ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಕಾಯಿಲೆ ಹರಡುವಿಕೆ ಹಾಗೂ ನಿಯಂತ್ರಣ ಕುರಿತಾಗಿ ತರಬೇತಿ ಕಾರ್ಯಗಾರ..

ಗಂಗಾವತಿ:28 ನಗರದ ಸಾರ್ವಜನಿಕ ಆಸ್ಪತ್ರೆಯ ಸಭಾಭವನದಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನಲ್ಲಿ ಬರುವ ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಇಲಾಖೆಯ ಹಾಸ್ಟೆಲ್ ವಾರ್ಡನ್ ಗಳಿಗೆ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಿಂದ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಕಾಯಿಲೆ ಹರಡುವಿಕೆ ಹಾಗೂ ನಿಯಂತ್ರಣ ಕ್ರಮಗಳ ಕುರಿತಾಗಿ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲೆ ರೋಗವಾಗ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ. ಕುಮಾರಸ್ವಾಮಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸೊಳ್ಳೆ ಹರಡುವ ರೋಗಗಳಾದ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ಮಕ್ಕಳು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದ್ದ ಕಾರಣ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಹಾಸ್ಟೆಲ್ ವಾರ್ಡನ್ ಗಳಿಗೆ ಸೊಳ್ಳೆಯಿಂದ ಹರಡುವ ಕಾಯಿಲೆಗಳು ಹಾಗೂ ನಿಯಂತ್ರಣದ ಕುರಿತಾಗಿ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸುವ ಆರೋಗ್ಯ ಶಿಕ್ಷಣ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾ ಬೇಗಂ ಅವರು ಮಾತನಾಡಿ ಬಿಂದು ಚಿಕನ್ ಗುನ್ಯಾ ಮಲ್ಲೇರಿಯಾದ ಕಾಯಿಲೆಗಳು ಸಾಂಕ್ರಾಮಿಕ ಕಾಯಿಲೆಗಳಾಗಿದ್ದು ಕೇವಲ ಆರೋಗ್ಯ ಇಲಾಖೆಯ ಅಲ್ಲದೆ ಎಲ್ಲಾ ಇಲಾಖೆಗಳು ಕೈಜೋಡಿಸಿದಾಗ ಮಾತ್ರ ಈ ಕಾಯಿಲೆಗಳು ನಿಯಂತ್ರಣ ಮಾಡಲು ಸಾಧ್ಯ ಎಂದು ಕರೆ ನೀಡಿದರು ಸಂಪನ್ಮೂಲ ವ್ಯಕ್ತಿಗಳಾದಂತ ರಮೇಶ್ ರವರು ಪಿ ಪಿ ಟಿ ಮೂಲಕ ಹಾಸ್ಟೆಲ್ ವಾರ್ಡನ್ ಗಳ ಜವಾಬ್ದಾರಿ ವಿದ್ಯಾರ್ಥಿಗಳ ಕಾಪಾಡುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳು ಸೊಳ್ಳೆಯಿಂದ ದೂರ ಇರುವ ಸ್ವಯಂ ರಕ್ಷಣಾ ವಿಧಾನಗಳ ಬಗ್ಗೆ ಅರಿವು ಮೂಡಿಸಿದರು. ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಗೌರಿಶಂಕರ್ ಅವರ ಮಾತನಾಡಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಪಾತ್ರ ತುಂಬಾ ಮಹತ್ವದ ಆಗಿರುತ್ತದೆ ಎಂದು ತಿಳಿಸಿದರು. ಮೇಲ್ವಿಚಾರಕರಾದ ದೇವೇಂದ್ರ ಗೌಡ, ಭೀಮೇಶ್, ಬಸವಲಿಂಗ, ಪ್ರಸಾದ, ಮಲೇರಿಯಾ ಲಿಂಕ್ ವರ್ಕರ ಹೆಚ್.ಸುರೇಶ, ರಮೇಶ, ತಾಲೂಕ ಪ್ರೋಗ್ರಾಮ್ ಮ್ಯಾನೇಜರ್ ರೇಣುಕಾ ಪಾಟೀಲ್, ಮಂಜುಳಾ, ಹಾಸ್ಟೆಲ್ ವಾರ್ಡನ್ ಗಳಾದ ಮಲ್ಲಿಕಾರ್ಜುನ್ ಪೋಲಿಸ್ ಪಾಟೀಲ್, ಗದ್ಯಪ್ಪ ಕುರಿ,ಲತಾ, ಹುಸೇನ ಬಿ, ಮಹಮದ್ ಗೌಸ್, ಮಲ್ಲಯ್ಯ ಗೋಮರ್ಸಿ, ಮಲ್ಲಿಕಾರ್ಜುನ್ ಸುಂಕದ, ಬಸವರಾಜ್ ಬಡಿಗೇರ್, ನಾಗಲಕ್ಷ್ಮಿ, ಪಾರ್ವತಿ, ಶಾಂತಕುಮಾರಿ, ಲಕ್ಷ್ಮೀಬಾಯಿ ಗುಣಾಚಾರಿ ಭಾಗವಹಿಸಿದ್ದರು.
