ಮಕ್ಕಳ ದಿನಾಚರಣೆ ಹೀಗಿರಲಿ ಮಕ್ಕಳನ್ನು ಬೆಳೆಸುವ ಪರಿ…

ಮೂರು ಸಾಗರ ನೂರು ಮಂದಿರ ವೇದ, ಉಪನಿಷತ್, ಆಗಮ ಶಾಸ್ತ್ರಗಳು ಉಗಮವಾದ ಪುಣ್ಯಭೂಮಿಯಲ್ಲಿ ಇಂದು ನಾವುಕಾಣುತ್ತಿರುವದಾದರೂ ಏನನ್ನು? ಜವಾಬ್ದಾರಿ ