ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಹೇಳಿಕೆ ಮೊಹರಂ ಹಬ್ಬವನ್ನು ಶಾಂತಿಯಿಂದ ಆಚರಿಸಿ..

ಕುಕನೂರು: ಭಾವೈಕ್ಯತೆಯ ಪ್ರತೀಕವಾದ ಮೊಹರಂಹಬ್ಬವನ್ನು ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿದ್ದು ಹಬ್ಬವನ್ನು ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕೆಂದು ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಹೇಳಿದರು.ಕುಕನೂರು ಸಮೀಪದ ಕುದರಿಮೋತಿ ಗ್ರಾಮದಲ್ಲಿ ನಡೆದ ಮೊಹರಂ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಕೊಪ್ಪಳ ಜಿಲ್ಲೆಯಲ್ಲಿ ಕುದರಿಮೋತಿ ಎಂದಿಗೂ ಶಾಂತಿ ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ ಬಾಂಧವರೆಲ್ಲರೂ ಸೋದರ ಭಾವನೆಯಿಂದ ಬಾಳುತ್ತಿದ್ದು ಎಲ್ಲರೂ ಸೇರಿ ಹಬ್ಬಗಳನ್ನು ಆಚರಿಸುವುದು ಖುಷಿಯಾಗಿದೆ. ಮೊಹರಂ ಹಬ್ಬವನ್ನು ನೀವೆಲ್ಲರೂ ಸೇರಿ ಬಹಳಷ್ಟು ಸಡಗರ ಸಂಭ್ರಮಗಳಿಂದ ಆಚರಿಸಿರಿ. ಏನಾದರೂ ಅಹಿತಕರ ಘಟನೆಗಳು ಜರುಗಲಿವೆ ಎಂಬ ಸುಳಿವು ನಿಮಗೆಸಿಕ್ಕಲ್ಲಿ ನಿಮ್ಮ ಮಟ್ಟದಲ್ಲಿ ನೀವೇ ಬಗೆಹರಿಸಲು ಪ್ರಯತ್ನಿಸಿ, ನಿಮ್ಮ ಕೈ ಮೀರುವಂತೆ ಕಂಡರೆ ತಕ್ಷಣವೆ ಪೊಲೀಸ್ ಠಾಣೆಗೆ ತಿಳಿಸಿರಿ.ಇದರಿಂದ ಅಹಿತಕರ ಘಟನೆ ನಡೆಯುವ ಪೂರ್ವದಲ್ಲಿಯೇ ತಡೆಯಬಹುದು ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಇಲ್ಲಿನ ಹಿರಿಯರು ನೀಡುತ್ತಿರುವಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದರು.ಸಹಕಾರ ಅಮೋಘವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಹಬ್ಬಗಳನ್ನು ಆಚರಿಸುವುದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಬ್ಬವನ್ನು ಶಾಂತಿ ರೀತಿಯಿಂದ ಆಚರಣೆ ಮಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಿಸಿ ಕ್ಯಾಮರಾಗಳನ್ನು ಹಾಕಿಸುವಂತೆ ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು, ಪೋಲಿಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಿದಾಗ ಮಾತ್ರ ಅಪರಾಧ ತಡೆಯಲು ಸಾಧ್ಯ.ಇದನ್ನು ಮುನ್ನಡೆಸಿಕೊಂಡು ಹೋಗುವುದು ಸಹ ನಮ್ಮ ಜವಾಬ್ದಾರಿ ಎಂದರು. ನಂತರ ಮಾತನಾಡಿದ ದಳಪತಿ ಹನಮಗೌಡ ಪೊಲೀಸ್ ಪಾಟೀಲ್ ನಮ್ಮೂರಿನಲ್ಲಿ ಪ್ರತಿವರ್ಷ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಸಹೋದರ ರಂತೆ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದೇವೆ ಕುದರಿಮೋತಿ ಮೊಹರಂ ಹಬ್ಬ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಇದೆ ಮತ್ತು ಕುದರಿಮೋತಿ ಸುತ್ತಮುತ್ತಲಿನ ಎಲ್ಲಾ ಗ್ರಾಮದರು ಅಣ್ಣ ತಮ್ಮ ನಂತೆ ಈ ಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ನಮ್ಮೂರಿನ ಗುರು ಹಿರಿಯರು ಯುವಕರು ಸಂಪೂರ್ಣ ಪೊಲೀಸ್ ಇಲಾಖೆ ಜೊತೆಗೆ ಸಹಕಾರ ಕೊಡುತ್ತಾರೆ ಎಂದು ಹೇಳಿದರು,ನಂತರ ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಮಂಜುನಾಥ ಗಟ್ಟೆಪ್ಪನವರ್ ನೇರವಹಿಸಿದರು,ಈ ಸಂದರ್ಭದಲ್ಲಿ ಯಲಬುರ್ಗಾ ಸಿಪಿಐ ಮೌನೇಶ ಮಾಲಿಪಾಟೀಲ್, ಬೇವೂರ ಪೊಲೀಸ್ ಠಾಣೆ ಪಿಎಸ್ಐ ಪ್ರಶಾಂತ, ಗ್ರಾಮ ಪಂಚಾಯತಿ ಅಧ್ಯಕ್ಷೆ ಫರೀದಾಬೇಗಂ ತಂಬಾಕದಾರ,ಗ್ರಾಮದ ಮುಖಂಡರಾದ ಬಸವಂತಪ್ಪ ದೊಡ್ಡಮನಿ, ಸುಭಾಷ್ ಈಡಿಗೇರ,ಮಾಹಾಂತಪ್ಪ ಸಿಡ್ನಳ್ಳಿ,ಅಮರೇಶ ತಲ್ಲೂರು, ಗ್ರಾ.ಪಂ.ಸದಸ್ಯರಾದ ಶರಣಯ್ಯ ಜಂಗಮೂರು,ಮಂಜುನಾಥ ಸಜ್ಜನ್, ರವಿ ಕಟಗಿ,ಮಾಬುಸಾಬ ಮಕಾಂದರ್, ವಿಜಯಕುಮಾರ ದಾಸರ್,ಪಂಪಾಪತಿ ವಣಗೇರಿ,ದ್ಯಾಮಣ್ಣ ಚೌಡ್ಕಿ, ಪಿಡಿಓ ಪರಶುರಾಮ ನಾಯಕ,,ಸೇರಿದಂತೆ ಇತರರು ಇದ್ದರು,
