ಎಚ್ಚೆತ್ತುಕೊಂಡು ಅಗತ್ಯ ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡ ವಿವೇಕಾನಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ.

ಎಚ್ಚೆತ್ತುಕೊಂಡು ಅಗತ್ಯ ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡ ವಿವೇಕಾನಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ.

ಗಂಗಾವತಿ : ನಗರದ ಕನಕಗಿರಿ ಮುಖ್ಯ ರಸ್ತೆಯ ಎಡಭಾಗದಲ್ಲಿ ಇರುವ ವಿವೇಕಾನಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಒಳಭಾಗದಲ್ಲಿ ಕಟ್ಟಡದ ನವೀಕರಣದ ವಿವಿಧ ಕೆಲಸ ಕಾರ್ಯಗಳು ನಡೆಯುತ್ತಿದ್ದವು.ಕೆಲಸ ನಡೆಯುತ್ತಿರುವ ಸಂಧರ್ಭದಲ್ಲಿ ಹೊರರೋಗಿಗಳಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನು ಗಮನಿಸಿದ ಪತ್ರಿಕಾ ವರದಿಗಾರರದ ಮಂಜುನಾಥ ಆರತಿ,ಅಸ್ಪತ್ರೆಯ ಅಸುರಕ್ಷತೆಯ ಬಗ್ಗೆ ವರದಿ ಮಾಡಿದ್ದರು. ಈ ವರದಿ ಫಲಶೃತಿಯ ಫಲವಾಗಿ ಕೂಡಲೇ ಎತ್ತೆಚ್ಚುಕೊಂಡ ಆಸ್ಪತ್ರೆಯ ಆಡಳಿತ ಮಂಡಳಿಯು ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗದಂತೆ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಂಡು ಕಾರ್ಯನಿರ್ವಹಿಸಲು ಸಜ್ಜಾಗಿದೆ. ಪತ್ರಿಕ ವರದಿಯಿಂದ ಎಚ್ಚೆತ್ತುಕೊಂಡ ಆಸ್ಪತ್ರೆಯ ಮಂಡಳಿ ಇನ್ನೂ ಮುಂದೆ ಇಂತ ಘಟನೆಗಳು ನಡೆಯದಂತೆ ಕ್ರಮ ವಹಿಸುತ್ತೇವೆ ಎಂದು ಪತ್ರಿಕೆಗೆ ತಿಳಿಸಿದರು.ಆಸ್ಪತ್ರೆಯ ಒಳಭಾಗದ ಕಟ್ಟಡ ನವೀಕರಣ ಕಾರ್ಯದ ಸಂದರ್ಭದಲ್ಲಿ ಕಾಣಿಸಿಕೊಂಡ ಅಸುರಕ್ಷತೆಯ ಬಗ್ಗೆ ವರದಿ ನೀಡಿದ್ದರು. ಈ ವರದಿ ಇದೀಗ ಆಸ್ಪತ್ರೆಯ ಆಡಳಿತ ಮಂಡಳಿಗೆ ಎಚ್ಚರಿಕೆಕಾರಿಯಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದೆ.ಆಡಳಿತ ಮಂಡಳಿಯ ಕ್ರಮಗಳುಆಸ್ಪತ್ರೆಯ ಆಡಳಿತ ಮಂಡಳಿಯು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನಿಗಾವಹಿಸಿ, ಕೆಲಸದ ಸ್ಥಳದಲ್ಲಿ ಸುರಕ್ಷಿತ ಕ್ರಮ ಜಾರಿಗೆ ತಂದಿದೆ. ಭವಿಷ್ಯದಲ್ಲಿ ಇಂತಹ ಅವ್ಯವಸ್ಥೆ ಅಥವಾ ಅಪಾಯವನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ನಿಯಮಾವಳಿ ಅಳವಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ ಸಾರ್ವಜನಿಕರಿಗೆ ಭರವಸೆ ಆಸ್ಪತ್ರೆ ಸುರಕ್ಷತೆ ಹಾಗೂ ಶಾಂತಿಯಿಂದ ಸೇವೆ ನೀಡಲು ಮುಂದಾಗಿದೆ. ಪತ್ರಿಕಾ ವರದಿ ನೆರವಿನಿಂದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲಾಗಿದೆ. ನಿರ್ಧಾರ: ಪತ್ರಿಕಾಗೆ ಧನ್ಯವಾದ ಸೂಚಿಸಿ, ಆಸ್ಪತ್ರೆಯ ಆಡಳಿತ ಮಂಡಳಿ ಭವಿಷ್ಯದಲ್ಲಿ ಸಾರ್ವಜನಿಕ ಸುರಕ್ಷತೆಗಾಗಿ ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ.

Leave a Reply

Your email address will not be published. Required fields are marked *