡಿ ಇನ್ನೊಬ್ಬರ ಜೀವವನ್ನು ಉಳಿಸುವುದರ ಜೊತೆಗೆ ರಕ್ತದಾನದಿಂದ ದೇಹದಲ್ಲಿ ಪುನಃ ಹೊಸ ರಕ್ತ ಪಡೆಯುವುದರ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿರುವುದು ಅತ್ಯಂತ ಸಂತೋಷಕರವಾದ ವಿಷಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯರಾದ ಅಕ್ಕಿ ಕೊಟ್ರಪ್ಪ ದಣಿ , ಡಾ.ಎಸ್ ಬಿ ಹಂದ್ರಾಳ, ಭಾವೈಕ್ಯತೆ ಗಜಾನನ ಸಮಿತಿಯ ಅಧ್ಯಕ್ಷರಾದ ಅಕ್ಕಿ ಆನಂದ್, ನಗರಸಭಾ ಸದಸ್ಯ ರಾಜ್ ಮಹಮ್ಮದ್ , ಇನ್ನರ್ ವೀಲ್ ಕ್ಲಬ್ ನ ಕಾರ್ಯದರ್ಶಿ ಅಸ್ಮ ಫರೀನ್ , ಡಾ. ಅಬ್ದುಲ್ ಕರೀಂ , ಪತ್ರಕರ್ತರಾದ ಶ್ರೀನಿವಾಸ್ ಎಂ.ಜೆ, ಶರಣಯ್ಯ ಸ್ವಾಮಿ, ಮುಖ್ಯ ಅತಿಥಿಗಳಾಗಿ ಮಹಾಲಿಂಗಪ್ಪ ಬನ್ನಿಕೊಪ್ಪ, ಶರಣಪ್ಪ ಸಿದ್ದರಾಂಪುರ್, ಅಕ್ಕಿ ಪ್ರಕಾಶ್, ಮಹಾಂತೇಶ್ ಗಲಗಲಿ, ಆದೇಶ, ಹುಸೇನ್, ಗೌಸ್, ಸಾಧಿಕ್ ಮನಿಯರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

