ಭ್ರಷ್ಟಾಚಾರ ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಪ್ರಮುಖ ಅಡ್ಡಿ ಡಾ.ಕೆ ಸಿ ಕುಲಕರ್ಣಿ  ಪ್ರಾಚಾರ್ಯರು…

ಭ್ರಷ್ಟಾಚಾರ ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಪ್ರಮುಖ ಅಡ್ಡಿ ಡಾ.ಕೆ ಸಿ ಕುಲಕರ್ಣಿ  ಪ್ರಾಚಾರ್ಯರು…

ಭ್ರಷ್ಟಾಚಾರ ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ಪ್ರಮುಖ ಅಡ್ಡಿಗಳಲ್ಲಿ ಒಂದಾಗಿದೆ ಎಂದು ಟಿ ಎಂ ಎ ಇ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ.ಕೆ. ಸಿ. ಕುಲಕರ್ಣಿ ರವರು ಇಂದು ಹಿರೇಬೆಣಕಲ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕೇಂದ್ರ ಗಂಗಾವತಿ ಇವರ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು* *ಶಿಸ್ತು, ಕರ್ತವ್ಯ, ಪ್ರಾಮಾಣಿಕತೆಯ ಸೇವಾ ಮನೋಭಾವಗಳು, ಇವುಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಭ್ರಷ್ಟಾಚಾರವು ಸೇರಿದಂತೆ ಅನೇಕ ಪಿಡುಗುಗಳು ವ್ಯಕ್ತಿ ಮತ್ತು ಸಮಾಜವನ್ನು ನಾಶ ಮಾಡಬಹುದು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು**ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಎಲ್ಲರು ಬಾಧ್ಯಸ್ಥರು, ಪ್ರತಿಯೊಬ್ಬ ನಾಗರಿಕನೂ ಜಾಗೃತನಾಗಿ ಎಲ್ಲಾ ಕಾಲದಲ್ಲೂ ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಬದ್ಧರಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು* *ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ. ಆಂಜನೇಯ ರವರು ಭ್ರಷ್ಟಾಚಾರ ವಿರೋದಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭ್ರಷ್ಟಾಚಾರಗಳ ಕುರಿತು, ಅನ್ಯ ಮಾರ್ಗಗಳಿಂದ ಲಾಭ ಪಡೆದುಕೊಳ್ಳುವದಿದ್ದರೆ ಅದು ಭ್ರಷ್ಟಾಚಾರ* *ಪ್ರತಿಪಾಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಭ್ರಷ್ಟಾಚಾರವನ್ನು ನಿವಾರಿಸಬಹುದು. ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರ ಪಾತ್ರ ದೊಡ್ಡದು. ವಿದ್ಯಾಭ್ಯಾಸ ಕೊರತೆ, ಬಡತನ, ಪ್ರಚಾರ ಪ್ರಿಯತೆ, ಸ್ವಾತಂತ್ರ್ಯ ತನಿಖಾ ಆಯೋಗದ ಕೊರತೆ, ಇವುಗಳೆಲ್ಲ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗುತ್ತವೆ.* *ಸೇವಾ ಮನೋಭಾವದಿಂದ ಕೆಲಸ ಮಾಡುವವರು ಹೆಚ್ಚಾದಂತೆ ಭ್ರಷ್ಟಾಚಾರ ಇಳಿಮುಖ ವಾಗಬಹುದು ಎಂದು ತಿಳಿಸಿದರು*.*2025 ರ ವರ್ಷದ ಕೇಂದ್ರ ಜಾಗೃತಿ ಆಯೋಗದ ಘೋಷಣೆಯಂತೆ ಎಲ್ಲಾ ವಿದ್ಯಾರ್ಥಿಗಳಿಂದ*- *ಜಾಗ್ರತಾ ನಮ್ಮ ಹಂಚಿಕೆಯ ಜವಾಬ್ದಾರಿ, ನಾವೆಲ್ಲರೂ ಭ್ರಷ್ಟಾಚಾರ ವಿರೋಧಿಸೋಣ, ಭವ್ಯ ರಾಷ್ಟ್ರಕಟ್ಟಲು ಭದ್ಧರಾಗಿರೋಣ ಎಂದು ಪ್ರತಿಜ್ಞಾವಿಧಿ ಬೋಧಿಸಿದರು*

*ಈ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ರಮೇಶ.ಕೆ. ಡಾ.ಕೆ.ಎಂ ಶಿವಪ್ರಕಾಶ, ದೈಹಿಕ ನಿರ್ದೇಶಕರಾದ ಜಯರಾಮ ಮುರಡಿತೋಟ ಮತ್ತು ಇನ್ನಿತರ ಮಹಾವಿದ್ಯಾಲಯದ ಸಿಬ್ಬಂದಿಗಳು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *