ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಲು ಕರೆ..

ಗಂಗಾವತಿಯಲ್ಲಿ ಇಂದು ಆಯೋಜನೆ ಮಾಡಲಾದ 2015 ರಿಂದ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ವಿಮಾ ಭದ್ರತೆ ಒದಗಿಸುವ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಿದ್ದು, ಇದರ ಸದುಪಯೋಗಪಡಿಸಿಕೊಳ್ಳಲು ಕೊಪ್ಪಳ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಮಾರುತಿ .ಕೆ.ಕೆ.ರವರು ಇಂದು ವಿನೋಬಾ ನಗರದಲ್ಲಿ ಮಹಿಳಾ ಗುಂಪಿನ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು ಸಾಮಾನ್ಯವಾಗಿ ಜನರು ಅನೇಕ ಕಾಯಿಲೆಗಳು ಅಥವಾ ಅನಾನುಕೂಲತೆಯಿಂದ ಜೀವನೋಪಾಯ ಮಾಡುವ ಸಂದರ್ಭದಲ್ಲಿ ಅವರು ಅಕಾಲಿಕವಾಗಿ ಮರಣ ಹೊಂದಿದರೆ ಅಥವಾ ಅಪಘಾತ ಸಂಭವಿಸದಲ್ಲಿ ಎರಡು ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ 18 ರಿಂದ 50 ವರ್ಷದೊಳಗಿನವರಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ 436 ರುಪಾಯಿ ಮತ್ತು 18ರಿಂದ 70 ವರ್ಷದ ವರೆಗೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಪಘಾತ ಸಂಭವಿಸಿದಲ್ಲಿ 2 ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ ಎಂದು ಸಾರ್ವಜನಿಕರಿಗೆ ತಿಳಿಸಿದರು ಮತ್ತು ನಮ್ಮ ಕೊಪ್ಪಳ ಜಿಲ್ಲೆ ಈ ಭದ್ರತಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಹಿಂದುಳಿದಿದೆ .ಕಾರಣ ಈಗ ಕೊಪ್ಪಳ ಜಿಲ್ಲಾ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಭದ್ರತಾ ಯೋಜನೆ ಶಿಬಿರಗಳನ್ನು ಏರ್ಪಡಿಸಲಾಗುವುದು, ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಗಂಗಾವತಿ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸರಕಾರದ ಟಿ. ಆಂಜನೇಯ ರವರು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ನಿರ್ದೇಶನದಂತೆ ಮತ್ತು ರಾಜ್ಯಮಟ್ಟದ ಬ್ಯಾಂಕರ್ ಸಮಿತಿಯ ಮಾರ್ಗದರ್ಶನದಂತೆ ಪ್ರತಿ ಬ್ಯಾಂಕುಗಳಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಒದಗಿಸಲು ಅನುಕೂಲತೆ ಮಾಡಿದ್ದು ಪ್ರತಿಯೊಬ್ಬರೂ 18 ವರ್ಷ ಮೇಲ್ಪಟ್ಟು 70 ವರ್ಷದ ವರೆಗಿನ ಎಲ್ಲರೂ ಬ್ಯಾಂಕ್ ನಲ್ಲಿ ಖಾತೆ ತೆಗೆದು ಕಡಿಮೆ ಮೊತ್ತದ ಪ್ರೀಮಿಯಂ ನಲ್ಲಿ ಎರಡು ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯ ಪಡೆದುಕೊಳ್ಳಲು ವಿನಂತಿಸಿದರು ಈ ದಿನದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ವಸಹಾಯ ಸಂಘದ ಮಹಿಳೆಯರು ಸುಮಾರು 15 ಜನ ವಿಮಾ ಸೌಲಭ್ಯದ ಅರ್ಜಿಗಳನ್ನು ತುಂಬಿ ದಾಖಲೆಗಳನ್ನು ನೀಡಿದರು ಈ ಕಾರ್ಯಕ್ರಮದಲ್ಲಿ ವಿನೋಬಾ ನಗರದ ಮಹಿಳೆಯರು ಮತ್ತು ಸಂಜೀವಿನಿ ಒಕ್ಕೂಟದ LCRP ಶ್ರೀಮತಿ ಐಶ್ವರ್ಯ ರವರು ಉಪಸ್ಥಿತರಿದ್ದರು
