ಶ್ರೀರಾಮನಗರದ ವಾಸವಿ ದೇವಸ್ಥಾನದಲ್ಲಿ ಆಶಾಡ ಮಾಸದ ಪ್ರಯುಕ್ತ ಬಾಗಿಣ ಕಾರ್ಯಕ್ರಮ…

ಶ್ರೀರಾಮನಗರದ ವಾಸವಿ ದೇವಸ್ಥಾನದಲ್ಲಿ ಆಶಾಡ ಮಾಸದ ಪ್ರಯುಕ್ತ ಬಾಗಿಣ ಕಾರ್ಯಕ್ರಮ….

ಗಮನ ಸೆಳೆದ ವಾಸವಿ ಅಮ್ಮನವರ ಅಲಂಕಾರ.

ಗಂಗಾವತಿ: ಭಾನುವಾರದಂದು ತಾಲ್ಲೂಕಿನ ಶ್ರೀರಾಮನಗರದ ವಾಸವಿ ದೇವಸ್ಥಾನದಲ್ಲಿ ಆಶಾಡ ಮಾಸದ ಪ್ರಯುಕ್ತ ವಿಶೇಷವಾಗಿ ಬಾಗಿಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ಗ್ರಾಮದ ಈಶ್ವರ ದೇವಸ್ಥಾನದಿಂದ ವಾಸವಿ ದೇವಸ್ಥಾನದವರೆಗೆ ಅದ್ಧೂರಿ ಮೆರವಣಿಗೆಯನ್ನು ನೆರವೇರಿಸಲಾಯಿತು.
ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ, ಶ್ರೀ ಮಹಾಲಕ್ಷ್ಮಿ ದೇವಿ ಮತ್ತು ಸರಸ್ವತಿ ದೇವಿ ಅಮ್ಮನವರಿಗೆ ತರಕಾರಿ ಅಲಂಕಾರ ಆಕರ್ಷಣಿಯವಾಗಿತ್ತು.
ಗ್ರಾಮವು ಸೇರಿದಂತೆ ಸುತ್ತಲಿನ ಗ್ರಾಮದ ಗ್ರಾಮಸ್ಥರು ದೇವಿಯ ದರ್ಶನವನ್ನು ಪಡೆದರು. ಮಧ್ಯಾಹ್ನ ಅನ್ನಸಂತರ್ಪಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀರಾಮನಗರ ಆರ್ಯವೈಶ್ಯ ಸಮಾಜ‌ದ ಅಧ್ಯಕ್ಷರಾದ ಎನ್.ಮೋಹನ್, ನಿರ್ದೇಶಕರಾದ ಕೆ.ಪದ್ಮನಾಭ, ಉಪಾಧ್ಯಕ್ಷ ಎಂ ಸುರೇಶ್, ಕಾರ್ಯದರ್ಶಿ ಎಂ ಶ್ರೀನಿವಾಸ್ ರಾವ್, ಖಜಾಂಚಿ ಕೆ.ನಾಗೇಶರಾವ್, ಗೌರವಾಧ್ಯಕ್ಷ ಎಸ್ ವೆಂಕಟರತ್ನಂ, ಸದಸ್ಯರಾದ ರಾಮರಾವ್ ಬಾಲಾಜಿ, ಶರಣಪ್ಪ ಶೆಟ್ಟಿ, ಪ್ರಹ್ಲಾದ್, ಕೆ.ಸುಭಾಷ್ ಶೆಟ್ಟಿ ಸೇರಿದಂತೆ ಇನ್ನುಳಿದ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು, ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *