ಬಹುದಿನಗಳ ಕನಸು ನನಸು ಮಾಡಿದ ಶಾಸಕ ಗಾಲಿ ಜನಾರ್ಧನ್ ರೆಡ್ಡಿ…

ಗಂಗಾವತಿ.22 ಗಂಗಾವತಿ ವಿಧಾನ ಸಭಾ ಕ್ಷೇತ್ರದ ಇರಕಲ್ಲಗಡ ಗ್ರಾಮದಲ್ಲಿ ಬಹುದಿನಗಳಿಂದ ಆಟೋ ಚಾಲಕರ ಬೇಡಿಕೆಯಾಗಿದ್ದ ನೇಮ್ ಪ್ಲೇಟ್ ಮತ್ತು ಆಟೋ ಸ್ಟ್ಯಾಂಡನ್ನು ಶಾಸಕರ ಅನುಪಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಊರಿನ ಹಿರಿಯರು ಇಂದು ಅನಾವರಣಗೊಳಿಸಿದರು ಈ ಹಿಂದೆ ಶಾಲಾ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ್ದ ಶಾಸಕರನ್ನು ಭೇಟಿ ಮಾಡಿದ ಆಟೋ ಚಾಲಕರ ಸಂಘದವರು ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದರು ಅಂದು ಭರವಸೆ ಕೊಟ್ಟ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಕೇವಲ ಹತ್ತು ದಿನಗಳಲ್ಲಿ ಆಟೋ ಚಾಲಕರ ಮನವಿಯನ್ನು ಸ್ವೀಕರಿಸಿ ಭರವಸೆ ಪೂರ್ಣಗೊಳಿಸಿದ್ದಾರೆ ಆಟೋ ಸ್ಟ್ಯಾಂಡನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಪಕ್ಷದ ಯುವ ಮುಖಂಡ ಸಂಗಮೇಶ ಬಾದವಡಗಿ ಸುಮಾರು ದಿನಗಳಿಂದ ಆಟೋ ಸಂಘದವರಿಂದ ಮನವಿ ಇತ್ತು ಮಾನ್ಯ ಶಾಸಕರು ಜನಾರ್ಧನ್ ರೆಡ್ಡಿ ಅವರು ಆಟೋ ಸ್ಟ್ಯಾಂಡ್ ಮತ್ತು ನೇಮ್ ಪ್ಲೇಟ್ ಉದ್ಘಾಟನೆಗೆ ಸಹಾಯಧನವನ್ನು ಕೊಟ್ಟಿದ್ದರು ಅದೇ ಪ್ರಕಾರ ಇಂದು ನಾವು ಉದ್ಘಾಟನೆ ಮಾಡಿ ಅವರ ಬೇಡಿಕೆ ಈಡೇರಿಸಿದೆವು ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಗಂಗಾಧರ ಹಿರೇಮಠ, ಕಾಂಗ್ರೆಸ್ ಯುವ ಮುಖಂಡ ಮಾರುತಿ ತೋಟಗಂಟಿ,ಯುವ ಮುಖಂಡ ಶಂಕರ್ ನಾಯಕ್, ರಾಮಣ್ಣ ಚೌಡ್ಕಿ, ಗ್ರಾಮ ಪಂಚಾಯತ್ ಸದಸ್ಯರು ಶಿವಕುಮಾರ್ ಉಪ್ಪಾರ್, ಮರಿಯಪ್ಪ ವಡರ್ಕಲ್, ಬಸವರಾಜ್ ಭೋವಿ, ಗುರುಸ್ವಾಮಿ ಹಿರೇಮಠ, ಊರಿನ ಎಲ್ಲಾ ಹಿರಿಯರು ಯುವಕರು ಪಾಲ್ಗೊಂಡಿದ್ದರು.
