ವೃತ್ತಿಯಲ್ಲಿ ಸೇವಾಮನೋಭಾವನೆ ಅವಶ್ಯ: ಅಶೋಕಸ್ವಾಮಿ..

ವೃತ್ತಿಯಲ್ಲಿ ಸೇವಾಮನೋಭಾವನೆ ಅವಶ್ಯ: ಅಶೋಕಸ್ವಾಮಿ..

ಗಂಗಾವತಿ: ಯಾವುದೇ ವೃತಿಯಲ್ಲಿ ಇರಲಿ, ಮೊದಲು ಸೇವಾ ಮನೋಭಾವನೆಯನ್ಮು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹಿರಿಯ ಪತ್ರಕರ್ತ ಅಶೋಕಸ್ವಾಮಿ ಹೇರೂರು ಹೇಳಿದರು.ಅವರು ನಗರದ ಉಪ್ಪಿನಮಾಳಿ ಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ನಿಮಿತ್ಯ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಣೆ ಮಾಡಿ ಮಾತನಾಡಿದರು. ಮುಂದಿನ ಭವಿಷ್ಯದ ಪೀಳಿಗೆ ಇಂದಿನ ಮಕ್ಕಳಾಗಿದ್ದು, ಅವರಿಗೆ ಅಗತ್ಯ ವಿರುವ ಸೌಕರ್ಯಗಳು ಒದಗಿಸುವುದು ಪಾಲಕರ ಮತ್ತು ಶಿಕ್ಷಕರ ಕರ್ತವ್ಯವಾಗಿದೆ. ಇಂತಹ ಶಾಲೆಗಳನ್ನು ಗುರುತಿಸಿ ದಾನಿಗಳ ಸಹಕಾರದೊಂದಿಗೆ ಸರಳ ಕಾರ್ಯಕ್ರಮಗಳನ್ನು ನಡೆಸಿದ್ದು ಶ್ಲಾಘನೀಯವಾಗಿದೆ ಎಂದರು.ಡಾ.ಎಸ್.ಬಿ ಹಂದ್ರಾಳ ಮಾತನಾಡಿ, ಸಮಯ ಪೂರಕವಾದ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿರುವ ಪತ್ರಿಕಾ ಬಳಗವಾಗಿದೆ. ಬೆಳೆಯುವ ಸಿರಿಮೊಳಕೆಯಲ್ಲಿ ಎನ್ನುವ ಹಾಗೆ ಚಿಕ್ಕ ಮಕ್ಕಳಿಗೆ ಕಲಿಕಾಸಕ್ತಿ ಮೂಡಿಸಲು ಶಿಕ್ಷಕ ಪಾತ್ರ ಅವಶ್ಯವಿದ್ದು, ಅದಕ್ಕೆ ನೆರೆ ಹೊರೆ ಸಹಕಾರವು ಅತ್ಯವಶ್ಯಕವಾಗಿದೆ ಎಂದರು.ನಿವೃತ್ತ ಆಯುಷ್ಯ ವ್ಯದ್ಯರಾದ ಡಾ. ಅಮರಗುಂಡಪ್ಪ ಜೀಡಿ, ಮಕ್ಕಳ ತಜ್ಞರಾದ ಡಾ. ಅಮರೇಶ ಅರಳಿ , ನಿವೃತ್ತ ಶಿಕ್ಷಕರಾದ ರಾಮಣ್ಣ,ಬಿ. ಮಾತನಾಡಿದರು.ಹಿರಿಯ ಪತ್ರಕರ್ತರಾದ ಅಶೋಕಸ್ವಾಮಿ ಹೇರೂರು, ಮಕ್ಕಳ ತಜ್ಞ ಡಾ. ಅಮರೇಶ ಅರಳಿ, ಡಾ. ಅಮರಗುಂಡಪ್ಪ ಜೀಡಿ, ಡಾ. ಎಸ್,ಬಿ ಹಂದ್ರಾಳ, ನಿವೃತ್ತ ಶಿಕ್ಷಕರಾದ ರಾಮಣ್ಣ ಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಲಾಯಿತು.ವೇದಿಕೆಯಲ್ಲಿ ಉದ್ಯಮಿ ಅಪ್ಪಣ್ಣ ಅರಳಿ, ಮುಖ್ಯೋಧ್ಯಾಯರಾದ ವೆಂಕಟಲಕ್ಷಿö್ಮ ಬೆಲ್ಲದ್, ಶಿಕ್ಷಕಿ ಶ್ರೀಮತಿ ನೀಲಮ್ಮ ಹಿರೇಮಠ, ಮಹಾರುದ್ರಸ್ವಾಮಿ, ಶ್ರೀಯಾನ್ ಬ್ಯಾಂಕ್ ವ್ಯವಸ್ಥಾಪಕರಾದ ಕುರುಗೋಡಪ್ಪ ಕೋರಿ, ಪರಶುರಾಮ ಕಲ್ಗುಡಿ, ದೇವರಾಜ ಬಿ, ದೇವಾನಂದ ಸೇರಿದಂತೆ ಇನ್ನಿತರಿದ್ದರು.ಪೋಟೋ: ೦೧ ಜಿವಿಟಿ-೦೧

Leave a Reply

Your email address will not be published. Required fields are marked *