ಪತ್ರಕರ್ತ ಎಂಜೆಎಸ್, ಪರಿಸರ ಪ್ರೇಮಿ ಸಿಂಧೂಗೆ ಭಾವೈಕ್ಯತಾ ಪುರಸ್ಕಾರಹಬ್ಬ-ಹರಿದಿನ, ಸಂಸ್ಕೃತಿ, ಸಂಸ್ಕಾರಗಳನ್ನು ಆಚರಿಸಬೇಕು: ಹೆಬ್ಬಾಳ ಶ್ರೀ..

ಪತ್ರಕರ್ತ ಎಂಜೆಎಸ್, ಪರಿಸರ ಪ್ರೇಮಿ ಸಿಂಧೂಗೆ ಭಾವೈಕ್ಯತಾ ಪುರಸ್ಕಾರಹಬ್ಬ-ಹರಿದಿನ, ಸಂಸ್ಕೃತಿ, ಸಂಸ್ಕಾರಗಳನ್ನು ಆಚರಿಸಬೇಕು: ಹೆಬ್ಬಾಳ ಶ್ರೀ..

ಗಂಗಾವತಿ ಸೆ.2ಭಾರತೀಯರ ಸಂಸ್ಕೃತಿ ಮತ್ತು ಪರಂಪರೆ ಉನ್ನತವಾಗಿದ್ದು, ಪ್ರತಿಯೊಂದು ಹಬ್ಬ-ಹರಿದಿನಗಳಿಗೆ ತನ್ನದೇ ಆದ ಮಹತ್ವವಿದೆ. ಹೀಗಾಗಿ ಎಲ್ಲಾ ಜಾತಿ-ಜನಾಂಗದವರೊAದಿಗೆ ಸೌಹಾರ್ದವಾಗಿ ಹಬ್ಬಗಳನ್ನು ಆಚರಿಸಿ, ಸಂಸ್ಕೃತಿ ಪರಂಪರೆಗಳನ್ನು ಕಾಪಾಡಿಕೊಂಡು ಹೋಗಬೇಕು ಎಂದು ಹೆಬ್ಬಾಳದ ಬೋಳಾಡಿ ಬಸವೇಶ್ವರ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಹೇಳಿದರು.ನಗರದ ವಾರ್ಡ್ ನಂಬರ್ ೧೫ರ ಇಸ್ಲಾಂಪುರದ ಬಸವೇಶ್ವರ ಆಯಿಲ್‌ಮಿಲ್ ಸಮೀಪ ಭಾವೈಕ್ಯತಾ ಗಜಾನನ ಸಮಿತಿ ಹಮ್ಮಿಕೊಂಡಿದ್ದ ೪ನೇ ವರ್ಷದ ವೇದಿಕೆ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಆನೆಗೊಂದಿ ಡಿ.ಸಿಂಧೂ ಹಾಗೂ ಪತ್ರಕರ್ತರಾದ ಶ್ರೀನಿವಾಸ ಎಂ.ಜೆ. ಮತ್ತು ಹರೀಶ್‌ಗೆ ಭಾವೈಕ್ಯತಾ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.ಹಿಂದು ಧರ್ಮದಲ್ಲಿನ ಹಬ್ಬಗಳ ಆಚರಣೆಯ ಉದ್ದೇಶವೇ ಎಲ್ಲರನ್ನೂ ಒಳಗೊಳ್ಳುವುದಾಗಿದೆ. ಹೀಗಾಗಿ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಪಾಲಿಸಿಕೊಂಡ ಹೋಗುವ ನಿಟ್ಟಿನಲ್ಲಿ ಎಲ್ಲ ಧರ್ಮಿಯರೊಂದಿಗೆ ಸೇರಿ ಹಬ್ಬ ಆಚರಿಸಬೇಕು ಎಂದು ಕರೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಸಂಚಾಲಕ ಆನಂದ್ ಅಕ್ಕಿ, ಕಳೆದ ನಾಲ್ಕು ವರ್ಷದಿಂದ ಭಾವೈಕ್ಯತಾ ಗಜಾನನ ವೇದಿಕೆಯಿಂದ ಗಣೇಶೋತ್ಸವ ಮಾಡುತ್ತಿದ್ದೇವೆ. ಮುಖ್ಯವಾಗಿ ಈ ಉತ್ಸವಕ್ಕೆ ದಾದಾಪೀರ ಎಂಬ ಯುವಕ ಮುಂದೆ ನಿಂತು ಎಲ್ಲಾ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದ.