ಹೊಸಳ್ಳಿಯ ಸರ್ಕಾರಿ ಶಾಲೆಯ ಸ್ಥಳ ಗಣ್ಯರಿಂದ ಅತಿಕ್ರಮಣದ ಪ್ರಯತ್ನ….. ಶಿಕ್ಷಣ ಪ್ರೇಮಿ ಮಲ್ಲಯ್ಯ ಪಾರಿವಾಳ ಗಂಭೀರ ಆರೋಪ…

ಗಂಗಾವತಿ ನಗರಕ್ಕೆ ಹೊಂದಿಕೊಂಡಿರುವ ಹೊಸಳ್ಳಿ ಗ್ರಾಮದಲ್ಲಿರುವ ಪುರಾತನವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಿಪ್ಪೆಗಳನ್ನು ಹಾಕಿರುವುದರಿಂದ ಬಡ ಮಕ್ಕಳ ಕಲಿಕೆಗೆ ಮತ್ತು ಶೈಕ್ಷಣಿಕ ಪ್ರಗತಿಗೆ ತುಂಬಾ ತೊಂದರೆದಾಯಕವಾಗಿದೆ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೇಲಿಂದ ಮೇಲೆ ಪತ್ರ ಬರೆದರು ಸಹ ಯಾರು ಗಮನ ಹರಿಸುತ್ತಿಲ್ಲ ಎಂದು ಶಿಕ್ಷಣ ಪ್ರೇಮಿ ಯುವ ಮುಖಂಡ ಹಾಗೂ ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿರುವ ಮಲ್ಲಯ್ಯ ಪಾರಿವಾಳ ಅವರು ತಿಳಿಸಿದ್ದಾರೆ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸೂಕ್ತ ಮೈದಾನ ವಿಲ್ಲ ಹಾಗೂ ಶೌಚಾಲಯದ ವ್ಯವಸ್ಥೆಯಂತೂ ಇಲ್ಲವೇ ಇಲ್ಲ ಹಾಗೆ ಶಾಲೆಯ ಸ್ಥಳವನ್ನು ಕೆಲವು ಗಣ್ಯ ವ್ಯಕ್ತಿಗಳು ಅತಿಕ್ರಮಸಿ ಭತ್ತದ ನಾಟಿ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ರಾಜಧಾನಿ ಬೆಂಗಳೂರಿನವರೆಗೂ ಹೋರಾಟ ಮಾಡಲು ನಿರ್ಧರಿಸಿರುವುದಾಗಿ ಮಲ್ಲಯ್ಯ ಪಾರಿವಾಳ ಅವರು ನಮ್ಮ ಕಿಸ್ಕಿಂದ ನ್ಯೂಸ್ ಗೆ ತಿಳಿಸಿದ್ದಾರೆ ಸರ್ಕಾರಿ ಶಾಲೆಯ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ವರ್ಷಗಳಿಂದ ಹೋರಾಟ ಮುಂದುವರಿಸಿದ್ದು ನಿರಂತರವಾಗಿ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಮಲ್ಲಯ್ಯ ಪಾರಿವಾಳ ತಿಳಿಸಿದ್ದಾರೆ.
