ಆ 28ರಂದು : ಸ್ನೇಹಿತರ ಬಳಗದಿಂದ , ಸೀಳು ತುಟಿ , ಸೀಳು ಅಂಗಳ ಉಚಿತ ಶ್ತ್ರ ಚಿಕಿತ್ಸಾ ಶಿಬಿರ

ವಿಜಯನಗರದ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಗಸ್ಟ್ 28ರಂದು , ಸ್ನೇಹಿತರ ಬಳಗದ ವತಿಯಿಂದ ಸಿಳು ತುಟಿ ಅಂಗಳ ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ. ಸಂಬಂಧಿಸಿದಂತೆ ಅಧ್ಯಕ್ಷರಾದ ಬಿ. ಅಬ್ದುಲ್ ರಹಮಾನ್ ರವರು , ಪ್ರಕಟಣೆ ನೀಡಿದ್ದು ಸರ್ವರೂ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದ್ದಾರೆ. ಅವರು ತಮ್ಮ ಸಹೋದರರು , ಹಾಗೂ ಶಾಮಿಲ್ ಮಾಲೀಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾದ , ಬಿ. ಖಾದರ್ ಭಾಷರವರೊಡಗೂಡಿ ಜಂಟಿ ಹೇಳಿಕೆ ನೀಡಿದ್ದಾರೆ. ಅವರು ಪತ್ರಕರ್ತರೊಂದಿಗೆ ಮಾತನಾಡಿ , ಸ್ನೇಹಿತರ ಬಳಗದಿಂದ ಕಳೆದ ಎಂಟು ಒಂಬತ್ತು ವರ್ಷಗಳಿಂದ. ಪ್ರತಿ ವರ್ಷವೂ ಸತತವಾಗಿ ಉಚಿತ ಕಣ್ಣಿನ ಪೊರೆ ಚಿಕಿತ್ಸೆ , ಸೀಳು ತುಟಿ ಅಂಗಳ ಉಚಿತ ಶಸ್ತ್ರಚಿಕಿತ್ಸೆ ಶಿಬಿರ. ಹಿರಿಯನಾಗರೀಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ , ಅನೇಕ ಉಚಿತ ತಪಾಸಣೆ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುತ್ತಿದ್ದು. ಅಂತೆಯೇ ಈ ಭಾರಿಯೂ ಕೂಡ , ತಮ್ಮ ತಡೆಯವರಾದ ದಿವಂಗತ ಬಿ.ಅಬ್ದುಲ್ ರೋಫ್ ಸಾಬ್ ರವರ ಸ್ಮರಣಾರ್ಥವಾಗಿ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ , ಬೆಂಗಳೂರಿನ ಮೋಸಿಸ್ ಐ ಕೇರ್ ಪೌಂಡೇಶನ್. ಮತ್ತು ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯ ಸಹಯೋಗದೊಂದಿಗೆ , ಸ್ನೇಹಿತರ ಬಳಗದ ವತಿಯಿಂದ ಆಗಸ್ಟ್ 28ರಂದು. ” ಸಮಾಜ ಸೇವೆಯಿಂದಲೇ ಆತ್ಮ ತೃಪ್ತಿ ” ಧ್ಯೇಯದೊಂದಿಗೆ , ಸೀಳು ತುಟಿ ಅಂಗಳ ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಏರ್ಪಡಿಸಲಾಗಿದೆ. ಕಾರಣ ಪಟ್ಟಣ ಸೇರಿದಂತೆ ತಾಲೂಕು ನೆರೆ ಹೊರೆಯ ತಾಕೂಕುಗಳ , ಸಾರ್ವಜನಿಕರು ನಾಗರೀಕರು ಸರ್ವರೂ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅವರ ಮೊಬೆೈಲ್ ನಂ , 94486 32445 , ಬಿ.ಅಬ್ದುಲ್ ಖಾದರ್ ಭಾಷ 9449511610 , ಅಬ್ದುಲ್ ವಾಹಿದ್ 97408 36668 , ಜಬ್ಬಾರ್ 7829360539, ಫಯಾಜ್ 8861167344.ರವನ್ನು ಸಂಪರ್ಕಿಸಬಹುದಾಗಿದೆ.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*