ಕಿಷ್ಕಿಂದ ಅಂಜನಾದ್ರಿ ಪರಿಕ್ರಮ ಯಾತ್ರೆ ಆಚರಣೆ ಕುರಿತು ಪೂರ್ವ ಭಾವಿ ಸಭೆ…

ಗಂಗಾವತಿ. ಐತಿಹಾಸಿಕ ಹಿನ್ನೆಲೆ ಹೊಂದಿದ ಇತಿಹಾಸ ಪ್ರಸಿದ್ಧ ಆನೆಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ರಾಂಪುರ್ ಗ್ರಾಮದ ಕಿಸ್ಕಿಂದ ಅಂಜನಾದ್ರಿ ಶ್ರೀ ಆಂಜನೇಯನಿಗೆ ಅಂಜನಾದ್ರಿ ಪರಿಕ್ರಮ ಶ್ರಾವಣ ಮಾಸದ ಆಚರಣೆಗೆ ಸಂಬಂಧಿಸಿದಂತೆ ಮಂಗಳವಾರದಂದು ರಾಮಪುರ ಶ್ರೀರಾಮ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ದೇವಸ್ಥಾನದ ಪ್ರದಾನ ಅರ್ಚಕ ಮಹಾಂತ ಶ್ರೀ ವಿದ್ಯಾ ದಾಸ ಬಾಬಾಜಿಯವರ ನೇತೃತ್ವದ್ದಲ್ಲಿ ಜರುಗಿತು. ಆಚರಣೆಗೆ ಸಂಬಂಧಿಸಿದಂತೆ ಬಾಬಾಜಿಯವರು ಮಾತನಾಡಿ. ನಮ್ಮ ನಡಿಗೆ ಹನುಮನ ಕಡೆಗೆ ಎಂಬಂತೆ ಹನುಮನ ಜನ್ಮಸ್ಥಾನದಲ್ಲಿ ಜನಿಸಿದವರೇ ನಿಜಕ್ಕೂ ಪುಣ್ಯವಂತರು ಅಂತಹ ದಿವ್ಯ ಶಕ್ತಿ ಆಂಜನೇಯ ಕ್ಷೇತ್ರ ಹೊಂದಿದ್ದು ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಅಂಜನಾದ್ರಿ ಪರಿಕ್ರಮ ಅಂದರೆ ಶ್ರೀ ಆಂಜನೇಯರಿಗೆ ಪ್ರದಕ್ಷಣೆ ಎಂದು ಕರೆಯಲ್ಪಡುವ ಈ ಆಚರಣೆಯಿಂದ ವ್ಯಕ್ತಿಯ ಜನ್ಮಜನ್ಮಾಂತರದ ಪಾಪ ನಾಶವಾಗಿ ಸುಖ ಶಾಂತಿ ಸಮೃದ್ಧಿ ದೊರೆಯುವುದು ಶ್ರಾವಣ ಮಾಸದ ಪ್ರತಿ ಶನಿವಾರ ನಾಲ್ಕು ಗಂಟೆಯಿಂದ ಆರಂಭವಾಗುವ ಶ್ರೀ ಆಂಜನೇಯ ಪ್ರದಕ್ಷಣೆ ಇದರಿಂದ ವ್ಯಕ್ತಿಯಲ್ಲಿ ಆಗುವ ಬದಲಾವಣೆ ಭಾಗವಹಿಸಿದಾಗ ಮಾತ್ರ ಗೊತ್ತಾಗುವುದೆಂದು ಪ್ರದಕ್ಷಣೆಮಹತ್ವ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ನಾರಾಯಣಗೌಡ ಮಲ್ಲಾಪುರ್ ಮಲ್ಲಪ್ಪ ಶಿವಪ್ರಸಾದ್ ರೆಡ್ಡಿ. ಬಾಲು ಹನುಮನಹಳ್ಳಿ ಲಕ್ಷ್ಮಣ ನಾಯಕ್ ನರಸಿಂಹಮೂರ್ತಿ ಹೊಸಪೇಟೆ ವೆಂಕಟರೆಡ್ಡಿ ರಾಜಪ್ಪ ಹನುಮಂತಪ್ಪ ಡಾಕ್ಟರ್ ಸತ್ಯನಾರಾಯಣ. ನೀಲಕಂಠ ನಾಗಶೆಟ್ಟಿ ಕಾವ್ಯ . ನಳಿನ್ ರೆಡ್ಡಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.