ಗಮನಸೆಳದ ರಾರಾವಿ, ಇಂಗಳಗಿ, ಪರಶುರಾಮ್, ಜಯಶ್ರೀ, ಪಾರ್ವತೀಶ್ ನಟನೆ …

ಗಮನಸೆಳದ ರಾರಾವಿ, ಇಂಗಳಗಿ, ಪರಶುರಾಮ್, ಜಯಶ್ರೀ, ಪಾರ್ವತೀಶ್ ನಟನೆ .

ಹೆಚ್. ಹೊಸಳ್ಳಿಯಲ್ಲಿ ರೋಮಾಂಚನಗೊಳಿಸಿದ ರಕ್ತರಾತ್ರಿ ಪೌರಾಣಿಕ ನಾಟಕ

ಗಂಗಾವತಿ: ಕೊಟ್ಯಾಂತರ ಪ್ರದರ್ಶನ ಕಂಡಿರುವ ಕರ್ನಾಟಕದ ಶೇಕ್ಸ್ಪಿಯರ್ ಕಂದಗಲ್ ಹನುಮಂತರಾಯ ವಿರಚಿತ ರೌದ್ರಮಯ ನಾಟಕ ರಕ್ತರಾತ್ರಿ ಸಿರಿಗುಪ್ಪ ತಾಳೂಕಿನ ಹೆಚ್. ಹೊಸಳ್ಳಿ ಗ್ರಾಮದಲ್ಲಿ ವಿಶ್ವರಂಗ ಕಲಾ ಟ್ರಸ್ಟ್ ಅಧ್ಯಕ್ಷೆ, ನಟಿ ಜಯಶ್ರೀ ಪಾಟೀಲ್ ಇವರ ನೇತೃತ್ವದಲ್ಲಿ ಅದ್ಧೂರಿ ಪ್ರದರ್ಶನ ಕಂಡಿತು.ಗಣೇಶ್ ಹಬ್ಬದ ಪ್ರಯುಕ್ತ ತಿಪ್ಪೇಸ್ವಾಮಿ ಸೋಲದಳ್ಳಿ ಇವರ ಅನುಭವಿ ಸಂಗೀತ ನಿರ್ದೇಶನದಲ್ಲಿ ರಾಜ್ಯದ ಅತ್ಯಂತ ನುರಿತ ನಟರು ನಟಿಸಿದ ರಕ್ತರಾತ್ರಿ ನಾಟಕದಲ್ಲಿ ನಾಡಿನಾದ್ಯಂತ ಖ್ಯಾತಿಪಡೆದಿರುವ ನಟರಾದ ರಾರಾವಿ ಚಿದಾನಂದ (ಕೃಷ್ಣ), ಸಂಘಟಕರಾದ ಪರಶುರಾಮ್ ಹಂದ್ಯಾಳ್(ಅಶ್ವತ್ಥಾಮ),

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ, ಸಿಜಿಕೆ ರಂಗ ಪ್ರಶ್ತಿ ಪುರಸ್ಕೃತ ಚಿತ್ರ ನಟ ನಾಗರಾಜ್ ಇಂಗಳಗಿ (ಶಕುನಿ), ಹೆಚ್.ಎಂ. ಅಮರೇಶ್ ಹಚ್ಚೊಳ್ಳಿ (ದುರ್ಯೋಧನ), ಪ್ರಶಸ್ತಿ ಪುರಸ್ಕೃತ ನಟ ಪಾರ್ವತೀಶ್ (ನವಲಿಪಕ್ಕ), ರಾಮೇಶ್ವರ ಹಿರೇಮಠ (ಭೀಮ) ಜಯಶ್ರೀ ಪಾಟೀಲ್ ಬಳ್ಳಾರಿ (ದ್ರೌಪದಿ), ವೀಣಾ ಆದೋನಿ (ಭಾನುಮತಿ) ಮೀನಾಕ್ಷಿ ಹಿರೇಮಠ (ಉತ್ತರೆ) ಪ್ರೇಕ್ಷಕರನ್ನು ರೋಮಾಂಚನಗೊಳಿಸುವಲ್ಲಿ ಯಶಸ್ವಿಯಾದರು.

ಇನ್ನೂಳಿದಂತೆ ನಡೆದಾಡುವ ರಕ್ತರಾತ್ರಿ ಎಂದು ಖ್ಯಾತಿ ಪಡೆದಿರುವ ಬಸವರಾಜ ಸ್ವಾಮಿ ಜವಳಗೇರಾ (ಧರ್ಮರಾಯ, ಗಂಧರ್ವ, ಕಲಿ). ದೇವೇಂದ್ರಪ್ಪ ಹುಡಾ (ಕರ್ಣಾ) ಇತರೆ ಪಾತ್ರಧಾರಿಗಳು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು. ವಿರುಪಾಕ್ಷಪ್ಪ ದೇವಲಾಪುರ ಇವರ ತಬಲಾ ವಾದನ ಜನಮನ ಸಳೆಯಿತು. ಮುರಳಿ ಚಳ್ಳಿಕೆರಾ ಇವರ ಮೇಕಪ್, ವೇಷಭೂಷಣ ಅಚ್ಚುಕಟ್ಟಾಗಿತ್ತು. ಬಯಲಾಟದ ತವರೂರು ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಕ್ತರಾತ್ರಿ ನಾಟಕ ಸಂಚಲನ ಮೂಡಿಸಿತು.

Leave a Reply

Your email address will not be published. Required fields are marked *