ಸಂಗಾಪೂರ ಗ್ರಾಮದಲ್ಲಿ ಕಾಸಾಯಿಖಾನೆ ನಿರ್ಮಾಣ.ಖಾಸಾಯಿ ಖಾನೆ ನಿರ್ಮಾಣಕ್ಕೆ : ಪರ ವಿರೋಧಸಂಗಾಪೂರ ಗ್ರಾಮದಲ್ಲಿ ಸರ್ವೆ ನಂ 16 ರಲ್ಲಿಹೊಸದಾಗಿ ಕಾಸಾಯಿಖಾನೆ ನಿರ್ಮಾಣಕ್ಕೆ ಸರಕಾರ ಸಜ್ಜು: ಶಾಂತಿಯಿಂದ ಬದುಕುತ್ತಿದ್ದ ಗ್ರಾಮದಲ್ಲಿ ಧರ್ಮ ವಿಷ ಬೀಜ ಬಿತ್ತಿ, ಧರ್ಮ ಧರ್ಮಗಳು ಜಗಳ ನಡೆಯಲು ಸರಕಾರ ಮುನ್ನಡೆ ಬರೆಯುತ್ತಿದ್ದೆ.ಈ ಕಾಸಾಯಿಖಾನೆ ನಿರ್ಮಾಣ ಪವಿತ್ರನಾಡಿನಲ್ಲಿ ಬೇಡ.ಗಂಗಾವತಿ: ಶ್ರೀ ಕೃಷ್ಣದೇವರಾಯ ಅಡಳಿತ ಇರುವ ಪ್ರದೇಶ.ಹಾಗೂ ಇತ್ತೀಚಿನ ದಿನಗಳಲ್ಲಿ ವಿಶ್ವ ಪ್ರಖ್ಯಾತ ದೇವಸ್ಥಾನ ಎಂದರೆ ಅದು ಹನುಮಾನ್ ನಾಡು,ಹನಮಾನ್ ಜನ್ನ ಸ್ಥಳದಲ್ಲಿ ಕಾಸಾಯಿಖಾನೆ ನಿರ್ಮಾಣ ಮಾಡುವುದು ಸರಿಯಲ್ಲ ಎಂದು ಹನಮಾನ್ ಭಕ್ತರು ಹೇಳಿದರು. ಸರಕಾರ ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದನ್ನು ನಿರ್ಮಾಣ ಮಾಡುವುದು ಕೈಬಿಡಬೇಕು ಎಂದು ತಿಳಿಸಿದರು. ಏಕೆಂದರೆ ವಿಶ್ವದಾದ್ಯಂತ ಹನಮಾನ್ ಭಕ್ತರ ಇದ್ದರೆ. ಇದು ಒಂದು ಪ್ರವಾಸಿಗರು ಭೇಟಿ ನೀಡುವ ತಾಣ ಆಗುತ್ತದೆ ಅದರಿಂದ ಈ ಭಾಗದಲ್ಲಿ ಕಾಸಾಯಿಖಾನೆ ನಿರ್ಮಾಣ ಬೇಡ.ವಾಲ್ಮೀಕಿ ಮಹರ್ಷಿಯ ಬರೆದಂತೆ ರಾಮಾಯಣ ಉಗಮ ಈ ನಾಡಿನಲ್ಲಿ. ಇಂತಹ ಮಹಾನ್ ಮಹರ್ಷಿ ನಡೆದಾಡಿದ ನಾಡು ಹನುಮಾನ್ ಜನ್ನ ಸ್ಥಾನ ಈ ಅಂಜನಾದ್ರಿ.ಇಲ್ಲಿಗೆ ದೇಶ ವಿದೇಶಗಳ ಪ್ರವಾಸಿಗಳು ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಕಾಸಾಯಿಖಾನೆ ನಿರ್ಮಾಣ ಕಾರ್ಯ ಕೈ ಬಿಡಬೇಕು ಎಂದು ಸರಕಾರಕ್ಕೆ ಮನವಿ.ಅಂಜನಾದ್ರಿ ಭೆಟ್ಟ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಇರುವ ಹನಮನಹಳ್ಳಿಯಲ್ಲಿ ಹನುಮಾನ್ ದೇವಾಲಯ ಬೆಟ್ಟದ ಮೇಲೆ ಜನಸಿದ ಹನುಮ ಎಂದು ಹಿಂದು ಧರ್ಮದ ಪ್ರಕಾರ ಹಾಗೂ ರಾಮಾಯಣ ಗ್ರಂಥದಲ್ಲಿ ಬರುವುದು.