ಬಸವಾದಿ ಶರಣರ ಜೀವನ ಚರಿತ್ರೆ ಒಳಗೊಂಡ ಕ್ಯಾಲೆಂಡರ್ ದೈನಂದಿನ ಜೀವನಕ್ಕೆ ಅವಶ್ಯಕ: ಕ. ಮ. ಹೇಮಯ್ಯ ಸ್ವಾಮಿ..

ಬಸವಾದಿ ಶರಣರ ಜೀವನ ಚರಿತ್ರೆ ಒಳಗೊಂಡ ಕ್ಯಾಲೆಂಡರ್ ದೈನಂದಿನ ಜೀವನಕ್ಕೆ ಅವಶ್ಯಕ: ಕ. ಮ. ಹೇಮಯ್ಯ ಸ್ವಾಮಿ..

ಬಳ್ಳಾರಿ / ಕಂಪ್ಲಿ : ಕ್ರಿಯಾಶೀಲ ರಾಷ್ಟ್ರೀಯ ಬಸವ ಬಳಗ ಹಾಗೂ ತಾಲೂಕ ಘಟಕ ವತಿಯಿಂದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಲಿಂಗಾಯತ ದಿನದರ್ಶಿಕೆ ಕ್ಯಾಲೆಂಡರ್ ಹೊರತಂದಿರುವ 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ನ್ನು ಅಕ್ಕಿ ಗಿರಣಿಗಳ ಮಾಲೀಕರ ರಾಜ್ಯ ಉಪಾಧ್ಯಕ್ಷ ಹಾಗೂ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಕ. ಮ. ಹೇಮಯ್ಯಸ್ವಾಮಿ ಬಿಡುಗಡೆ ಮಾಡಿದರು.ಪಟ್ಟಣದ ಸಂಗತ್ರಾಯ ಸಂಸ್ಕೃತ ಪಾಠ ಶಾಲೆಯ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅನುಭವ ಮಂಟಪದಲ್ಲಿ ಭಾನುವಾರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, 2026ರ ಲಿಂಗಾಯತ ದಿನದರ್ಶಿಕೆ ಲಿಂಗಾಯತ ಧರ್ಮದ ಸಂಸ್ಕಾರಗಳು ನಿಜಾಚರಣೆಗಳು, ವೈಚಾರಿಕ ಮತ್ತು ವೈಜ್ಞಾನಿಕತೆ ಬೆಳೆಸುವ ವಚನಗಳು, ಬಸವಾದಿ ಶರಣರ ಜೀವನ ಚರಿತ್ರೆಗಳನ್ನು ದಿನದರ್ಶಿಕೆ ಒಳಗೊಂಡಿದೆ. ವಚನಕಾರರ ಜೀವನ ಚರಿತ್ರೆ ವಚನಗಳು ಹೊಂದಿರುವುದು ಸಂತಸದ ವಿಷಯವಾಗಿದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು. ಇಷ್ಟ ಲಿಂಗ ಅಧ್ಯಯನ ಕೇಂದ್ರ ನಾಗೇನಹಳ್ಳಿಯ ( ಹೊಸಪೇಟೆ) ಕಾರ್ಯದರ್ಶಿ ಮಾವಿನಹಳ್ಳಿ ಬಸವರಾಜ ಮಾತನಾಡಿ ಬಸವಣ್ಣ ಅವರು ನಿರಾಕಾರ ದೇವರ ಸಾಕಾರ ಸ್ವರೂಪವಾದ ಇಷ್ಟ ಲಿಂಗವನ್ನು ನಮ್ಮ ಕರಸ್ಥಲಕ್ಕೆ ತಂದುಕೊಟ್ಟುರು. ಜಾತಿ, ವರ್ಣ, ವರ್ಗ, ಲಿಂಗ ಭೇದ ರಹಿತ ಸಮಾನತೆ ಸಾರುವ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ, ವಿಶ್ವಮಾನ್ಯ ಲಿಂಗಾಯತ ಧರ್ಮವಾಗಿದೆ, ಕೆಲವರು `ಲಿಂಗಾಯತ’ ಎಂದು, ಮತ್ತೆ ಕೆಲವರು `ವೀರಶೈವ ಲಿಂಗಾಯತ’ ಎಂದು ರಾಡಿ ಎಬ್ಬಿಸುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಹಿತಾಸಕ್ತಿ, ವೋಟು ಬ್ಯಾಂಕಿನ ರಾಜಕಾರಣ ಅಡಗಿರುವುದು ವಿಷಾದನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ರಾಮಸಾಗರದ ರಮೇಶ ಗೌಡ್ರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತನ ತಾಲೂಕು ಘಟಕದ ಅಧ್ಯಕ್ಷ ಜಿ. ಪ್ರಕಾಶ, ಅಕ್ಕಮಹಾದೇವಿ ಮಹಿಳಾ ಮಂಡಳಿದ ಅಧ್ಯಕ್ಷೆ ಡಾ. ಶಾರದಾ ಹಿರೇಮಠ, ಭಕ್ತಿ ಬಂಡಾರಿ ಶ್ರೀ ಬಸವೇಶ್ವರ ಆಶ್ರಮ ದ ಪಾಮಯ್ಯ್ ಶರಣರು ವೇದಿಕೆ ಮೇಲಿದ್ದು ಮಾತನಾಡಿದರು. ಈ ಸಂದರ್ಭದಲ್ಲಿ ಅಶೋಕ ಕುಕುನೂರ್, ಎಚ್. ನಾಗರಾಜ, ಬಿ. ಎಂ. ರುದ್ರಯ್ಯ, ವೆಂಕಟರೆಡ್ಡಿ, ಉಗಾದಿ ಶಿವರಾಜ, ಡಿ. ಬಸವರಾಜ್, ಎಸ್. ರಾಮು, ಟಿ. ತಿಪ್ಪೇಸ್ವಾಮಿ, ಗವಿವೀರನಗೌಡ, ದೇವಸಮುದ್ರ ಗಣೇಶಗೌಡ, ಬಂಗಿ ದೊಡ್ಡ ಮಂಜುನಾಥ, ಶರಣ ಸಾಹಿತ್ಯ ಪರಿಷತನ ಸದಸ್ಯರು ಅಕ್ಕಮಹಾದೇವಿ ಮಹಿಳಾ ಮಂಡಳಿ ಸದಸ್ಯರು ಸೇರಿದಂತೆ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *