ಬಳ್ಳಾರಿಯಲ್ಲಿ BUSMA ಸಿಲ್ವರ್ ಜುಬಿಲಿ ಸಂಭ್ರಮಕ್ಕೆ ಭವ್ಯ ಆರಂಭ.

ಬಳ್ಳಾರಿ : ಬಳ್ಳಾರಿ ಅನುದಾನರಹಿತ ಶಾಲಾ ನಿರ್ವಹಣಾ ಸಂಘ (ರಿ.) – BUSMA ಇದರ 25 ವರ್ಷಗಳ ಸಿಲ್ವರ್ ಜುಬಿಲಿ ಸಂಭ್ರಮದ ಮೊದಲ ದಿನದ ಕಾರ್ಯಕ್ರಮ ಇಂದು ಬಳ್ಳಾರಿಯ ಬಸವ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕರ್ನಾಟಕ ಅನುದಾನರಹಿತ ಶಾಲಾ ನಿರ್ವಹಣಾ ಸಂಘ (KAMS) ಮಾನ್ಯ ಗೌರವಾಧ್ಯಕ್ಷರಾದ ಶ್ರೀ ಎಂ.ಎ. ಆನಂದ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಡಿ. ಶಶಿಕುಮಾರ್, ಮಾಜಿ BUDA ಅಧ್ಯಕ್ಷರಾದ ಶ್ರೀ ಎನ್. ಪ್ರತಾಪ್ ರೆಡ್ಡಿ ಅವರು ಉದ್ಘಾಟಿಸಿ ಮಾತನಾಡಿ ಖಾಸಗಿ ಅನುದಾನರಹಿತ ಮತ್ತು ಬಜೆಟ್ ಶಾಲೆಗಳ ಹಿತಕ್ಕಾಗಿ ಸಂಘ ವಹಿಸಿರುವ ಪಾತ್ರವನ್ನು ಶ್ಲಾಘಿಸಿದರು. ಶಾಲಾ ನಿರ್ವಹಣೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಕಾರ್ಯಕ್ರಮದಲ್ಲಿ BUSMA ಅಧ್ಯಕ್ಷರಾದ ಶ್ರೀ ಎನ್. ಮರಿಸ್ವಾಮಿ ರೆಡ್ಡಿ, ಉಪಾಧ್ಯಕ್ಷರಾದ ಶ್ರೀ ಎಂ. ಶ್ರೀನಿವಾಸುಲು, ಖಜಾಂಚಿ ಶ್ರೀ ಪಿ. ರಮ್ಜಾನ್, ಕಾರ್ಯದರ್ಶಿ ಶ್ರೀ ರಿಯಾಜ್ ಎಸ್.ಕೆ., ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಂಘದ ಮುಖಂಡರು, ಬಳ್ಳಾರಿ ತಾಲ್ಲೂಕು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಶ್ರೀ ಚೈತನ್ಯ ಪಿಯು ಕಾಲೇಜಿನ ಅಧ್ಯಕ್ಷರಾದ ಶ್ರೀ ವಿಷ್ಣು, ಹಾಗೂ BUSMA ಸಂಘದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಗಣ್ಯರು BUSMA ಸಂಘದ 25 ವರ್ಷಗಳ ಸೇವಾ ಪಯಣವನ್ನು ಸ್ಮರಿಸಿ, ಖಾಸಗಿ ಅನುದಾನರಹಿತ ಮತ್ತು ಬಜೆಟ್ ಶಾಲೆಗಳ ಹಿತಕ್ಕಾಗಿ ಸಂಘ ವಹಿಸಿರುವ ಪಾತ್ರವನ್ನು ಶ್ಲಾಘಿಸಿದರು. ಶಾಲಾ ನಿರ್ವಹಣೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸಲ್ಲಿಸಬೇಕಾದ ಪ್ರಮುಖ ಬೇಡಿಕೆಗಳು ಮತ್ತು ಪ್ರತಿನಿಧಿಗಳನ್ನು ಸಂಘದ ವತಿಯಿಂದ ಸಲ್ಲಿಸಲಾಯಿತು.ಕಾರ್ಯಕ್ರಮವು ಏಕತೆ, ಬದ್ಧತೆ ಮತ್ತು ಶಿಕ್ಷಣ ನ್ಯಾಯಕ್ಕಾಗಿ ನಿರಂತರ ಹೋರಾಟ ಎಂಬ ಸಂದೇಶದೊಂದಿಗೆ ಸಮಾರೋಪಗೊಂಡಿತು. ಎರಡು ದಿನಗಳ ಸಿಲ್ವರ್ ಜುಬಿಲಿ ಸಂಭ್ರಮಕ್ಕೆ ಇದು ಅರ್ಥಪೂರ್ಣ ಮತ್ತು ಶಕ್ತಿದಾಯಕ ಆರಂಭವಾಗಿತ್ತು.
