ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸೇವಾ ಯೋಜನೆ, ಶಿಬಿರ…

ಗಂಗಾವತಿ. ಸಮೀಪದ ಹಿರೇ ಬೆಣಕಲ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಗಂಗಾವತಿಯ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನದ ಶಿಬಿರದ ಅಂಗವಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಕಳೆದ ಮಂಗಳವಾರದಂದು ಜರುಗಿದ ಈ ಕಾರ್ಯಕ್ರಮದಲ್ಲಿ ಶಿವಮೂರ್ತಿ ಗೊಲ್ಲರ ಮಲ್ಲೇಶಪ್ಪ ಚಿಕ್ಕಬೇಣಕಲ್ ಗ್ರಾಂ. ಪಂ. ಅಧ್ಯಕ್ಷರು ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಸಮಾರಂಭದ ಉದ್ದೇಶಿಸಿ ಮಾತನಾಡಿದ ಅವರು ಏಳು ದಿನದ ಈ ಒಂದು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದ್ದು. ಗ್ರಾಮದ ಸ್ವಚ್ಛತೆ ಆರೋಗ್ಯ ಸೇರಿದಂತೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮಸ್ಥರಿಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದ ಅವರು ಪ್ರತಿಯೊಬ್ಬರೂ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು , ಹಾಗೆಯೇ ಕೃಷಿ ಮಹಾವಿದ್ಯಾಲಯ ಗಂಗಾವತಿಯ ವಿಶೇಷ ಅಧಿಕಾರಿಗಳು ಡಾ.ಯಂಜೇರಪ್ಪ ಎಸ್. ಟಿ, ಮೊ. ದೇ. ವ. ಶಾಲೆಯ ಮುಖ್ಯ ನಿಲಯ ಪಾಲಕರಾದ ಭೀಮನಗೌಡ, ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳಾದ ಡಾ. ಕಿರಣ್ ಕುಮಾರ್, ಡಾ. ಎಸ್. ಬಿ. ಗೌಡರ್ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಶ್ರೀಕಾಂತ್ ಮತ್ತು ಇನ್ನಿತರ ಪ್ರಧ್ಯಾಪಕರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವು ಸೂಸೂತ್ರವಾಗಿ ನಡೆಯಿತು.ತದನಂತರ ಸಾಯಂಕಾಲದ ವೇಳೆಗೆ ಹಿರೇಬೆಣಕಲ್ ಗ್ರಾಮದಲ್ಲಿ ವಿದ್ಯಾರ್ಥಿಗಳಿಂದ “ಭೇಟಿ ಬಚಾವೋ ಭೇಟಿ ಪಾದವೋ ” ಮತ್ತು “ಮಹಿಳೆಯರ ಹಕ್ಕುಗಳ” ಬಗ್ಗೆ ಬೀದಿ ನಾಟಕವನ್ನು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾಯಿತು.
