ಶ್ರೀ ಶಾರದಾ ವಿದ್ಯಾ ಸಂಸ್ಥೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ….

ಗಂಗಾವತಿ : ವಿದ್ಯಾನಗರ ಶ್ರೀ ಶಾರದಾ ವಿದ್ಯಾ ಸಂಸ್ಥೆ, ಶ್ರೀ ಗೊಟ್ಟಿಪಾಟಿ ವೆಂಕಟರತ್ನಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ತಾಯಿ ಭುವನೇಶ್ವರಿದೇವಿಯ ಪೂಜೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್ ಪ್ರಸಾದರವರು ಮಾತನಾಡಿ ಕನ್ನಡಾಂಬೆಯು ಎಲ್ಲಾ ಭಾಷಿಗರಿಗೂ ಜಾತಿ ಮತ ಭೇದವಿಲ್ಲದೆ ಆಶ್ರಯವನ್ನು ನೀಡಿರುತ್ತಾಳೆ ಈ ತಾಯಿಯ ಋಣವನ್ನು ನಾವು ತೀರಿಸಲು ಸಾಧ್ಯವಿಲ್ಲ ಎಂದು ಮನದಾಳದ ಮಾತನ್ನು ಹೇಳಿರುತ್ತಾರೆ.ಸಂಸ್ಥೆಯ ಸದಸ್ಯರಾದ ಗೊಟ್ಟಿಪಾಟಿ ರವಿಕುಮಾರ ರವರು ಮಾತನಾಡಿ ಈ ನಾಡಿನಲ್ಲಿ ಹುಟ್ಟಿರುವುದು ನಮ್ಮ ಪುಣ್ಯ, ಸಂಸ್ಕೃತಿ ಕಲೆ ಸಾಹಿತ್ಯಕ್ಕೆ ಹೆಸರಾಗಿರುವ ಈ ನಮ್ಮ ಕನ್ನಡ ನಾಡು ಮುಂದಿನ ಜನ್ಮದಲ್ಲಿ ಸಹ ಈ ನಾಡಿನಲ್ಲಿ ಜನಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರು ವಿಶ್ವನಾಥರಾಜು, ಕಾಂತಾರಾವ್, ಕಮ್ಮ ಕೋಟೆಶ್ವರರಾವ, ಎಸ್. ವೆಂಕಟೇಶ್ವರರಾವ, ಟಿ.ವಿ.ಸುಬ್ಬರಾವ್ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀ ವೈ ಸುದರ್ಶನ್‌ರಾವ್ ಹಾಗೂ ಶೈಕ್ಷಣಿಕ ಪ್ರಗತಿ ಪರಿಶೀಲಕರಾದ ಶ್ರೀ ಪಂಪನಗೌಡ, ಮುಖ್ಯೋಪಾಧ್ಯಾಯನಿ ಉದಯಶ್ರೀ, ಶಿಕ್ಷಕವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

