ಪತ್ರಕರ್ತ ಹರೀಶ ಕುಲಕರ್ಣಿಗೆ ‘ಭಾವೈಕ್ಯತಾ ಸೇವಾ ರತ್ನ’ಪ್ರಶಸ್ತಿಹೆಬ್ಬಾಳ್ ಶ್ರೀಗಳ ಆಶೀರ್ವಾದ: ಪ್ರಶಸ್ತಿಗಳು ಕಾರ್ಯಕ್ಕೆ ಪ್ರೇರಣೆ..

ಗಂಗಾವತಿ. ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿದರೆ ಅವರಿಗೆ ಕಾರ್ಯದಲ್ಲಿ ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಭಾವೈಕ್ಯತಾ ಗಜಾನನ ಸಮಿತಿಯವರು ಪತ್ರಕರ್ತರನ್ನು ಸೇರಿದಂತೆ ಹಲವು ಸಾಧಕರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೆಬ್ಬಾಳ್ ಬೃಹನ್ಮದ ನಾಗಭೂಷಣ ಮಹಾಸ್ವಾಮಿಗಳು ಹೇಳಿದರು. ನಗರದ ಗಂಜ್ ಪ್ರದೇಶದಲ್ಲಿನ ಭಾವೈಕ್ಯತಾ ಗಜಾನನ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಹರೀಶ ಕುಲಕರ್ಣಿ, ಶ್ರೀನಿವಾಸ ಎಂ.ಜೆ ಮತ್ತಿತರಿಗೆ ಪ್ರಶಸ್ತಿ ನೀಡಿ ಗೌರವಿಸಿ ಅವರು ಮಾತನಾಡಿದರು. ಹಿಂದು ಸಂಪ್ರದಾಯದಲ್ಲಿ ಹಬ್ಬಗಳು ಕೇವಲ ಧಾರ್ಮಿಕತೆಗೆ ಸಿಮೀತವಾಗಿರದೇ ವೈಜ್ಞಾನಿಕ ಹಿನ್ನೆಲೆಯು ಇದೆ. ಸರ್ವರನ್ನು ಒಂದುಗೂಡಿಸಿ ಸೌಹಾರ್ದತೆಯ ಪ್ರತೀಕವಾಗಿವೆ. ಭಾವೈಕ್ಯತಾ ಗಜಾನನ ಸಮಿತಿ ಪ್ರತಿ ವರ್ಷ ವಿಶೇಷ ಕಾರ್ಯಕ್ರಮಕ್ಕೆ ಹಮ್ಮಿಕೊಂಡು ನಾಡಿನ ಸಾಧಕರನ್ನು ಗುರುತಿಸಿ ಗೌರವಿಸಿ ವಿಶೇಷ ಪ್ರಶಸ್ತಿ ನೀಡುತ್ತಾ ಬಂದಿರುವುದು ಉತ್ತಮ ಕಾರ್ಯವಾಗಿದೆ ಎಂದರು. ಸಮಿತಿ ಪ್ರಮುಖ ಆನಂದ ಅಕ್ಕಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ನಮ್ಮ ಭಾವೈಕ್ಯತಾ ಗಣೇಶ ಸಮಿತಿಯಲ್ಲಿ ವಿಶಿಷ್ಟವಾದ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಪ್ರಸಕ್ತ ವರ್ಷದ ಗಣೇಶೋತ್ಸವದಲ್ಲಿ ಇತ್ತೀಚಿಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಶಸ್ತಿಗೆ ಭಾಜನರಾಗಿರುವ ಪತ್ರಕರ್ತರಾದ ಹರೀಶ ಕುಲಕರ್ಣಿ, ಶ್ರೀನಿವಾಸ ಎಂ.ಜೆ, ರಾಷ್ಟ್ರಪತಿ ಪದಕ ಪುರಸ್ಕೃತ ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್, ಪರಿಸರ ಪ್ರೇಮಿ ಬಾಲಕಿ ಸಿಂಧೂ ಆನೆಗೊಂದಿ, ಹೊಸಪೇಟೆಯ ಯುವ ಗಾಯಕ ಭರತ್ ಅವರಿಗೆ ಭಾವೈಕ್ಯತಾ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ನಮಗೆ ಹೆಮ್ಮೆಯಾಗಿದೆ. ನಾಲ್ವರು ಪ್ರಶಸ್ತಿ ಪುರಸ್ಕೃತರು ಯಾವುದೇ ಫಲಾಪೇಕ್ಷೆ ಇಲ್ಲದೇ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಸಾಹಿತಿ ಎಸ್.ಎಂ.ಕಂಬಾಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಜಗದೀಶಪ್ಪ ಸಿಂಗನಾಳ, ಅಕ್ಕಿ ಕೊಟ್ರಪ್ಪ ಇದ್ದರು. ಅಶ್ವಿನಿ ಅಕ್ಕಿ ಸ್ವಾಗತಿಸಿದರು. ಅಭಿನವ ಅಕ್ಕಿ ನಿರ್ವಹಿಸಿದರು. ಸೀತಲ್ ವಂದಿಸಿದರು..

