ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪ ಅಳವಡಿಸುವಂತೆ ಮ್ಯಾಗಳಮನಿ ಮನವಿ…

ಗಂಗಾವತಿ: ದಿನಾಂಕ2/7/2025 ಇಂದು ನಗರದಲ್ಲಿ ವಿದ್ಯುತ್ ಇಲ್ಲದೆ ನಗರವು ರಾತ್ರಿಯಾಗುತ್ತಲ್ಲೇ ಕತ್ತಲದಿಂದ ಕೂಡಿದೆ.ಅಪಘಾತಗಳು ನಡೆಯುತ್ತಲಿವೆ. ಸಂಚಾರಿಸಲು ಜನತೆಗೆ ತೊಂದರೆಯಾಗಿರುತ್ತದೆ.ನಾವು ಗ್ರಾಮೀಣ ಪ್ರದೇಶಕ್ಕಿಂತ ಬಹಳ ಹಿಂದುಳಿದಿದ್ದೇವೆ ಎಂದು ಭಾಸವಾಗುತ್ತದೆ. ಅನುದಾನ ಇದ್ದರೂ ಸರಿಯಾಗಿ ಬಳಸಿಕೊಂಡು ಬೆಳಕು ನೀಡಲು ಸಾಧ್ಯವಾಗುತ್ತಿಲ್ಲ ವಿದ್ಯುತ್ ನಲ್ಲಿಯೂ ಧರ್ಮ ಬೇರೆಸುತ್ತಿರುವದು ತುಂಬಾ ನಾಚಿಗೆಗೇಡಿನ ವಿಷಯವಾಗಿದೆ. ಈಗಾಗಲೇ ಜುಲೈನಗರದಲ್ಲಿ ಇಂತಹ ವಾತಾವರಣ ನಿರ್ಮಾಣವಾಗಿತ್ತು. ನಮ್ಮದು ಸರ್ವ ಜನಾಂಗದ ತೋಟವಿದ್ದಂತೆ. ಇಲ್ಲಿ ಜಾತಿ, ಧರ್ಮ ಸಂಘರ್ಷಕ್ಕೆ ಕ್ಕೆ ಅವಕಾಶವಿಲ್ಲಾ ಹಾಗೂ ಅವಕಾಶ ನೀಡಕೂಡದು.ದಾರಿಗೆ ದೀಪ ವಾಗಬೇಕೇ ವಿನಃ ಬಾಳಿಗೆ ಕತ್ತಲಾಗಬಾರದು. ಆದ್ದರಿಂದ ಎಲ್ಲಾ ಜನರು ಮೆಚ್ಚುವ ಹಾಗೂ ಒಪ್ಪುವ ರೀತಿಯಲ್ಲಿ ದೀಪ ಕಂಬಗಳ ವಿನ್ಯಾಸ ಮಾಡಿ ಬೇಗನೆ ನಗರದಲ್ಲಿ ಬೆಳಕು ನೀಡಲು ಅಧಿಕಾರಿ ವರ್ಗ ಹಾಗೂ ಆಡಳಿತ ಮಂಡಳಿ ಮುಂದಾಗಬೇಕೆಂದು.ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಹೀರಾಬಾಯಿ ನಾಗರಾಜ ಸಿಂಗ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚೆನ್ನದಾಸರು, ಹಾಲಪ್ಪ ಇತರರು ಇದ್ದರು.

