ನೈಜ ಪತ್ರಕತ೯ರಿಗೆ ದೊಡ್ಡ ಸವಾಲು ಎದುರಾಗಿದೆ… ಶಿವಾನಂದ ತಗಡೂರು..

ನೈಜ ಪತ್ರಕತ೯ರಿಗೆ ದೊಡ್ಡ ಸವಾಲು ಎದುರಾಗಿದೆ ಶಿವಾನಂದ ತಗಡೂರು..
ಗಂಗಾವತಿ. ಆಧುನಿಕತೆ ಬೆಳೆದಂತೆ ಸೋಷಿಯಲ್ ಮೀಡಿಯಾ ಕೂಡ ಸಾಕಷ್ಟು ಸಕ್ರೀಯವಾಗಿದ್ದು, ವೃತ್ತಿಯ ಬಗ್ಗೆ ಕಾಳಜಿ ಇಲ್ಲದೆ ಇರುವ ಪತ್ರಕತ೯ರು ಸಹ ಹುಟ್ಟಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನೈಜ ಪತ್ರಕತ೯ರಿಗೆ ದೊಡ್ಡ ಮಟ್ಟದ ಸವಾಲು ಎದುರಾಗಿದೆ ಎಂದು ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ನಗರದ ತಾಲೂಕು ಪಂಚಾಯಿತಿ ಆವರಣದ ಮಂಥನ ಸಭಾಂಗಣದಲ್ಲಿ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಪತ್ರಕತ೯ರ ಗ್ರಂಥಾಲಯ ಉದ್ಘಾಟನೆ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸುದ್ದಿಯ ಮಹತ್ವ ಹಾಗೂ ಪತ್ರಕತ೯ರ ವೃತ್ತಿಯ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದೆ ಇರುವ ಸಾಕಷ್ಟು ಜನ ನಕಲಿ ಪತ್ರಕತ೯ರು ಹುಟ್ಟಿಕೊಳ್ಳುತ್ತಿದ್ದಾರೆ. ಅವರ ನಡುವೆಯೇ ಕೆಲಸ ಮಾಡುತ್ತಿರುವ ನೈಜ ಪತ್ರಕತ೯ರಿಗೆ ದೊಡ್ಡ ಮಟ್ಟದ ಸವಾಲುಗಳು ಎದುರಾಗುತ್ತಿವೆ. ನಾನು ಪತ್ರಕತ೯ ಎಂದುಕೊಂಡು ತಿರುಗಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ಇವರಿಂದ ಕೆಟ್ಟ ಪತ್ರಕತ೯ರನ್ನು ನೋಡುವ ಭಾವನೆಗಳು ಬದಲಾವಣೆಯಾಗುತ್ತಿದೆ. ಪತ್ರಕತ೯ರು ಯಾವಾಗಲೂ ಸತ್ಯಕ್ಕೆ ಹತ್ತಿರವಾಗಿರುವ ಸುದ್ದಿಗಳನ್ನು ಬರೆಯಲು ಮುಂದಾಗಬೇಕು. ವೈಯಕ್ತಿಕವಾಗಿ ತೇಜೋವಧೆ ಮಾಡುವುದು, ನಿಂಧನೆ ಮಾಡಿ ಬರೆಯುವುದು ಪತ್ರಕತ೯ರ ವೃತ್ತಿ ಧಮ೯ಕ್ಕೆ ಸಲ್ಲದು. ಪತ್ರಕತ೯ರು ಯಾವಾಗಲೂ ಹೊಸ ಹೊಸ ವಿಷಯಗಳ ತಿಳಿದುಕೊಳ್ಳುವ ಆಸೆಯಲ್ಲಿ ಇರಬೇಕು. ನಿರಂತರ ಆಧ್ಯಾಯನದಿಂದ ಜ್ಞಾನ ಭಂಡಾರವನ್ನು ಸಂಪಾದನೆ ಮಾಡಿಕೊಂಡಿರಬೇಕು ಅಂದಾಗ ಮಾತ್ರ ಉತ್ತಮ ಪತ್ರಕತ೯ನಾಗಲು ಸಾಧ್ಯವಾಗುತ್ತದೆ. ಇನ್ನೂ ರಾಜ್ಯದಲ್ಲಿಯೇ ಅತಿದೊಡ್ಡ ಪತ್ರಕತ೯ರ ಸಂಘ ಎಂದರೆ ಕಾಯ೯ನಿರತ ಪತ್ರಕತ೯ರ ಸಂಘವಾಗಿದೆ. ಪತ್ರಕತ೯ರ ಕ್ಷೇಮಾಭಿವೃದ್ಧಿಗೊಸ್ಕರ ಕ್ಷೇಮಾಭಿವೃದ್ಧಿ ನಿಧಿಯನ್ನು ಸಹ ಸಂಗ್ರಹ ಮಾಡಲಾಗುತ್ತಿದೆ. ಈಗಾಗಲೇ 1 ಕೋಟಿ ನಿಧಿಯನ್ನು ಸಹ ಸಂಗ್ರಹ ಮಾಡಿ, ಠೇವಣಿ ಮಾಡಲಾಗಿದೆ ಎಂದು