ವಿದ್ಯಾರ್ಥಿಗಳು, ರೈತರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕನಕಗಿರಿ ಸ್ವಯಂ ಪ್ರೇರಿತ ಬಂದ್…

ಕನಕಗಿರಿ ತಾಲೂಕ ಆದ್ಯಂತ ಪಟ್ಟಣದಲ್ಲಿ ರೈತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಸ್ವಯಂ ಪ್ರೇರಿತ ಬಂದ್ ಬಾಡಿ ಬೇಡಿಕೆಗಳಿಗಾಗಿ ರಾಜ ಬೀದಿಯ ಮುಖಾಂತರ ಮೆರವಣಿಗೆ ಮಾಡುತ್ತಾ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಶಾಸಕರ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ನಂತರ ರೈತಪರ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು ಮಾತನಾಡಿ ಕನಕಗಿರಿ ತಾಲೂಕು ಆಗಿ 8 ವರ್ಷ ವಾದರು ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಮತ್ತು ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಿಗಿ ಕನಕಗಿರಿ ತಾಲೂಕಿಗೆ ಮಲತಾಯಿ ಧೋರಣೆ ಆಗುತ್ತಿದೆ ಎಂದು ಮಂಗಳವಾರದಂದು ವಿವಿಧ ಬೇಡಿಕೆಗಳ ಆಗ್ರಹಿಸಿ ಹಲವು ಕನ್ನಡಪರ ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಕನಕಗಿರಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದೆ.

ಕನಕಗಿರಿ ತಾಲೂಕು ಸಂಪೂರ್ಣ ನೀರಾವರಿ ಆಗಬೇಕು ಹಾಗೂ ರೈತರ ಬೆಳೆಗಳಿಗೆ ವರ್ಷ ಪೂರ್ತಿ ನೀರು ಒದಗಿಸಬೇಕು. ತರಕಾರಿ ಮಾರುಕಟ್ಟೆ ಖಾಯಂ ಆಗಿ ಸ್ಥಾಪಿಸಬೇಕು. ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ವರ್ಷ ಪೂರ್ತಿ ಖರೀದಿ ಕೇಂದ್ರವನ್ನು ತೆರೆಯಬೇಕು. ತಾಲೂಕಿನ ಸಿರವಾರ ಬಳಿ ಸ್ಥಾಪನೆಯಾಗಲಿರುವ ತೋಟಗಾರಿಕೆ ಪಾರ್ಕ್ ಕೇವಲ ಎರಡು ಬಾರಿ ಪೂಜೆಗೆ ಸೀಮಿತವಾಗಿದ್ದು, ಈ ಕೂಡಲೇ ಬೇಗನೆ ಸದರಿ ಪಾರ್ಕ್‌ನ್ನು ಅನುಷ್ಟಾನಗೊಳಿಸಬೇಕು.ತಾಲೂಕಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನು ಕನಕಗಿರಿಯಲ್ಲಿ ಸ್ಥಾಪಿಸಬೇಕು. ಉದಾಹರಣೆ ಕೆ.ಇ.