ರಂಗಭೂಮಿ ನಾಟಕಗಳು ಜೀವಂತ ಕಲೆಯಾಗಿದೆ:ಹೊಸಳ್ಳಿ ಶಂಕ್ರಗೌಡ.ವಿರೇಶ ನಾಟ್ಯ ಸಂಘದ ನಾಟಕ ಪ್ರದರ್ಶನಕ್ಕೆ ಚಾಲನೆ…

ರಂಗಭೂಮಿ ನಾಟಕಗಳು ಜೀವಂತ ಕಲೆಯಾಗಿದೆ:ಹೊಸಳ್ಳಿ ಶಂಕ್ರಗೌಡ.ವಿರೇಶ ನಾಟ್ಯ ಸಂಘದ ನಾಟಕ ಪ್ರದರ್ಶನಕ್ಕೆ ಚಾಲನೆ…

ಗಂಗಾವತಿ: ರಂಗಭೂಮಿಯ ಸಾಮಾಜಿಕ. ಪೌರಾಣಿಕ ನಾಟಕಗಳು ಜನರಿಗೆ ಮನೋರಂಜನೆ ಜತೆಗೆ ಜೀವಂತ ಕಲೆಗಳನ್ನು ಪ್ರದರ್ಶನ ಮಾಡಿಸುತ್ತವೆ ಎಂದು ನಗರಸಭೆಯ ಮಾಜಿ ಉಪಾಧ್ಯಕ್ಷ ಹೊಸಳ್ಳಿ ಶಂಕ್ರಗೌಡ ಹೇಳಿದರು.ಅವರು ನಗರದ ಬನ್ನಿಗಿಡದ ಕ್ಯಾಂಪ್ ನ ಶ್ರೀ ಚನ್ನಬಸವಸ್ವಾಮಿ ಕಲಾಮಂದಿರದಲ್ಲಿ ನಾಲತ್ತವಾಡದ ಶ್ರೀ ವಿರೇಶ್ವರ ನಾಟಕ ಸಂಘದ ವತಿಯಿಂದ ಆಯೋಜಿಸಿರುವ ಎಸ್‌. ಎಸ್.ಜೋಶಿ ಶೆಟ್ಟಿಯ ಚೆಲ್ಲಾ ಸಂಗವ್ವನ ಹಾರಾಟ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.ಗಂಗಾವತಿ ನಗರದಲ್ಲಿ ಪ್ರತಿವರ್ಷ ನಾಟಕ ಪ್ರದರ್ಶನದ ಶಿಬಿರ ನಡೆಯುವ ಕಾರಣ ಶ್ರೀ ಚನ್ನಬಸವಸ್ವಾಮಿ ಕಲಾಮಂದಿರ ನಿರ್ಮಿಸಲಾಗಿದ್ದು ಜನರು ಸಹ ನಾಟಕ ಕಲೆಗೆ ಪ್ರೋತ್ಸಾಹಿಸಬೇಕು. ಟಿ.ವಿ.ಮೊಬೈಲ್ ಸೇರಿ ಡಿಜಿಟಲ್ ಯುಗದಲ್ಲಿಯೂ ನಾಟಕಗಳನ್ನು ಕನ್ನಡದ ಪ್ರೇಕ್ಷಕರು ಪ್ರೋತ್ಸಾಹಿಸುತ್ತಿದ್ದು ನೂರಾರು ನಾಟಕ ಕಂಪನಿಗಳು ಕಲಾವಿದರಿಗೆ ಆಶ್ರಯ ನೀಡಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *