ಭಾನುವಾರ ಟಿ.ಎಂ.ಎ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ : ಡಾ.ಕೆ.ಸಿ ಕುಲಕರ್ಣಿ…

ಭಾನುವಾರ ಟಿ.ಎಂ.ಎ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ : ಡಾ.ಕೆ.ಸಿ ಕುಲಕರ್ಣಿ..

ಗಂಗಾವತಿ: ನಗರದ ಕೊಪ್ಪಳ ರಸ್ತೆಯ ಪ್ರಶಾಂತ ನಗರದಲ್ಲಿರುವ ಅನುದಾನಿತ ಟಿ.ಎಂ.ಎ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದ 2009-10 ನೇ ಸಾಲಿನಲ್ಲಿ ಕಲಿತ ಪ್ರಶಿಕ್ಷಣಾರ್ಥಿಗಳಿಂದ ಕಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಮೇ 18 ರ ಭಾನುವಾರದಂದು ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಸಿ ಕುಲಕರ್ಣಿ ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ತಿಳಿಸಿದ್ದಾರೆ. ಈ ನಿಮಿತ್ಯ ಆತ್ಮೀಯ ಗುರುಗಳು ಹಾಗು ಸ್ನೇಹಿತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ. ಸುಮಾರು 15 ವರ್ಷಗಳ ಬಳಿಕ ಎಲ್ಲಾ ಸ್ನೇಹಿತರು ಒಗ್ಗೂಡುತ್ತಿರುವುದು ಹಳೆ ನೆನಪುಗಳ ಮೆಲುಕು ಹಾಕುವಂತಿದೆ.

Leave a Reply

Your email address will not be published. Required fields are marked *