ಬಿ ಇಲಾಖೆಯ ಉಪ ವಿಭಾಗ & ಎಇಇ ಆಫೀಸ್, ತೋಟಗಾರಿಕೆ ಆಫೀಸ್, ಕೃಷಿ ಇಲಾಖೆ, ಅಗ್ನಿಶಾಮಕ ದಳ, ಬಸ್ ಡಿಪೋ. ಸಬ್ ರಿಜಿಸ್ಟರ್ ಆಫೀಸ್, ಸರ್ವೆ ಇಲಾಖೆ. ಆಹಾರ ಇಲಾಖೆ, ಪಶು ಇಲಾಖೆ, ತಾಲೂಕ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮೇಲ್ದಾರ್ಜೆಗೆ ಏರಿಸುವುದು. PWD ಆಫೀಸ್, RTO ಅಧಿಕಾರಿಗಳ ಕಛೇರಿ, ನ್ಯಾಯಾಲಯ (ಕೋರ್ಟ್), ಶಾಸಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ (BEO) Office ಈ ಎಲ್ಲಾ ಇಲಾಖೆ ಮತ್ತು ಆಫೀಸ್ ಗಳನ್ನು ತ್ವರಿತವಾಗಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಈ ಕೂಡಲೇ ನೇಮಕ ಮಾಡಿ ಸಾರ್ವಜನಿಕರಿಗೆ ಸೇವೆ ಕಲ್ಪಿಸಬೇಕು ಹಾಗೂ ಈಗಿರುವ ಬಸ್ ನಿಲ್ದಾಣದ ಜಾಗೆಯಲ್ಲಿ ಪೋಲಿಸ್ ಠಾಣೆ ಸ್ಥಳಾಂತರ ಮಾಡಬೇಕು ಹಾಗೂ ಪೋಲಿಸ್ ಠಾಣೆಯ ಜಾಗದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಬೇಕು. ಕನಕಗಿರಿ ಪಟ್ಟಣ ಪಂಚಾಯಿತಿಯಲ್ಲಿ ಫಾರಂ ನಂಬರ್-3 ಕಾಲಮಿತಿಯೊಳಗೆ ನೀಡಬೇಕು. ಹಾಗೂ ಮನೆ ಇಲ್ಲದವರಿಗೆ ಮನೆ ನಿರ್ಮಿಸಬೇಕು. ನಿವೇಶನ ಇಲ್ಲದವರಿಗೆ ನಿವೇಶನ ಜೊತೆಗೆ ಮನೆಯನ್ನು ಒದಗಿಸಬೇಕು. ಕನಕಗಿರಿ ಸರ್ವೇ ನಂಬರ್ 3 ರಲ್ಲಿನ ಆಶ್ರಯ ಮನೆ ಯೋಜನೆಗಾಗಿ ಮಿಸಲಿಟ್ಟ ಜಾಗವನ್ನು ಬೇರೆಯವರು ಅತಿಕ್ರಮಣ ಮಾಡಿಕೊಂಡಿದ್ದರೆ, ಕೂಡಲೇ ಅವರನ್ನು ತೆರವುಗೊಳಿಸಿ. ಸಂಬಂಧಪಟ್ಟವರಿಗೆ ಹಕ್ಕು ಪತ್ರ ನೀಡಿದ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಬೇಕು ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ಎಲ್ಲಾ ಸಿಬ್ಬಂದಿಗಳನ್ನು ಈ ಕೂಡಲೇ ನೇಮಕ ಮಾಡಬೇಕು.ಕನಕಗಿರಿ APMC ಯಲ್ಲಿ ಬ್ಲೂ ಪ್ರಿಂಟ್ ಪ್ರಕಾರ ನಕಾಶೆಯಲ್ಲಿ ಇರುವಂತೆ 10 ಫೀಟ್ ಎತ್ತರದಲ್ಲಿ ಕಾಂಪೌಂಡನ್ನು ನಿರ್ಮಿಸಬೇಕು ಹಾಗೂ ದಲ್ಲಾಳಿ ವರ್ತಕರು ನಿವೇಶನಕ್ಕಿಂತ ಹೆಚ್ಚು ಜಾಗ ಒತ್ತುವರಿ ಮಾಡಿದ್ದರೆ ಅವರಿಗೆ ನೀವು (APMC ಅಧಿಕಾರಿಗಳು) ಇಂಜಿನಿಯರನ್ನು ಕರೆಯಿಸಿ ನಕಾಶೆ ದಂತೆ ಅಗಲ ಉದ್ದದ ರೀತಿ ಸರಿಯಾಗಿ ಕಟ್ಟಿಕೊಂಡಿದ್ದಾರೆ ಅಥವಾ ಇಲ್ಲ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಹಾಗೂ ಹೆಚ್ಚಿಗೆ ಕಟ್ಟಿಕೊಂಡಿದ್ದರೆ ಅಥವಾ ನಿರ್ಮಿಸಿದ್ದರೆ ತೆರವು ಮಾಡಬೇಕು.