ಗೃಹಬಳಕೆ ಗ್ಯಾಸ್ ಸಿಲೆಂಡರ್‌ಗಳ ಅವೈಜ್ಞಾನಿಕ ಡಂಪ್ 40ಕ್ಕೂ ಹೆಚ್ಚು ಸಿಲೆಂಡರ್ ಜಪ್ತಿ.

ಗಂಗಾವತಿ ನಗರದ ಪ್ರಶಾಂತ್ ನಗರ ಈರಣ್ಣ ಗುಡಿ ಹತ್ತಿರ. ಜುಲೈ ನಗರ ತಾಜ್ ಆಟೋ ವರ್ಕ್. ಕೊಪ್ಪಳ ರೂಡಿನಲ್ಲಿ ಬರುವ ಸ್ವರೂಪ ಗ್ಯಾಸ್ ರಿಪೇರಿ ಸೆಂಟರ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಗೃಹಬಳಕೆಗೆ ಉಪಯೋಗವಾಗುವ ಗ್ಯಾಸ್ ಸಿಲೆಂಡರ್‌ಗಳನ್ನು ಅವೈಜ್ಞಾನಿಕವಾಗಿ ವಾಹನಗಳಿಗೆ ಡಂಪ್ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇರೆಗೆ ಆಹಾರ ನಿರೀಕ್ಷಕಿ ಕೆ.ಎಂ. ನಾಗರತ್ನ ಹಾಗೂ ರಸೂಲ್ ಖಾನ್ ಆಹಾರ ಇಲಾಖೆ ಸಿಬ್ಬಂದಿ ವರ್ಗದ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.ದಾಳಿಯ ವೇಳೆ 40ಕ್ಕೂ ಹೆಚ್ಚು ಗೃಹಬಳಕೆ ಸಿಲೆಂಡರ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು, ಆರೋಪಿಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಆಹಾರ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

