ಶ್ರದ್ಧೆ ಭಕ್ತಿಯಿಂದ ಜರುಗಿದ ಗುಂಡೂರು ಗ್ರಾಮ ದೇವತೆ ಶ್ರೀ ತಾಯಮ್ಮ ಜಾತ್ರಾ ಮಹೋತ್ಸವ….

ಶ್ರದ್ಧೆ ಭಕ್ತಿಯಿಂದ ಜರುಗಿದ ಗುಂಡೂರು ಗ್ರಾಮ ದೇವತೆ ಶ್ರೀ ತಾಯಮ್ಮ ಜಾತ್ರಾ ಮಹೋತ್ಸವ….

ಗಂಗಾವತಿ. ಕಾರ್ಟಾಗಿ. ಸಮೀಪದ ಗುಂಡೂರು ಗ್ರಾಮದ. ಗ್ರಾಮದೇವತೆ ಶ್ರೀ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಪಂಡಿತ್ ಶ್ರೀ ರುದ್ರ ಮುನಿ ಮಹಾಸ್ವಾಮಿಗಳವರಿಂದ ಮಹಾ ಸಂಕಲ್ಪ 111 ದಂಪತಿಗಳಿಂದ 111 ಶಂಖುಗಳಿಂದ ಶ್ರೀ ತಾಯಮ್ಮ ದೇವಿ ಅವರಿಗೆ ಜಲಾಭಿಷೇಕ ಪಂಚಾಮೃತ ಅಭಿಷೇಕ ಕ್ಷೀರಭಿಷೇಕ. ಕಳಸಾಹರೋಹಣ. ಪಲ್ಲಕ್ಕಿ ಉತ್ಸವ ಸೇರಿದಂತೆ ಕುಂಕುಮಾರ್ಚನೆ ಲಲಿತ ಸಹಸ್ರ ಪಾರಾಯಣ. ಅಷ್ಟೋತ್ತರ ಪಾರಾಯಣ ಸೇರಿದಂತೆ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಆಯೋಜಿಸಲಾಯಿತು.. ಈ ಸಂದರ್ಭದಲ್ಲಿ ಶ್ರೀ ರಾಮನಗರ. ಗಂಗಾವತಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ತಮ್ಮ ಹರಕೆಗಳನ್ನು ಸಮರ್ಪಿಸಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಮಾತನಾಡಿ ಅತ್ಯಂತ ಶಕ್ತಿ ದೇವತೆಯಾದ ಶ್ರೀ ತಾಯಮ್ಮ ದೇವಿ ಅನುಗ್ರಹದಿಂದ ಗ್ರಾಮದಲ್ಲಿ ಭಕ್ತಾದಿಗಳು ಪ್ರೀತಿ ವಿಶ್ವಾಸ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಹ ಬಾಳ್ವೆ ನಡೆಸುತ್ತಿದ್ದಾರೆ. ವ್ಯಕ್ತಿ ಸನ್ಮಾರ್ಗದಲ್ಲಿ ನಡೆಯಲು ಧಾರ್ಮಿಕ ಆಚರಣೆಗಳು ಅತ್ಯಂತ ಮಹತ್ವದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳೆಯರು ಉಡಿ ತುಂಬುವಿಕೆ ಭಜನೆ ಮತ್ತೆ ತರ ಪೂಜಾ ಕಾರ್ಯಕ್ರಮಗಳು ಜಗಿದವು ದೇವಸ್ಥಾನ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಗ್ರಾಮದ ಮುಖಂಡರು ಯುವಕರು ಸರ್ವರ ಸಹಕಾರದಿಂದ ಜಾತ್ರೆಗೆ ಬಂದ ಭಕ್ತರಿಗೆ ಅನ್ನ ಸಂತ ರ್ಪಣೆ ಅಚ್ಚುಕಟ್ಟಾಗಿ ನಡೆಸಲಾಯಿತು.

Leave a Reply

Your email address will not be published. Required fields are marked *