ಕನಕಗಿರಿ ತ್ರಿವೇಣಿ ಸಂಗಮವನ್ನು ಸ್ವಚ್ಛಗೊಳಿಸಿ ಪ್ರಮುಖ ವಾರ್ಡುಗಳು ಚರಂಡಿ ನೀರನ್ನು ತ್ರಿವೇಣಿ ಸಂಗಮಕ್ಕೆ ಹೋಗುವುದನ್ನು ತಡೆದು ಬೈಪಾಸ್ ಚರಂಡಿ ನಿರ್ಮಿಸಿ ಸ್ವಚ್ಛತೆಯನ್ನು ಕಾಪಾಡಬೇಕು. ಮಲ್ಲಯ್ಯ ತಾತನ ದೇವಸ್ಥಾನದಿಂದ ಕನಕಚಲಪತಿ ಬ್ರಿಡ್ಜ್ ಕೆಳಗೆ ಅಂಡರ್ ಗೌಂಡ್ ಚರಂಡಿ ಮಾಡಿ ಸ್ವಚ್ಛತೆಯನ್ನು ಕಾಪಾಡಬೇಕು ದೇವಸ್ಥಾನಕ್ಕೆ ಬಂದ ಭಕ್ತರಿಗೆ ಸ್ನಾನಕ್ಕೆ ಸ್ನಾನಗೃಹ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ಅಲ್ಲದೇ ಬರುವಂತಹ ಭಕ್ತರ ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ದೇವಸ್ಥಾನದ ಜಾನುವಾರುಗಳಿಗೆ ಗೋ ಶಾಲೆ ನಿರ್ಮಿಸಬೇಕು ಹಾಗೂ ಪ್ರತಿ ವರ್ಷಕ್ಕೆ ಎರಡು ಬಾರಿ ಸಾಮೂಹಿಕ ವಿವಾಹವನ್ನು ಕನಕಾಚಲಪತಿ ದೇವಸ್ಥಾನದಲ್ಲಿ ಮಾಡಬೇಕು. ಕನಕಗಿರಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು.ಕನಕಗಿರಿ ತಾಲೂಕಿನ ಪ್ರತಿ ಹಳ್ಳಿಗೆ ಒಂದರಂತೆ ಐ ಮಾಸ್ಕ್ ಲೈಟ್ ನಿರ್ಮಿಸಬೇಕು ಹಾಗೂ ಹಳ್ಳಿಯಲ್ಲಿ ರಸ್ತೆಗಳು ದುರಸ್ತಿಯಾಗಿವೆ ಮರು ಡಾಂಬರೀಕರಣ ಮಾಡಬೇಕು. ರೈತರ ಜಮೀನಿಗೆ ಹೋಗು ಬರುವ ರಸ್ತೆಗಳು ಹಳೆ ಮ್ಯಾಪಿನಂತೆ ಈ ಕೂಡಲೇ ಸರಿಪಡಿಸಿ ಸಿಸಿ ಅಥವಾ ಡಾಂಬರೀಕರಣ ಮಾಡಬೇಕು ಹಾಗೂ ದರೋಜಿ ಗಂಗಾವತಿ- ಕನಕಗಿರಿ-ಬಾಗಲಕೋಟೆ ಹೊಸ ರೈಲು ಯೋಜನೇಯು ಕೇವಲ ಸರ್ವೆಗೆ ಮಾತ್ರ ಸೀಮತವಾಗಿದ್ದು, ಈ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು.ತಾಲೂಕಿನಾದ್ಯಂತ ಕೆಲ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಈ ಕೂಡಲೇ ಭರ್ತಿ ಮಾಡಬೇಕು. ಅಲ್ಲದೆ ತಾಲೂಕಿನ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶೌಚಾಲಯವನ್ನು ನಿರ್ಮಿಸಬೇಕು. ಇದಲ್ಲದೆ ಕನಕಗಿರಿ ಪಟ್ಟಣದ ಕೆ.ಪಿ.ಎಸ್ ಬಾಲಕಿಯರ ಶಾಲೆಯಲ್ಲಿ ಆಟದ ಮೈದಾನದ ಕೊರತೆ, ಶೌಚಾಲಯ ವ್ಯವಸ್ಥೆ, ಕೆಲ ಶಾಲಾ ಕೊಠಡಿಗಳು ದುರಸ್ತಿಯಲ್ಲಿದ್ದು, ಕಾರಣ ಈ ಕೂಡಲೆ ಹಳೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಬೇಕು, ಇದಲ್ಲದೆ ಶಿಕ್ಷಕರಿಗೆ ಶಿಕ್ಷಣ ಭೋದನೆ ಮಾಡವುದು ಬಿಟ್ಟು ಬೇರೆ ಯಾವುದೆ ಇತರೆ ಕೆಲಸಕ್ಕೆ ನಿಯೋಜನೆ ಮಾಡಬಾರದು. ಕೊಪ್ಪಳದಿಂದ ಕನಕಗಿರಿಗೆ ರಾತ್ರಿ 12 ಗಂಟೆಯ ವರೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕನಕಗಿರಿ ಪಟ್ಟಣದ ಬಾಗವಾನರ ಓಣಿಯಿಂದ ಕೆ.ಪಿ.ಎಸ್ ಮತ್ತು ಶ್ರೀ ಗುರು ಚೆನ್ನಮಲ್ಲ ಸ್ವಾಮಿ ಶಾಲೆಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಶಿಫಲಗೊಂಡಿದೆ ಈ ಕೂಡಲೇ ಸರಿಪಡಿಸಿ. ಕನಕಗಿರಿ ಪಟ್ಟಣದಲ್ಲಿ ಎಲ್ಲಾ ವಾರ್ಡುಗಳ ರಸ್ತೆಗಳು ಹದೆಗೆಟ್ಟಿದ್ದು ಈ ಕೂಡಲೇ ಸರಿ ಪಡಿಸಬೇಕು.ಕನಕಗಿರಿಯಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮರಳು, ಮರ್ಮು ಹಾಗೂ ಯುವಕರು ಮಟ್ಕಾ, ವಾರದ ಬಡ್ಡಿ ದಂದೆಗೆ ಬಲಿಯಾಗುತ್ತಿದ್ದರು ಪೋಲಿಸರು ಗಮನ ಹರಿಸಿದೆ ದಿನದಿಂದ ದಿನಕ್ಕೆ ಜಾಸ್ತಿ ಆಗಿರುವ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿದರು ಸಹ ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದ್ದಾರೆ. ಇಲ್ಲಿಯವರೆಗೂ ಸಾರ್ವಜನಿಕರಿಗಾಗಲಿ ಅಥವಾ ರೈತರಿಗಾಗಲಿ ನ್ಯಾಯ ಸಿಕ್ಕಿರುವುದಿಲ್ಲ. ತ್ವರಿತವಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳು ಕನಕಗಿರಿ ಪೋಲೀಸರಿಗೆ ಸೂಕ್ತ ಮಾಹಿತಿ ನೀಡಿ, ಅನ್ಯಾಯವಾದವರಿಗೆ ತ್ವರಿತವಾಗಿ ನ್ಯಾಯ ಕೊಡಿಸಬೇಕು. ಕನಕಗಿರಿ ಪಟ್ಟಣದಲ್ಲಿರುವ ಮದ್ಯದ ಅಂಗಡಿಗಳು ಜನ ಬಿಡಾರ ಪ್ರದೇಶದಲ್ಲಿದ್ದು, ಈ ಕೂಡಲೇ ಪಟ್ಟಣದ ಹೊರಗಡೆ ಸ್ಥಳಾಂತರಿಸಬೇಕು.

