ಸಮಸಮಾಜಕ್ಕಾಗಿ ಶ್ರಮಿಸಿದ ಅಂಬಿಗರ ಚೌಡಯ್ಯ: ಎಲಿಗಾರ್ ನಾಗರಾಜ.

ಸಮಸಮಾಜಕ್ಕಾಗಿ ಶ್ರಮಿಸಿದ ಅಂಬಿಗರ ಚೌಡಯ್ಯ: ಎಲಿಗಾರ್ ನಾಗರಾಜ.

ಬಳ್ಳಾರಿ / ಕಂಪ್ಲಿ : ನಿಜ ಶರಣ ಅಂಬಿಗರ ಚೌಡಯ್ಯನವರು ಜಗಜ್ಯೋತಿ ಬಸವಣ್ಣನವರ ಸಮಕಾಲೀನ ಶ್ರೇಷ್ಠ ವಚನಕಾರ ಎಂದು ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಎಲಿಗಾರ್ ನಾಗರಾಜ ಅಭಿಪ್ರಾಯಪಟ್ಟರು.ಪಟ್ಟಣಕ್ಕೆ ಆಗಮಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ವಚನ ಜ್ಯೋತಿ ಸಂಚಾರಿ ಪೀಠ ಸ್ವಾಗತಿಸಿ ಅವರು ಮಾತನಾಡಿದರು.‘ನೇರ, ನಿಷ್ಠುರವಾಗಿ ವಚನಗಳನ್ನು ಬರೆದ ಚೌಡಯ್ಯನವರು ಸಮಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೋಣಿ ನಡೆಸುವ ಅಂಬಿಗನಾಗಿ ಸೇವೆ ಮಾಡುತ್ತಲೇ ನೂರಾರು ವಚನಗಳನ್ನು ಬರೆಯುವ ಮೂಲಕ ವಚನ ಸಾಹಿತ್ಯಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ’ ಎಂದರು. ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ಕರೇಕಲ್ ಪ್ರಕಾಶ ಮಾತನಾಡಿ, ‘ವಚನ ಜ್ಯೋತಿ ಸಂಚಾರಿ ಪೀಠ ಕಲಬುರಗಿ ಜಿಲ್ಲೆಯ ಚಿತ್ತಾಪುರದಿಂದ ಆರಂಭಗೊಂಡು ರಾಜ್ಯದ ಎಲ್ಲ ತಾಲ್ಲೂಕುಗಳು ಮತ್ತು ಹೋಬಳಿ ಕೇಂದ್ರಗಳಿಗೆ ಸಂಚರಿಸಿ ಚೌಡಯ್ಯನವರ ಗ್ರಂಥಗಳನ್ನು ನಾಡಿನ ಉದ್ದಗಲಕ್ಕೂ ಪರಿಚಯಿಸುವ ಕೆಲಸ ಮಾಡುತ್ತಿದೆ’ ಎಂದರು.ಅಂಬಿಗರ ಚೌಡಯ್ಯನವರು ಜಗಜ್ಯೋತಿ ಯಾತ್ರೆಯ ಉಸ್ತುವಾರಿ ನಿಂಗಪ್ಪ ಕಲ್ಬುರ್ಗಿ, ಗಂಗಾಮತ ಬೆಸ್ತ ಸಮಾಜದ ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಕರೇಕಲ್ ಮನೋಹರ್, ಪ್ರಮುಖರಾದ ಟಿ. ಗಂಗಣ್ಣ, ಎನ್. ಮಂಜುನಾಥ, ಎಲ್. ವಿರೇಶ, ಟಿ. ಸೋಮನಾಥ, ಕೆ. ನಾಗರಾಜ, ಉಡೇಗೊಳ್ ಮಲ್ಲಯ್ಯ, ಉಡೇಗೊಳ್ ಶರಣ, ಮಲ್ಲಯ್ಯ ಹಾಗೂ ಸಮಾಜದ ಮಹಿಳೆಯರು ಸೇರಿದಂತೆ ಸಮಾಜ ಬಾಂಧವರು ಹಾಜರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *