ಕಾಲುವೆ ದಾಟಲು ಹೋಗಿ ಸ್ಕಿಡ್ ಆಗಿ ವಿದ್ಯಾರ್ಥಿನಿ ನಾಪತ್ತೆ( ಸಾವಿನ ಶಂಕೆ)

ಗಂಗಾವತಿ. ತಾಲೂಕಿನ ವೆಂಕಟಗಿರಿ ಹೋಬಳಿಯ ಕರೆ ಕಲ್ಲಪ್ಪನ ಕ್ಯಾಂಪ್ ಹತ್ತಿರ ಶಾಲಾ ವಿದ್ಯಾರ್ಥಿನಿ ಕಾಲುವೆ ದಾಟುವ ಸಮಯದಲ್ಲಿ ಸ್ಕಿಡ್ ಆಗಿ ಕಾಳಿವಿಕೆ ಜಾರಿ ಬಿದ್ದಿದ್ದಾಳೆ. ವಿಷಯ ತಿಳಿದಂತೆ ಪಿಎಸ್ಐ ಮತ್ತು ಅಗ್ನಿಶಾಮಕ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿಯ ಕಾಣ ಸಿಗದ ಪ್ರಯುಕ್ತ ಸಾವು ಗೊಂಡೀ ರಬಹುದು ಎಂದು ಶಂಕಿಸಲಾಗಿದೆ ಸದರಿ ವಿದ್ಯಾರ್ಥಿನಿ ಚೈತ್ರ ತಂದೆ ನರಿಯಪ್ಪ ಯಾದವ್ ಏಳನೆಯ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಿಕೇರಿ ಕ್ಯಾಂಪ್ ವಯಸ್ಸು 13.. ಎಂದು ತಿಳಿದುಬಂದಿದೆ ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