ಕನಕಗಿರಿಯಲ್ಲಿ 700 ಭಾವಿ, 700 ದೇವಸ್ಥಾನ, 700 ಗೊಲಕಿ (ಹಟ್ಟಿ) ಗಳು ಇರುವ ಕರ್ನಾಟಕ ಏಕೈಕ ಪಟ್ಟಣ ಎಂಬ ಬಿರುದು ನಮ್ಮ ಕನಕಗಿರಿಗೆ ಇದೆ. ಈಗ 2026 ರಲ್ಲಿ 700 ಬಾವಿಗಳಲ್ಲಿ ಕೆಲವು ಮಾತ್ರ ಇವೆ ಇನ್ನು ಉಳಿದವುಗಳನ್ನು ತ್ವರಿತವಾಗಿ ಪುರಾತತ್ವ ಇಲಾಖೆ ಅಥವಾ ಸಂಬಂಧ ಪಟ್ಟ ಇಲಾಖೆ ಈ ಕೂಡಲೇ ಕ್ರಮವಹಿಸಿ, ಅದೇ ರೀತಿಯಾಗಿ 700 ದೇವಸ್ಥಾನಗಳನ್ನು ಕೂಡ ಸಂರಕ್ಷಿಸಬೇಕು ಮತ್ತು ಕನಕಗಿರಿ ರಾಜಭೀದಿಯನ್ನು ಒತ್ತುವರಿ ತೆರವು ಮಾಡಬೇಕು, ಒತ್ತುವರಿ ಮಾಡಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಪಟ್ಟಣದ ಪ್ರಮುಖ ಸರ್ಕಲ್‌ಗಳಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಬೇಕು.ಕನಕಗಿರಿಯಲ್ಲಿ ಕಳಪೆ ಬೀಜದ ಹಾವಳಿ ಹೆಚ್ಚಾಗಿರುತ್ತದೆ ಭತ್ತ. ಮೆಕ್ಕೆಜೋಳ. ಸೂರ್ಯಕಾಂತಿ, ಹತ್ತಿ, ಶೇಂಗಾ, ಸಜ್ಜೆ, ತೊಗರಿ ಇನ್ನಿತರ ಬೀಜಗಳು ಕಳಪೆ ಇದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜಾಗೃತರಾಗಿ ರೈತರಿಗೆ ಪ್ರತಿ ವರ್ಷ ಈ ಕಳಪೆ ಬೀಜದ ಹಾವಳಿಯನ್ನು ತಡೆಯಲು ಸೂಕ್ತ ಕ್ರಮ ವಹಿಸಿ. ರೈತರಿಗೆ ನ್ಯಾಯ ಒದಗಿಸಬೇಕು. 2025 & 26 ನ ಸಾಲಿನಲ್ಲಿ ಕಳಪೆ ಬತ್ತದ ಬೀಜದಿಂದ ಹಾಗೂ ಮೆಕ್ಕೆಜೋಳ ಬೀಜದಿಂದ ನಷ್ಟ ಆಗಿರುವ ರೈತರಿಗೆ ಬೀಜದ ಕಂಪನಿಯವರಿಂದ ಪರಿಹಾರ ವಿತರಿಸಬೇಕು. ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಂಡು ರೈತರಿಗೆ ನ್ಯಾಯ ಕೊಡಿಸಬೇಕು.ರೈತರ ಸಾಲ ಮನ್ನಾ ಮಾಡಬೇಕು. ನಿಮ್ಮ ಕೈಯಲ್ಲಿ (ಸರ್ಕಾರದ) ಆಗದೆ ಇದ್ದರೆ, ಸ್ವಾಮಿನಾಥನ್ ವರದಿ ಜಾರಿ ಮಾಡಿ ರೈತರಿಗೆ ನ್ಯಾಯ ಕೊಡಬೇಕು ಎಂದು ಕನಕಗಿರಿ ಪಟ್ಟಣದಲ್ಲಿ ವಿವಿಧ ಸಂಘಟನೆ ಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ತಾಲೂಕನಾ ಗ್ರಾಮದ ಜನರು ಸ್ವಯಂ ಪ್ರೇರಣೆ ಬಂದ ಮಾಡಲಾಗಿದೆ.
