ರಾಮಮೂರ್ತಿ, ಇಂಗಳಗಿ ನಾಗರಾಜ್, ದಂಡೀನ್, ವಿಷ್ಣುತೀರ್ಥ, ರೆಡ್ಡಿಗೆಶ್ರೀ ಜಗನ್ನಾಥ ವಿಠಲ ಪ್ರಶಸ್ತಿ ಪ್ರದಾನ: ದಾರವಾಹಿ ಚಿತ್ರೀಕರಣಕ್ಕೆ ಭರದ ಸಿದ್ಧತೆ : ಹವಾಲ್ದಾರ್..

ಗಂಗಾವತಿ: ಮಾನ್ವಿ ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಆಚರಿಸಲಾದ ಶ್ರೀ ಜಗನ್ನಾಥ ದಾಸರ ಪೂರ್ವಾರಾಧನೆ, ಸಾಧಕರಿಗೆ ಶ್ರೀ ಜಗನ್ನಾಥ ವಿಠಲ ಪ್ರಶಸ್ತಿ ಪ್ರಧಾನ ಹಾಗು ಮಧುಸೂದನ ಹವಾಲ್ದಾರ್ ನಿರ್ದೇಶನ, ನಿರ್ಮಾಣದ. ಶ್ರೀ ಜಗನ್ನಾಥ ದಾಸರು ಭಾಗ ೦೨ ಚಲನಚಿತ್ರದ ಧ್ವನಿ ಸುರಳಿ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು.

ಶ್ರೀ ಜಗನ್ನಾಥ ದಾಸರು ಭಾಗ -೦೨ ಚಲನಚಿತ್ರದ ಧ್ವನಿ ಸುರಳಿ ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಚಿತ್ರದ ನಿರ್ಮಾಪಕರು, ನಿರ್ದೇಶಕರಾದ ಮದುಸೂಧನ ಹವಲ್ದಾರ್ ಅವರು, ಕಳೆದ ನಾಲ್ಕಾರು ವರ್ಷಗಳಿಂದಲೂ ದಾಸರು ಚಿತ್ರಗಳನ್ನು ಚಿತ್ರೀಕರಿಸಿ ಅವರ ಜೀವನ ಚರಿತ್ರೆ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದೇನೆ ಅನೇಕರು ನನ್ನ ಪ್ರಯತ್ನಕ್ಕೆ ತನುಮನಧನ ನೀಡಿ ಸಹಕರಿಸಿದ್ದಾರೆ.

ಹಲವಾರು ಟಿವಿ ಚಾನಲ್ಲುಗಳಿಂದಲೂ ಧಾರವಾಹಿ ನಿರ್ಮಿಸುವಂತೆ ಒತ್ತಡಗಳು ಹೆಚ್ಚಿದ ಹಿನ್ನಲೆಯಲ್ಲಿ ಶ್ರೀ ಜಗನ್ನಾಥ ದಾಸರು ದಾರವಾಹಿ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದೇನೆ. ಇನ್ನು ಕೆಲವೆ ತಿಂಗಳಲ್ಲಿ ಶ್ರೀ ಜಗನ್ನಾಥ ದಾಸರು ಭಾಗ ೦೨ ಚಲನಚಿತ್ರವೂ ಬೆಳ್ಳಿಪರದೆಯ ಮೇಲೆ ಮೂಡಿ ಬರಲಿದೆ, ಚಿತ್ರನೋಡಿ ಯಶಸ್ವಿಗೊಳಿಸಿ ಎಂದ ಅವರು, ಮುಂದಿನ ಹತ್ತು ವರ್ಷಗಳಲ್ಲಿ ಕನ್ನಡ ನಾಡಿನ ಅನೇಕ ದಾಸರು, ಶರಣರು, ಸಂತರ ಚಿತ್ರಗಳನ್ನು ನಿರ್ಮಿಸುವ ಉತ್ಸಾಹ ಹೊಂದಿದ್ದೇನೆ. ಅಲ್ಲದೆ ವಾಸವಿ ಮಹಾತ್ಮೆ ಚಿತ್ರಕ್ಕೂ ಇನ್ನು ಕಥೆ ಸಿದ್ಧಗೊಳಿಸಲಿದ್ದು, ಹೊಸ ಮುಖಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಸದುದ್ದೇಶ ಹೊಂದಿದ್ದು ಎಲ್ಲರು ಜೊತೆಗೂಡಿ ಹೆಜ್ಜೆ ಹಾಕೋಣ ಎಂದು ತಿಳಿದರು.

ಶ್ರೀ ಜಗನ್ನಾಥ ವಿಠಲ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವಾಸುದೇವ ಅಗ್ನಿಹೊತ್ರಿಯವರು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ದಾಸರ ಕುರಿತಾಗಿ ಹೆಚ್ಚಿನ ಅಧ್ಯಾಯನ ನಡೆಯಬೇಕಿದೆ, ದಾಸರು ನಡೆದಾಡಿದ ಮಾನ್ವಿ ಪ್ರದೇಶವನ್ನು ಭಕ್ತಿಯ ಪ್ರವಾಸಿ ತಾಣವನ್ನಾಗಿ ಬದಲಿಸುವ ನಿಟ್ಟಿನಲ್ಲಿ ಎಲ್ಲರು ಪ್ರಯತ್ನಿಸೋಣ ಎಂದರು.ಈ ಸಂದರ್ಭದಲ್ಲಿ ಹಿರಿಯ ಸಾಧಕರಾದ ಡಾ.ಜಯಲಕ್ಮೀ ಮಂಗಳ ಮೂರ್ತಿ, ಡಾ.ಶೇಷಗಿರಿದಾಸ ರಾಯಚೂರು, ಸಂಗೀತ ಭಾರತಿ ರೋವಾರಿ ಹೆಚ್.ಪಿ. ಕಲ್ಲಂಭಟ್, ವಿವಿಧ ಸೇವೆಯಲ್ಲಿ ತೊಡಗಿದ ಮುತ್ತುರಾಜ್ ಶೆಟ್ಟಿ ಮಾನ್ವಿ, ಮುದ್ದು ರಂಗರಾವ್ ಮುತಾಲಿಕ್ ಮಾನ್ವಿ, ನರಸಿಂಗ್ರಾವ್ ಕುಲಕರ್ಣಿ, ರಮೇಶ್ ದೇಶಪಾಂಡೆ, ಕಲಾವಿದರಾದ ವಿಷ್ಣುತೀಥ ಜೋಷಿ, ಶರದದಂಡೀನ ವಕೀಲರು, ರಾಮಮೂರ್ತಿ ನವಲಿ, ಪುರುಷೋತ್ತಮ ರೆಡ್ಡಿ ಹಾಗು ನಾಗರಾಜ್ ಇಂಗಳಗಿ ಅನೇಕರಿಗೆ ಶ್ರೀ ಜಗನ್ನಾಥ ವಿಠಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದಕ್ಕು ಮುನ್ನಾ ಶ್ರೀ ಜಗನ್ನಾಥ ದಾಸರ ಪೂರ್ವಾರಾಧನೆ ಪ್ರಯುಕ್ತ ಅನೇಕ ದಾಸರ ಹಾಡುಗಳನ್ನು ಹಾಡುವ ಮೂಲಕ ಮಹಿಳೆಯರು ದಾಸರನ್ನು ಸ್ತುತಿಸಿದರು. ಶ್ರೀ ಜಗನ್ನಾಥ ದಾಸರು ಭಾಗ ೦೨ ಚಲನಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. ನಿರ್ದೇಶಕ ಡಾ. ಮಧುಸೂದನ ಹವಾಲ್ದಾರರು ಹಾಗು ಡಾ.ಶೇಷಗಿರಿ ದಾಸರು ರಾಯಚೂರು ಇವರ ಸಂಗೀತ ನಿರ್ದೇಶನದೊಂದಿಗೆ ಮೂಡಿ ಬಂದ ಹಾಡುಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

