ಗೃಹಲಕ್ಷ್ಮಿ ಯೋಜನೆಯಿಂದ ಬಡವರಿಗೆ ಆರ್ಥಿಕ ಬಲ:ಹುಸೇನಪ್ಪ ಬಂಡೆ ನಾಯಕ…

ಗಂಗಾವತಿ. ಜ.04: ಸಿ.ಎಂ.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಆರ್ಥಿಕ ಬಲದ ಜತೆಗೆ ನೈತಿಕ ಸ್ಥೈರ್ಯ ನೀಡಿವೆ ಎಂದು ತಾಲೂಕಿನ ವಡ್ಡರಹಟ್ಟಿಕ್ಯಾಂಪಿನ 5ನೇ ವಾರ್ಡಿನ ಸದಸ್ಯ ಹುಸೇನಪ್ಪ ಬಂಡೆ ನಾಯಕ ತಿಳಿಸಿದರು.ಈ ಕುರಿತು ಮಾತನಾಡಿದ ಹುಸೇನಪ್ಪ ಬಂಡೆ ನಾಯಕ ಅವರು, ವಿರೋಧ ಪಕ್ಷಗಳು ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತುತ್ತಿವೆ. ಆದರೆ ವಾಸ್ತವವಾಗಿ ಈ ಯೋಜನೆಗಳು ಮಧ್ಯಮ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಆರ್ಥಿಕ ಸಧೃಡತೆ ಹಾಗೂ ನೈತಿಕ ಸ್ಥೈರ್ಯ ನೀಡಿವೆ. ನಮ್ಮ ಗ್ರಾಮದ ಮಹಿಳೆ ರಾಜೇಶ್ವರಿ ಅವರು ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣದಿಂದ 31 ಸಾವಿರ ಮೌಲ್ಯದ ರೆಪ್ರಿಜರೇಟ್ ಖರೀದಿ ಮಾಡಿದ್ದೇ ಇದಕ್ಕೆ ಸಾಕ್ಷಿ. ಹೋಟಲ್ ವ್ಯಾಪಾರ ಮಾಡುತ್ತಿರುವ ಇವರಿಗೆ ಗೃಹಲಕ್ಷ್ಮಿ ಯೋಜನೆಯಿಂದ ಆರ್ಥಿಕ ಸಬಲತೆ ಸಾಧಿಸಲು ಸಾಧ್ಯವಾಗಿದೆ. ಸಾರ್ವಜನಿಕರು ಕಾಂಗ್ರೆಸ್ ನ ಪಂಚ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕ ಪ್ರಗತಿ ಸಾಧಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎಂದರು.ರಾಜೇಶ್ವರಿ ಅವರು ಮಾತನಾಡಿ, ಹೋಟೆಲ್ ಬಳಕೆಗಾಗಿ ರೆಪ್ರಿಜರೇಟ್ ಖರೀದಿ ಮಾಡುವುದು ಬಹಳ ದಿನಗಳ ಕನಸಾಗಿತ್ತು. ಸಿ.ಎಂ.ಸಿದ್ದರಾಮಯ್ಯ ಅವರ ಗೃಹಲಕ್ಷ್ಮಿ ಯೋಜನೆಯಿಂದ ಇಂದು ನನ್ನ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಗ್ರಾಮದ ಪ್ರಮುಖರಾದ ಹನುಮಂತಪ್ಪ ಸಂಗಟಿ, ಆಂಜನೇಯನ, ವೆಂಕಟೇಶ, ಹೊನ್ನಪ್ಪ, ತಿರುಪತಿ ಇನ್ನಿತರರಿದ್ದರು.

