ಆರ್ಯವೈಶ್ಯ ಸಮಾಜದಿಂದ ನಾಲ್ಕನೇ ವರ್ಷದ ಮಂತ್ರಾಲಯ ಪಾದಯಾತ್ರೆ., ಯೋಧರ ಹಾಗೂ ರೈತರ ಹಿತ ರಕ್ಷಣೆಗಾಗಿ ಪ್ರಾರ್ಥಿಸಿ… ದರೋಜಿ ನಾಗರಾಜ್ ಶೆಟ್ಟಿ..

ಗಂಗಾವತಿ.. 15.ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ರವಿವಾರ ದಿನದಂದು ಪಂಚಾಮೃತ ಅಭಿಷೇಕ. ಕುಂಕುಮಾರ್ಚನೆ. ಸಂಕಲ್ಪ. ಭಜನೆ. ಮಾಡುವುದರ ಮುಖಾಂತರ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ದೇಶ ಕಾಯುವ ಯೋಧ ಹಾಗೂ ಅನ್ನದಾತ ರೈತರ ಹಿತ ಕಾಯುವಂತೆ ಪ್ರಾರ್ಥಿಸಿ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ತಾಯಿ ಶ್ರೀ ಕನ್ನಿಕಾ ಪರಮೇಶ್ವರಿ ಆಶೀರ್ವಾದದಿಂದ ಸುಗಮವಾಗಿ ನಡೆಯಲಿ ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಂಡಂತ ಎಲ್ಲಾ ಪಾದಯಾತ್ರೆಗಳಿಗೆ ಶ್ರೀ ಗುರು ರಾಯರ ಅನುಗ್ರಹವಾಗಲಿ ಪಾದಯಾತ್ರೆಗೆ ಅನುಕೂಲ ಮಾಡಿದಂತ ದಾನಿಗಳಿಗೆ ರಾಯರ ಆಶೀರ್ವಾದ ಲಭಿಸಲಿ ಈ ದೇಶದ ಸೈನಿಕರಿಗೆ.ರೈತರಿಗೆ ಗುರು ರಾಯರು ಹೆಚ್ಚಿನ ಶಕ್ತಿ ಕೊಡಲಿ ಎಂದು ಹೇಳಿದರು.ಗುರುಗಳಾದ ಶ್ರೀ ಗುರು ಭೀಮ್ ಭಟ್ ಜೋಶಿ ಮಾತನಾಡಿ ಆರ್ಯವೈಶ್ಯ ಸಮಾಜದಿಂದ ನಾಲ್ಕನೇ ವರ್ಷದ ಪಾದಯಾತ್ರೆ ಸಮಾಜದ ಸಂಘಟನೆಗೆ ಹಾಗೂ ಧಾರ್ಮಿಕ ಮನೋಭಾವನೆ ಬೆಳೆಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ ಕಲಿಯುಗದ ಕಾಮಧೇನು ಶ್ರೀ ರಾಯರು ಸರ್ವರಿಗೂ ಶಾಂತಿ ಸಮೃದ್ಧಿ ಕರುಣಿಸಲಿ ಧರ್ಮ ರಕ್ಷಣೆಯ ಕಾರ್ಯ ಹೆಚ್ಚು ಹೆಚ್ಚು ನಡೆಯುವಂತಾಗಲಿ ಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಪಾದಯಾತ್ರೆ ದೇಶಕ್ಕೆ ಒಳಿತಾಗಲಿ ಎಂದು ಗುರು ರಾಯರನ್ನು ಪ್ರಾರ್ಥಿಸಿ ಆಶೀರ್ವದಿಸಿದರು.ಜಿ ಆರ್ ಎಸ್ ಸತ್ಯನಾರಾಯಣ ಮಾತನಾಡಿ ತಾಯಿ ಶ್ರೀ ಕನ್ನಿಕಾ ಪರಮೇಶ್ವರಿ ಆಶೀರ್ವಾದದಿಂದ ನಡೆಯುವ ನಾಲ್ಕನೇ ವರ್ಷದ ಪಾದಯಾತ್ರೆ ಸುಗಮವಾಗಲಿ ಮತ್ತು ರಾಯರು ಅನುಗ್ರಹದಿಂದ ದೇಶಕ್ಕೆ ಒಳಿತಾಗಲಿ ಪಾದಯಾತ್ರೆಯಲ್ಲಿ ಭಾಗವಹಿಸಿದಂತ ಎಲ್ಲಾ ಯಾತ್ರೆಗಳಿಗೆ ರಾಯರು ಹೆಚ್ಚಿನ ಶಕ್ತಿ ಕೊಡಲಿ ದೇಶಕ್ಕೆ ಮಳೆ ಬೆಳೆ ಯಾವುದೇ ಕೊರತೆ ಆಗದಂತೆ ಮತ್ತು ಸೈನಿಕರಿಗೆ. ಕಾರ್ಮಿಕರಿಗೆ. ಬಡವರಿಗೆ.ರೈತರಿಗೆ ಶ್ರೀ ರಾಯರ ಅನುಗ್ರಹವಾಗಲಿ ಹೇಳಿದರು.

ಈ ಸಂದರ್ಭದಲ್ಲಿ ದರೋಜಿ ವೆಂಕಟೇಶ.ಹಣವಾಳ ಚಂದ್ರಶೇಖರ. ಬೆನ್ನೂರು ಪ್ರಹ್ಲಾದ. ಎನ್ ಗಂಗಾಧರ. ದಮ್ಮೂರ್ ಸುರೇಶ. ಬನ್ನಿಗೋಳ ಚಂದ್ರಶೇಖರ. ಚಿದಂಬರ. ಶೇಖರ ಸ್ವಾಮಿ. ಶಂಭುಲಿಂಗ ಹೊಸಳ್ಳಿ. ವೆಂಕಟೇಶ. ಸತ್ಯನಾರಾಯಣ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ. ಭಜನಾ ಮಂಡಳಿ ಸರ್ವ ಸದಸ್ಯರು ಹಾಗೂ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷರಾದ ದಮ್ಮೂರು ರುಕ್ಮಿಣಿಮ್ಮ ಹುಷಾರಾಣಿ. ಸಂಪತ್ ಲಕ್ಷ್ಮಿ . ದಮ್ಮೂರ್ ಮಂಜುಳಾ. ದರೋಜಿ ರೇಖಾ ಸೇರಿದಂತೆ ಮಹಿಳಾ ಮಂಡಳಿಯ ಸರ್ವ ಸದಸ್ಯರು ಹಾಗೂ ಸಮಾಜದ ಹಿರಿಯರು ಸೇರಿದಂತೆ ಗಂಗಾವತಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಮಾಜ ಬಾಂಧವರು ಭಾಗವಹಿಸಿದ್ದರು.