ಅಂಜನಾದ್ರಿ ಪರ್ವತವು ತುಂಗಾಭದ್ರಾ ನದಿಯ ತಟದಲ್ಲಿದೆ. ಈ ಬೆಟ್ಟಗಳ ನೋಡುತ್ತಾ ಹೋದಂತೆ ಹೇಮಕೂಟ ಪರ್ವತ, ಮಾತಂಗ ಪರ್ವತ, ಋಶ್ಯ ಮೂಕ ಪರ್ವತ ಮತ್ತು ಅಂಜನಾದ್ರಿ ಪರ್ವತ ಕಾಣಿಸುತ್ತದೆ. ಬೆಟ್ಟದ ತುದಿಯಲ್ಲಿ ಭಗವಾನ್ ಹನುಮಾನ್ ದೇವಾಲಯವಿದ್ದು, ಅಲ್ಲಿ ಹನುಮಾನ್ ಜಯಂತಿ ಮತ್ತು ಇತರ ಸಂಬಂಧಿತ ಆಚರಣೆಗಳನ್ನು ಆಚರಿಸುತ್ತಾರೆ.ಇಂತಹ ನಾಡಿನಲ್ಲಿ ಕಾಸಾಯಿಖಾನೆ ನಿರ್ಮಾಣ ಬೇಡ.ಗಂಗಾವತಿ ತಾಲೂಕಿನ ಸಂಗಾಪೂರ ಗ್ರಾಮದ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಂಡಿ ಬಸಪ್ಪ ಕ್ಯಾಂಪ ಗ್ರಾಮದ ಹತ್ತಿರ ಹೊಸದಾಗಿ ಖಾಸಯಿಖಾನೆ ನಿರ್ಮಾಣ ಕಾರ್ಯ ಮಾಡುತ್ತಿರುವುದು ಕಂಡುಬರುತ್ತದೆ. ಅದರೆ ಇದನ್ನು ತಡೆಗಟ್ಟಲು ಸಾಕಷ್ಟು ಸರಕಾರ ಮಟ್ಟದಲ್ಲಿ ಒತ್ತಡ ಹೇರುವುದು ಎಂದು ಚರ್ಚೆಯ ಗ್ರಾಸವಾಗಿದೆ.ಅಹಾರ ಪ್ರತಿಯೊಬ್ಬರ ಹಕ್ಕು ತಿನ್ನುವುದು ಬಿಡುವು ಅವರ ಇಷ್ಟ. ಅದರೆ ಅದನ್ನು ಕಸಿದುಕೊಳ್ಳಲು ಹೋಗಬಾರದ ಎಂದು ಗ್ರಾಮದ ಮುಖಂಡರು ಅಭಿಪ್ರಾಯ.ಕಾಸಾಯಿಖಾನೆ ನಿರ್ಮಾಣ ಮಾಡುವುತ್ತಿರುವುದರಿಂದ ಹಿಂದು ಮುಸ್ಲಿಮ್ ಸಮುದಾಯದ ನಡುವೆ ಜಗಳ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಇಲ್ಲಿ ಎಲ್ಲರೂ ಸಹಕಾರ ಸೌಹಾರ್ದ ದಿಂದ ಬದುಕುತ್ತಿದ್ದು.ಈ ಕಾಸಾಯಿಖಾನೆ ನಿರ್ಮಾಣದಿಂದ ಗ್ರಾಮದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಘಟನೆ ನಡೆಯುಬಹುದು ಎಂಬುದು ಹಿರಿಯರು ಮತ್ತು ಗ್ರಾಮಸ್ಥರ ಅಭಿಪ್ರಾಯ.
ವರದಿಗಾರರು :> ಎಚ್ ಎಸ್ ಹಂಚಿನಾಳ