
ಶ್ರೀ ಮಠದ ಕಾರ್ಯ ಅತ್ಯಂತ ಶ್ಲಾಘನೀಯ ——
. ——– ಮಲ್ಲಿಕಾರ್ಜುನ ತೊದಲ ಬಾವಿ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ಕೊಪ್ಪಳ
ಕಳೆದ 17 ವರ್ಷಗಳಿಂದ 10ನೇ ತರಗತಿಗೆ ಬಂದಂತಹ ವಿದ್ಯಾರ್ಥಿಗಳಿಗೆ ಬೇಸಿಗೆ ಅವಧಿಯಲ್ಲಿ ಉಚಿತ ಊಟ ವಸತಿಯೊಂದಿಗೆ ತರಬೇತಿ ಕಾರ್ಯ ನಡೆಸಿಕೊಂಡು ಬರುತ್ತಿರುವ ಶ್ರೀಮಠದ ಕಾರ್ಯ ಅಭಿನಂದನಾರ್ಹ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ತೊದಲಬಾವಿ ಹೇಳಿದರು. ಅವರು ಶ್ರೀ ಗುರು ಚನ್ನಬಸವ ಸ್ವಾಮಿ ಉಚಿತ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಸೋಲೇ ಗೆಲುವಿನ ಸೋಪಾನ ಜೀವನದಲ್ಲಿ ಕೆಲವೊಮ್ಮೆ ಸೋಲಾಗುವುದು ಅತ್ಯಂತ ಸಹಜ ಸೋಲಿಗೆ ಎದೆಗುಂದಬಾರದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಸೋಲನ್ನೇ ಸೋಲಿಸಬೇಕೆಂದರು , ಇನ್ನೋರ್ವ ಅತಿಥಿಗಳಾದ ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಉಪಾಧ್ಯಕ್ಷರು ಹಾಗೂ ಸಿದ್ದಾಪುರ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಮತಿ ಪವಾರ್ ಮಾತನಾಡಿ ತಮ್ಮ ಜೀವನದ ಸ್ವಂತ ಅನುಭವಗಳನ್ನು ಹಂಚಿಕೊಂಡು ನೀವು ಸಹ ಯಶಸ್ಸಿನ ಕಡೆಗೆ ಹೆಜ್ಜೆ ಹಾಕಿ ಎಂದು ಶುಭ ಹಾರೈಸಿದರು. ರಜಾ ಅವಧಿಯಲ್ಲಿ ಸಹ ಈ ರೀತಿ ಬೆಳಿಗ್ಗೆ 10 ರಿಂದ 4 ಗಂಟೆವರೆಗೆ ತರಗತಿಗೆ ಹಾಜರಾಗಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಬಾಳು ಬಂಗಾರವಾಗಲಿ ಎಂದರು. ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಣೆಯಿಂದ ಯಾವುದೇ ಗೌರವದನವನ್ನು ಅಪೇಕ್ಷಿಸದೆ ತರಬೇತಿ ನೀಡುತ್ತಿರುವ ಶಿಕ್ಷಕ ಬಳಗ ಲಕ್ಷಕ್ಕೊಬ್ಬರು ಎಂದರು. ಸರಕಾರವು ಸಹ ಇಂತಹ ಶಿಕ್ಷಕ ಬಳಗದ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸಿದರು. ಇನ್ನೋರ್ವ ಅತಿಥಿಗಳಾದ ಶ್ರೀಶೈಲ್ ಮೇಟಿ ಮಾತನಾಡಿ ವಿದ್ಯಾರ್ಥಿಗಳು ಕಾಯ ವಾಚ ಮನಸ ಅಭ್ಯಾಸ ಮಾಡಿದರೆ ಯಶಸ್ಸು ತನ್ನಿಂದಾನೆ ಸಿದ್ಧಿಸುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಇಲ್ಲಿ ಕಲಿತ ಅಭ್ಯಾಸವನ್ನು ಸ್ಮರಣೆ ಮಾಡಿಕೊಳ್ಳುತ್ತಾ ಮುಂದೆ ನೀವು ಸಹ ಈ ರೀತಿ ಉಚಿತ ಸಾಮಾಜಿಕ ಸೇವೆ ಮಾಡುವಂತಹವರಾಗಿರಿ ಎಂದರು.
ಶ್ರೀ ಗುರು ಚನ್ನಬಸವ ಸ್ವಾಮಿ ಉಚಿತ ಕೋಚಿಂಗ್ ಸೆಂಟರ್ ನ ಸಂಚಾಲಕ ಸಿದ್ಧಲಿಂಗೇಶ್ವರ ಪೂಲಭಾವಿ ಮಾತನಾಡಿ ಕಾಯಕಯೋಗಿ ಚೆನ್ನಬಸವ ತಾತನವರ ಮಠ ಇದು ಯಾವುದೇ ಒಂದು ಜಾತಿಗೆ ಧರ್ಮಕ್ಕೆ ಸೀಮಿತವಾದ ಮಠ ಅಲ್ಲ. ಎಲ್ಲ ಧರ್ಮದ ಎಲ್ಲ ಜಾತಿಯ ಭಕ್ತರು ತಾತನಿಗೆ ನಡೆದುಕೊಳ್ಳುತ್ತಾರೆ. ತಾತನಿಗೆ ಭಕ್ತಿಯಿಂದ ಶ್ರದ್ಧೆಯಿಂದ ಬೇಡಿಕೊಂಡರೆ ಅದು ಶತಸಿದ್ಧ ಎಂದರು. ಈಗಾಗಲೇ 5,500 ಹೆಚ್ಚು ಮಕ್ಕಳು ಉಚಿತ ಕೋಚಿಂಗ್ ಸೆಂಟರ್ ನ ಇದರ ಸದುಪಯೋಗ ಪಡೆದಿದ್ದಾರೆ ಎಂದರು.
ವೇದಿಕೆ ಮೇಲೆ ಶ್ರೀಮಠದ ಧರ್ಮ ದರ್ಶಿಗಳಾದ ಈ ಚೆನ್ನಬಸಯ್ಯ ಸ್ವಾಮಿಗಳು, ವಡ್ಡಹಟ್ಟಿ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ್ ಛಲವಾದಿ, ಕೊಪ್ಪಳ ಜಿಲ್ಲಾ ಪಂಚಾಯತ್ ಸಿಬ್ಬಂದಿ ರಾಮಣ್ಣ ಉಪಸ್ಥಿತರಿದ್ದರು.9
ಶ್ರೀ ಮಠದ ಸಚಿನ್, ಅರುಣ್, ಉದಯ್ ಹಾಗು ಪುನೀತ್ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಕಾರ್ಯಕ್ರಮದ ನಂತರ ಉಪ ಕಾರ್ಯದರ್ಶಿಗಳು ತಾತನ ಗದ್ದುಗೆ ದರ್ಶನ ಪಡೆದರು.ಮತ್ತು ಶ್ರೀಮಠದ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.


Congratulations to whole team