ಗಣೇಶನನ್ನು ಮೆರವಣಿಗೆ ಮೂಲಕ ಕರೆತರುವುದರಿಂದ ಹಿಡಿದು, ನಿಮ್ಮಜ್ಜನದ ವರೆಗೂ ತಾನೆ ಮುಂದೆ ನಿಂತು ಎಲ್ಲವನ್ನು ಮಾಡುತ್ತಿದ್ದ. ಆದರೆ ಕಳೆದ ಒಂದುವರೆ ತಿಂಗಳ ಹಿಂದಷ್ಟೆ ಹೃದಯಾಘಾತಕ್ಕೆ ಸಾವನ್ನಪ್ಪಿದ್ದಾರೆ. ಆತನ ಸ್ಥಾನವನ್ನು ಅವರ ಸಹೋದರ ಮೊಹಮ್ಮದ್ ಗೌಸ್ ತುಂಬಿದ್ದು, ನಮ್ಮೊಂದಿಗೆ ಸಹಕಾರ ನೀಡುತ್ತಿದ್ದಾರೆ.ಅಲ್ಲದೇ ಐದನೇ ದಿನದ ಅನ್ನಸಂತರ್ಪಣೆಯನ್ನು ಮುಸ್ಲಿಂ ಸಮುದಾಯ ಪ್ರಮುಖರೇ ವಹಿಸಿಕೊಂಡಿರುವುದು ವಿಶೇಷ, ಇಲ್ಲಿ ಧರ್ಮ, ಜಾತಿಗಳ ಗೊಡವೆ ಇಲ್ಲ. ಎಲ್ಲರೂ ಒಂದಾಗಿ ಹಬ್ಬ ಆಚರಿಸುತ್ತಿದ್ದೇವೆ ಎಂದರು. ಹಿರಿಯ ಮುಖಂಡ ಶಾಂತಯ್ಯ ಕಂಬಾಳಿಮಠ, ಪತ್ರಕರ್ತ ಎಂ.ಜೆ. ಶ್ರೀನಿವಾಸ ಮಾತನಾಡಿದರು.ವೇದಿಕೆಯಲ್ಲಿ ಹಿಯರ ಮುಖಂಡರಾದ ಕೊಟ್ರಪ್ಪ ಅಕ್ಕಿ, ಜಗದೀಶಪ್ಪ ಸಿಂಗನಾಳ, ಹರೀಶ್ ಕುಲಕರ್ಣಿ ಸೇರಿದಂತೆ ಇತರರಿದ್ದರು. ಅಶ್ವಿನಿ ಅಕ್ಕಿ ಸ್ವಾಗತಿಸಿದರು. ಅಭಿನವ ಅಕ್ಕಿ ನಿರೂಪಿಸಿದರು. ಬಳಿಕ ಹೊಸಪೇಟೆಯ ಯುವ ಗಾಯಕ ಭರತ್ ಹಾಗೂ ತಂಡದ ಸದಸ್ಯರು ಹಾಡುಗಳ ಮೂಲಕ ನೆರೆದವರನ್ನು ಮೋಡಿ ಮಾಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಶೇಖರ್ ಅಕ್ಕಿ, ಪ್ರಕಾಶ್ ಅಕ್ಕಿ, ವಿಶ್ವನಾಥ ಅಕ್ಕಿ, ಮಲ್ಲಿಕಾರ್ಜುನ ಅಕ್ಕಿ, ಮಹಾಂತೇಶ ಗಲಗಲಿ, ರಮೇಶ ಬಾಗಲಕೋಟೆ, ಶರಣಪ್ಪ ಸಿದ್ರಾಂಪುರ, ಆದೇಶ ಸುಳೇಕಲ್, ರಾಹುಲ್ ಶಿಳ್ಳೇದ್, ಕಾರ್ತಿಕ್, ಗಿರೀಶ್ ಹಿರೇಮಠ, ಸುಮಾ ಮಸ್ಕಿ, ಶೋಭಾ ಗಲಗಲಿ, ಶಾರದಾ, ವಿಜಯಲಕ್ಷ್ಮಿ. ಮಂಜುನಾಥ ತಂಬ್ರಳ್ಳಿ ಇತರರಿದ್ದರು.

Leave a Reply

Your email address will not be published. Required fields are marked *