ಶನೇಶ್ವರ ಆರಾಧನೆಯಿಂದ ಸಕಲ ದೋಷಗಳಿಗೆ ಪರಿಹಾರ. ಸುರೇಶ್ ಶಾಸ್ತ್ರಿ…

ಶನೇಶ್ವರ ಆರಾಧನೆಯಿಂದ ಸಕಲ ದೋಷಗಳಿಗೆ ಪರಿಹಾರ. ಸುರೇಶ್ ಶಾಸ್ತ್ರಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಾಗಶೆಟ್ಟಿಹಳ್ಳಿ ಬೂಪ್ಸಂದ್ರ ರೋಡ್ ನಾಲ್ಕನೇ ಮಾರ್ಗದಲ್ಲಿರುವ ಚಕ್ರಸಹಿತ ಶನೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ 27 ನೇ ತಾರೀಖಿನಂದು ಶ್ರೀ ಶನೇಶ್ವರ ಸ್ವಾಮಿಯ ಜಯಂತಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶೇಷ ಹೋಮ ಹ ವನ ಮತ್ತು ಅಭಿಷೇಕ ನೈವೇದ್ಯ ಇತ್ಯಾದಿ ಪೂಜಾ ಕಾರ್ಯಗಳನ್ನು ನೆರವೇರಿಸಿ ಲಾಯಿತು ಬಳಿಕ ಮಾತನಾಡಿದ ವೇದಮೂರ್ತಿ ಸುರೇಶ್ ಶಾಸ್ತ್ರಿ ಮತ್ತು ದೇವಸ್ಥಾನದ ಪೂಜಾರಿ ಮುನಿನರಸಯ್ಯ ಅವರು ಮಾತನಾಡಿ. ಶನೇಶ್ವರ ಸ್ವಾಮಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶೇಷ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ಜೊತೆಗೆ ಈ ದೇವಸ್ಥಾನದ ವಿಶೇಷತೆ ಏನೆಂದರೆ ಚಕ್ರ ಸಹಿತ ಶನೇಶ್ವರ ಸ್ವಾಮಿ ದೇವಸ್ಥಾನ ಇದೆ ಜೊತೆಗೆ ಗಣಪತಿ. ಛಾಯಾದೇವಿ ಮತ್ತು ರಂಗನಾಥ ಸ್ವಾಮಿ. ವೀರಾಂಜನೇಯ. ದೇವನು ದೇವದುರ್ಗ ನೆಲೆಸಿರುವ ಪುಣ್ಯದ ದೇವಸ್ಥಾನ ಇದಾಗಿದ್ದು ಬರುವ ಭಕ್ತರಿಗೆ ಆ ದೇವರು ಒಳಿತನ್ನು ಉಂಟುಮಾಡಲಿ ಎಂದು ಹೇಳಿದರು. ಜೊತೆಗೆ ದೇವಸ್ಥಾನದ ಸಮಸ್ಯೆಗಳನ್ನು ಸಹ ಪೂಜಾರಿಯವರು ಹೇಳಿಕೊಂಡರು. ಸುತ್ತಮುತ್ತಲಿನ ಜನರು ಸೇರಿ ಜಯಂತಿಯನ್ನು ಆಚರಿಸಿದರು ಜೊತೆಗೆ ಮಹಾಪ್ರಸಾದವನ್ನು ಸಹ ನೆರವೇರಿಸಿದರು. ಸಂಪಾದಕ ಮತ್ತು ಪತ್ರಕರ್ತ ಶರಣಪ್ಪ ಗಂಗಾವತಿ ಕುಟುಂಬಸ್ಥರು ಭಾಗಿಯಾಗಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *