ಆರೋಗ್ಯ ಇಲಾಖೆ ಹುದ್ದೆಗಳು : ಅಭ್ಯರ್ಥಿಗಳಿಗೆ ಮೂಲ ದಾಖಲಾತಿ ಪರಿಶೀಲನೆ…

ಕೊಪ್ಪಳ ಅಕ್ಟೋಬರ್ 29 (ಕರ್ನಾಟಕ ವಾರ್ತೆ): ಪಿಎಂ ಅಭಿಮ್ ಹಾಗೂ ಎನ್.ಹೆಚ್.ಎಂ ಅಡಿಯಲ್ಲಿ ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳ 2ನೇ ಸುತ್ತಿನ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ಪಟ್ಟಿಯ್ಲಲಿರುವ ಅಭ್ಯರ್ಥಿಗಳು ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗುವಂತೆ ಸೂಚಿಸಿದೆ.2ನೇ ಸುತ್ತಿನ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಇಂದು (ಅ.30) www.koppal.nic.in ನಲ್ಲಿ ಪ್ರಕಟಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಅವರು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ದಾಖಲಾತಿಗಳ ಮೂಲ ದಾಖಲಾತಿ ಪರಿಶೀಲನೆಯನ್ನು ನವೆಂಬರ್ 6 ಮತ್ತು 7 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾಡಳಿತ ಭವನ, ಕೊಪ್ಪಳ ಇಲ್ಲಿ ಹಮ್ಮಿಕೊಂಡಿದ್ದು, ಅಭ್ಯರ್ಥಿಗಳು ಮೂಲ ದಾಖಲಾತಿ ಪರಿಶೀಲನೆಗೆ ಕಛೇರಿ ಅವಧಿಯಲ್ಲಿ ಹಾಜರಾಗಲು ಈ ಮೂಲಕ ಸೂಚಿಸಿದೆ.ಮೂಲ ದಾಖಲಾತಿಗೆ ಹಾಜರಾಗುವಾಗ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ದಾಖಲಾತಿಗಳ ಮೂಲ ದಾಖಲಾತಿಗಳೊಂದಿಗೆ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ತರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