ನಂತರ ಕನ್ನಡಪರ ಮತ್ತು ರೈತ ಸಂಘಟನೆಯ ಕಾರ್ಯಕರ್ತರು ವಿದ್ಯಾರ್ಥಿಗಳು ರೈತಾಪಿ ಜನ ಊರಿನ ಜನ ಸಾಮಾನ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿ ಮಾನ್ಯ ತಾಲೂಕು ಆಡಳಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ದುರ್ಗದಾಸ್ ಯಾದವ್ ಹೋರಾಟಗಾರರು ರೈತ ಸಂಘದ ನಗರ ಘಟಕದ ಅಧ್ಯಕ್ಷರು ವೀರೇಶ್ ಬಿ. ಕಾರ್ಯಾಧ್ಯಕ್ಷರು ಲಾಲ್ ಸಾಬ್ ಜುಲಿಕೇರಿ ತಾಲೂಕ್ ಗೌರವಾಧ್ಯಕ್ಷರು ಬಸವರಾಜ್ ದೇಸಾಯಿ. ನಗರ ಘಟಕದ ರೈತ ಸಚಿವರು ಮುದಿಯಪ್ಪ ಕುರುಬರ. ತಾಲೂಕ್ ಕಾರ್ಯಾಧ್ಯಕ್ಷರಾದ ಪರಶುರಾಮ್. ಬಸ್ರಾಳ್ ಗ್ರಾಮದ ಅಧ್ಯಕ್ಷರಾದ ಸಣ್ಣಹನುಮನ ಗೌಡ. ಅಧ್ಯಕ್ಷರಾದ ಪಂಪಣ್ಣ ನಾಯ್ಕ. ಹುಲಿಹೈದರ್. ಸಗರಪ್ಪ ಕಂಪ್ಲಿ.ಕನ್ನಡಪರ ಸಂಘಟನೆಗಳ ತಾಲೂಕ ಅಧ್ಯಕ್ಷರಾದ ಪಲ್ಲವಿ ಶರಣಪ್ಪ ಜಿಲ್ಲಾಧ್ಯಕ್ಷರಾದ ವೀರಭದ್ರಪ್ಪ. ಶರಣಪ್ಪ ಸಜ್ಜನ್. ಹರೀಶ್ ಪೂಜಾರ್ . ಮುಖಂಡರಾದ ಶರಣಪ್ಪ ಕೆಸರಟ್ಟಿ. ಮರಿಯಪ್ಪ ಹುಗ್ಗಿ ಕನಕಾಪುರ ಅಧ್ಯಕ್ಷರು. ಮರಿಯಪ್ಪ .ಮೊಹಮ್ಮದ್ ರಫಿ ನಾಗರಾಜ್ ಕಿನ್ನಾಳ. ಮಲ್ಲಮ್ಮ ಹೂಗಾರ್ ಮಹಿಳಾ ಘಟಕದ ಅಧ್ಯಕ್ಷರು ಕನಕಗಿರಿ. ಅಧ್ಯಕ್ಷರು ದೇವಮ್ಮ. ಸಹಕಾರ ಸಂಘದ ಸದಸ್ಯರು ಸಿಂಧು ಬಲ್ಲಾಳ. ಕೃಷ್ಣ ಕಾಕಿ. ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ಸುಭದ್ರ. ಬಸವರಾಜ್ ಹುಳ್ಳಿ. ಬಸವರಾಜ ಕೋರಿ. ರಾಮಣ್ಣ ಉಪ್ಪಾರ್. ಅಯ್ಯನಗೌಡ್ರೆಡ್ಡಿ ಅಳ್ಳಳ್ಳಿ. ಹನುಮೇಶ ಡಿಶ್. ಸುತ್ತಮುತ್ತ ಹಳ್ಳಿಯ ಹೋರಾಟಗಾರರು ಇನ್ನಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಊರಿನ ಗುರುಹಿರಿಯರು ಉಪಸ್ಥಿತರಿದ್ದರು.

ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರ -9035332032
