ಶ್ರೀ ಸಾಯಿ ಪ್ರಕಾಶ ನಿರ್ದೇಶನದಲ್ಲಿ ಸೆಪ್ಟೆಂಬರ್ 10 ನೂತನ ಕನ್ನಡ ಚಿತ್ರ ಬಿಡುಗಡೆ…. ಚಿತ್ರತಂಡದವರಿಂದ ಸುದ್ದಿಗೋಷ್ಠಿ.

ಗಂಗಾವತಿ. ಕನ್ನಡ ಚಲನಚಿತ್ರ ರಂಗದ ಹಿರಿಯ ಕಲಾವಿದರು ನಟಿಸಿ 105ಕ್ಕೂ ಹೆಚ್ಚು ಕನ್ನಡ ಚಿತ್ರ ಗಳನ್ನು ನಿರ್ದೇಶಿಸಿರುವ ಶ್ರೀ ಸಾಯಿ ಪ್ರಕಾಶ್ ಅವರ ದಕ್ಷ ನಿರ್ದೇಶನದಲ್ಲಿ ಸಪ್ಟೆಂಬರ್ 10 ಎಂಬ ಕನ್ನಡ ಚಲನಚಿತ್ರ ಜುಲೈ ಎರಡನೆಯ ವಾರದಂದು ರಾಜ್ಯದ್ಯಂತ 60 ಕೇಂದ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಹಿರಿಯ ನಿರ್ದೇಶಕ ಶ್ರೀ ಸಾಯಿಪ್ರಕಾಶ್ ಕಲಾವಿದರುಗಳಾದ ಯುವ ನಟ ಶ್ರೀನಿವಾಸ ಸೇರಿದಂತೆ ಸ್ಥಳೀಯ ಕಲಾವಿದರು ಗಳಾದ ಶರದ್ ದಂಡಿನ್. ನ್ಯಾಯವಾದಿ ನಾಗರಾಜ್ ಗುತ್ತೇದಾರ್ ವಿಷ್ಣು ತೀರ್ಥ ಜೋಶಿ ಹೇಳಿದರು. ಅವರು ಸೋಮವಾರದಂದು ನಗರದ ಖಾಸಗಿ ಹೋಟೆಲಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಪ್ರತಿ ವರ್ಷ ಆತ್ಮಹತ್ಯೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರ ಅಲ್ಲ ಎಂಬ ಪರಿಕಲ್ಪನೆಯನ್ನು ಚಿತ್ರದ ಕಥಾವಸ್ತು ಹೊಂದಿದೆ.. ಕ್ಷುಲ್ಲಕ್ಕೆ ಕಾರಣಕ್ಕೆ ಪ್ರಸ್ತುತ ದಿನಮಾನಗಳಲ್ಲಿ ಆತ್ಮಹತ್ಯೆಗೆ ಮುಂದಾಗುವುದು ಸಮಂಜಸ ಅಲ್ಲ ಎಂಬ ಜಾಗೃತಿ ಮೂಡಿಸುವ ಕುಟುಂಬ ಸಮೇತವಾಗಿ ನೋಡಬಹುದಾದ ಚಿತ್ರ ಇದಾಗಿದೆ ಎಂದು ಚಿತ್ರಕಲದವರು ಸಮಗ್ರ ಮಾಹಿತಿ ನೀಡಿದರು. ಶಶಿಕುಮಾರ್ ಶ್ರೀನಿವಾಸ್ ಮೂರ್ತಿ ಪದ್ಮ ವಾಸಂತಿ ಸಿಹಿ ಕಹಿ ಚಂದ್ರು. ಇತರರು ಚಿತ್ರದಲ್ಲಿ ನಟಿಸಲಿದ್ದಾರೆ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಸಂಗೀತ ಮನ ಮಿಡಿಯುವಂತಿದೆ. ಯಾವುದೇ ಹೊಡೆದಾಟ ಬಡಿದಾಟಕ್ಕೆ ಅವಕಾಶ ನೀಡದೆ ಸಮಾಜಕ್ಕೆ ಒಂದು ಉತ್ತಮವಾದ ಸಂದೇಶವನ್ನು ಕಲ್ಪಿಸುವ ಉದ್ದೇಶದಿಂದ ಈ ರಾಜಮ್ಮ ಅವರ ನಿರ್ಮಾಣದಲ್ಲಿ ಬೆಳ್ಳಿತೆರೆಗೆ ಪಾದಾರ್ಪಣೆ ಗೊಳ್ಳಲಿದೆ ಎಂದು ತಿಳಿಸಿದರು. ಕನ್ನಡ ಚಿತ್ರರಂಗ ಅಳಿವು ಉಳಿವು ಕುರಿತಂತೆ ಸಮಗ್ರ ಮಾಹಿತಿ ನೀಡಿದರು
