ಯೋಗದಿಂದ ರೋಗ ಮುಕ್ತ . ಆರ್ ಸತ್ಯನಾರಾಯಣ…

ಇಂದು ಗಂಗಾವತಿಯಲ್ಲಿ ಪ್ರತಿ ದಿನ ಯೋಗ ಮಾಡಿದರೆ ನಾವು ರೋಗ ಮುಕ್ತರಾಗಿ ಇರಬಹುದು ಎಂದು ಆರ್ಟ್ ಆಫ್ ಲಿವಿಂಗ್ ನ ಆರ್ ಸತ್ಯನಾರಾಯಣ ಅಭಿಪ್ರಾಯಪಟ್ಟರು. ಅವರು ಸಿಬಿಎಸ್ ಟೀಚರ್ಸ್ ವ್ಯಾಲಿಯಲ್ಲಿ ಇದೇ ಪ್ರಥಮ ಬಾರಿಗೆ ಹಮ್ಮಿ ಕೊಳ್ಳಲಾಗಿದ್ದ 11ನೇ ಅಂತರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮ ದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು. ಯಜ್ ಎಂಬ ಪದದಿಂದ ಯೋಗ ಬಂದಿದೆ ಯೋಗ ಎಂದರೆ ಒಗ್ಗೂಡಿಸುವುದು ಎಂದರ್ಥ ಈ ದಿಸೆಯಲ್ಲಿ ಮನುಷ್ಯರನ್ನು ಸಂತೋಷ ಭಾವದಿಂದ ದೈಹಿಕ ಹಾಗೂ ಮಾನಸಿಕ ಎರಡನ್ನು ಆರೋಗ್ಯಪೂರ್ಣವಾಗಿ ಮಾಡುವುದೇ ಯೋಗ. ಮನೆಯ ಹೆಣ್ಣು ಮಕ್ಕಳು ಸಂತೋಷದಿಂದ ಅಡುಗೆ ಮಾಡಿದರೆ ಇಡೀ ಕುಟುಂಬ ಸಂತೋಷಭರಿತವಾಗಿ ಇರುತ್ತದೆ. ದಿಸೆಯಲ್ಲಿ ಯೋಗವು ಸಹಿಷ್ಣುತೆ ಸೌಜನ್ಯ ದಂತಹ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿಗಳಾದ ಅಜ್ಮೀರ್ ನಂದಾಪುರ ಮಾತನಾಡಿ ಶಿಕ್ಷಕರೇ ಹೆಚ್ಚು ವಾಸಿಸುತ್ತಿರುವ ಗಂಗಾವತಿ ಭಾಗದ ಅತ್ಯಂತ ಮಾದರಿ ಬಡಾವಣೆ ಎನಿಸಿಕೊಂಡಿರುವ ಸಿಬಿಎಸ್ ಟೀಚರ್ಸ್ ವ್ಯಾಲಿಯಲ್ಲಿ ಇದು ಎರಡನೇ ಕಾರ್ಯಕ್ರಮ. ಪ್ರಥಮವಾಗಿ ಬಸವ ಜಯಂತಿ ದಿನದಂದು ಹಮ್ಮಿಕೊಳ್ಳಲಾದ ಬಸವ ಜಯಂತಿ ಕಾರ್ಯಕ್ರಮ ಪ್ರಥಮ ಕಾರ್ಯಕ್ರಮ. 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಇದು ಎರಡನೇ ಕಾರ್ಯಕ್ರಮ ಆಗಿದೆ ಈ ದಿಸೆಯಲ್ಲಿ ಲೇಔಟ್ ನ ಎಲ್ಲಾ ಶಿಕ್ಷಕ ಬಂಧುಗಳು ಅವರ ಕುಟುಂಬದವರು ಒಂದು ಕಡೆ ಸೇರಿ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ ಎಂದರು. ಲೇಔಟ್ ನ ಒಂದು ಕುಟುಂಬದ ಹಬ್ಬ ಸಮಸ್ತ ಲೇಔಟ್ ನ ಎಲ್ಲಾ ಕುಟುಂಬಗಳ ಹಬ್ಬವಾಗಬೇಕು ಎಂದರು. ಆರಾಳ್ ಪ್ರೌಢಶಾಲೆಯ ಮುಖ್ಯ ಗುರುಗಳಾದ ನಾಗಲಿಂಗಪ್ಪ ರವರು ಹಾಗೂ ಎಂ ಎನ್ ಎಂ ಪ್ರೌಢಶಾಲೆಯ ಮಲ್ಲಿಕಾರ್ಜುನ ಗುರುಗಳು ಮುಖ್ಯ ಅತಿಥಿ ಸ್ಥಾನವಹಿಸಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಸಿದ್ದಲಿಂಗೇಶ್ವರ ಪೂಲಭಾವಿ, ಸ್ವಾಗತವನ್ನು ಗುರುಪಾದಯ್ಯ, ಅತಿಥಿಗಳ ಪರಿಚಯವನ್ನು ಶಿವಾನಂದ ತಿಮ್ಮಾಪುರ್ ಪ್ರಾರ್ಥನೆಯನ್ನು ಶ್ರೀಮತಿ ಜ್ಯೋತಿ ರಾಜಶೇಖರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಬಡಾವಣೆಯ ಪ್ರಮುಖರಾದ ಪ್ರಭಯ್ಯ ಹಿರೇಮಠ, ಶರಣಪ್ಪ ನಾಯಕ, ಶೇಖರ್ , ಸತೀಶ್ ಅಯ್ಯನಗೌಡ ಪೊಲೀಸ್ ಪಾಟೀಲ್, ನಾರಾಯಣಪ್ಪ ಸೇರಿದಂತೆ ಬಡಾವಣೆಯ ಮಹಿಳಾ ಬಳಗದವರು ಹಾಜರಿದ್ದರು.