ಹೇಳಿದರು. ಶಾಸಕ ಗಾಲಿ ಜನಾಧ೯ನ ರೆಡ್ಡಿ ಮಾತನಾಡಿ, ನನ್ನ ರಾಜಕೀಯ ಜೀವನ ಮುಗಿತು ಎನ್ನುವ ಸಮಯದಲ್ಲಿ ಗಂಗಾವತಿಯ ಜನ ನನ್ನ ಕೈ ಹಿಡಿದಿದ್ದಾರೆ. ಅವರ ರೂಣ ನಾನು ತಿರಿಸಲು ಸಾಧ್ಯವಿಲ್ಲ. ಗಂಗಾವತಿ ಸಾಂಸ್ಕೃತಿಕವಾಗಿ, ಆದ್ಯಾತ್ಮೀಕವಾಗಿ ಅಭಿವೃದ್ಧಿಯಾಗುತ್ತಿರುವ ನಗರವಾಗಿದೆ. ಅದನ್ನು ಅಭಿವೃದ್ಧಿ ಪಡಿಸಲು ಡಿಪಿಆರ್ ಮಾಡಿಸಿ ರಾಜ್ಯಕ್ಕೆ ಕಳುಹಿಸಲಾಗಿದೆಣ. ರಾಜ್ಯ ಮಂತ್ರಿಗಳು ಅದನ್ನು ಕೇಂದ್ರಕ್ಕೆ ದಾಖಲೆ ಸಲ್ಲಿಸಲು ಮುಂದಾಗಿಲ್ಲ. ಕೇಂದ್ರಕ್ಕೆ ಸಲ್ಲಿಕೆಯಾದರೆ ಕೇಂದ್ರದಿಂದ ಅನುದನಾ ತರಲಾಗುವುದು. ಅದೇ ರೀತಿಯಲ್ಲಿ ಅಂಜನಾದ್ರಿಯನ್ನು ತಿರುಪತಿಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಡಿಪಿಆರ್ ಸಿದ್ಧ ಪಡಿಸಿ, ರಾಜ್ಯಕ್ಕೆ ಕಳುಹಿಸಿದರು. ರಾಜ್ಯದ ಸಚಿವರು ದಾಖಲೆಗಳನ್ನು ಕೇಂದ್ರಕ್ಕೆ ಕಳುಗಿಸಲು ಮುಂದಾಗಿಲ್ಲ. ಕಾಂಗ್ರೆಸ್ ನವರು ಅಭಿವೃದ್ಧಿಯಲ್ಲೂ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ನಂತರ ಶಾಸಕರಾದ ಗಾಲಿ ಜನಾರ್ಧನರೆಡ್ಡಿ ಅವರು ನೂತನ ಪತ್ರಕತ೯ರ ಗ್ರಂಥಾಲಯವನ್ನು ಉದ್ಘಾಟನೆಗೊಳಿಸಿದರು. ಮಾಜಿ ಸಚಿವರಾದ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಮಲ್ಲಿಕಾಜು೯ನ ನಾಗಪ್ಪ, ಕನಿಪಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಹಳ್ಳಿಕೇರಿ, ಕಾಯ೯ದಶಿ೯ ನಾಗರಾಜ ಹೇಮಗುಡ್ಡ, ದುಗಾ೯ದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ಕನಿಪಾ ತಾಲೂಕು ಅಧ್ಯಕ್ಷ ನಾಗರಾಜ ಇಂಗಳಗಿ, ಕಾಯ೯ದಶಿ೯ ಬಿ.ದೇವರಾಜ ಪ್ರಮುಖರಾದ ವಿಶ್ವನಾಥ ಬೆಳಗಲಮಠ, ಶ್ರೀನಿವಾಸ್, ವೆಂಕಟೇಶ ಕುಲಕಣಿ೯, ವೃಷಬೇಂದ್ರ ನವಲಿ, ವೀರಾಪೂರ ಕೃಷ್ಣ, ಹರೀಶ ಕುಲಕಣಿ೯, ಚಂದ್ರಶೇಖರ ಮುಕ್ಕುಂದಿ, ದಶರಥ, ವಸಂತ ಕುಮಾರ, ಮಂಜುನಾಥ ಹೊಸ್ಕೇರಾ, ಮಲ್ಲಿಕಾಜು೯ನ ಗೋಟೂರು, ಜೋಗಿನ್ ರಮೇಶ್ ನಾಯಕ ಗಾಧಿಲಿಂಗಪ್ಪ, ವೆಂಕಟೇಶ್ ಮಾಂತಾ, ಹನುಮೇಶ ಭಟಾರಿ, ದಿವಾಕರ ನಾಯಕ ಹಾಗೂ ಹಿರಿಯರು ಮತ್ತು ಯುವಕರು ಉಪಸ್ಥಿತಿ ಇದ್ದರು ಇತರರಿದ್ದರು.

ಕೆಪಿಎಲ್03/8/2025. ಗಂಗಾವತಿಯ ತಾ.ಪಂ ಆವರಣದ ಮಂಥನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯನ್ನು ಭಾನುವಾರ ಆಚರಣೆ ಮಾಡಲಾಯಿತು.
