ಭಕ್ತಿ ಪ್ರದಾನ ವಿಶ್ವರೂಪಿಣಿ ಶ್ರೀ ವಾಸವಿ ಚಲನಚಿತ್ರ ವೀಕ್ಷಿಸಲು ಆರ್ಯವೈಶ್ಯ ಬಾಂಧವರಿಂದ ಕರೆ …

ಭಕ್ತಿ ಪ್ರದಾನ ವಿಶ್ವರೂಪಿಣಿ ಶ್ರೀ ವಾಸವಿ ಚಲನಚಿತ್ರ ವೀಕ್ಷಿಸಲು ಆರ್ಯವೈಶ್ಯ ಬಾಂಧವರಿಂದ ಕರೆ …

ಬಳ್ಳಾರಿ / ಕಂಪ್ಲಿ : ಹೌದು, ಪ್ರದಾನ ವಿಶ್ವರೂಪಿಣಿ ಶ್ರೀ ವಾಸವಿ ಚಲನಚಿತ್ರವು ಕರ್ನಾಟಕದಾದ್ಯಂತ ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಕಂಪ್ಲಿ ತಾಲೂಕು ಭಾಗದ ವಾಸವಿ ಸಂಘಗಳು ಮತ್ತು ಆರ್ಯ ವೈಶ್ಯ ಸಮಾಜದ ವತಿಯಿಂದ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ವೈಶ್ಯ ಸಮಾಜದವರು ತಿಳಿಸಿದರು. ಅವರು ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದು ಆರ್ಯವೈಶ್ಯ ಕುಲದ ಮಾತೆಯಾದ ಶ್ರೀವಾಸವಿ ಕನ್ಯಕ ಪರಮೇಶ್ವರಿಯ ಜೀವನ ಚರಿತ್ರೆಯನ್ನು ಆಧರಿಸಿದ ಭಕ್ತಿ ಪ್ರಧಾನ ಮತ್ತು ಪೌರಾಣಿಕ ಚಿತ್ರವಾಗಿದೆ. ಈ ಚಿತ್ರವನ್ನು ಪರಾತ್ಪಾರ್ ಫಿಲಂ ಲಾಂಛನದಲ್ಲಿ ನಿರ್ಮಿಸಲಾಗಿದ್ದು, ಬಿ.ಎಂ ಪ್ರಸಾದ್ ಅವರು ನಿರ್ದೇಶಿಸಿದ್ದಾರೆ ಎಂದು ತಿಳಿಸಿದರು. ವಿವರಗಳು ಇಲ್ಲಿವೆ:ಸಾಮೂಹಿಕ ವೀಕ್ಷಣೆ: ಕಂಪ್ಲಿ ಪಟ್ಟಣದಲ್ಲಿ ಆರ್ಯ ವೈಶ್ಯ ಸಮುದಾಯದ ಮುಖಂಡರು ಮತ್ತು ವಾಸವಿ ಸಂಘಗಳ ಪದಾಧಿಕಾರಿಗಳು ಒಗ್ಗೂಡಿ ಚಿತ್ರಮಂದಿರಗಳಲ್ಲಿ ವಿಶೇಷ ಶೋಗಳನ್ನು ಏರ್ಪಡಿಸುವ ಮೂಲಕ ಸಮುದಾಯದ ಬಾಂಧವ್ಯವನ್ನು ವೃದ್ಧಿಸುತ್ತಿದ್ದಾರೆ.ಕಂಪ್ಲಿಯ ಪ್ರಮುಖ ಚಿತ್ರಮಂದಿರವಾದ ಚಂದ್ರಕಲಾ ಚಿತ್ರಮಂದಿರದಲ್ಲಿ 4 ನೇ ಜನವರಿ 26 ಭಾನುವಾರ ಬೆಳ್ಳಿಗೆ 11:ಕ್ಕೆ ಮತ್ತು 6 ನೇ ಜನವರಿ 26 ಮಂಗಳವಾರ ರಾತ್ರಿ 9 ಕ್ಕೆ ರಂದು ಆರ್ಯವೈಶ್ಯ ಸಮುದಾಯದ ಮುಖಂಡರು ಮತ್ತು ವಾಸವಿ ಸಂಘಗಳ ಸದಸ್ಯರು ಒಗ್ಗೂಡಿ ವಿಶೇಷ ಶೋಗಳನ್ನು ಏರ್ಪಡಿಸಿದ್ದಾರೆ. ಸರ್ವರು ಕುಟುಂಬ ಸಮೇತರಾಗಿ ಬಂದು ಸಿನಿಮಾ ನೋಡಲು ಸಂಘದ ಪದಾಧಿಕಾರಿಗಳು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಧರ್ಮಕರ್ತರು ವೈ. ಚಂದ್ರಮೋಹನ ಶೆಟ್ಟಿ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಡಿ.ವಿ. ಸುಬ್ಬರಾವ್, ವಾಸವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಿ. ಶ್ರೀಧರ ಶೆಟ್ಟಿ, ವಾಸವಿ ಅಭಿವೃದ್ಧಿ ಸಂಘದ ಅಧ್ಯಕ್ಷ ಜಿ. ಬಿ ಕೋಟೇಶ್ವರರಾವ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಟಿ. ರಾಮಾದೇವಿ, ವಾಸವಿ ಯುವಜನ ಸಂಘ ಅಧ್ಯಕ್ಷ ಡಿ ಮಂಜೇಶ ಹಾಗೂ ಸಮಾಜ ಬಾಂಧವರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *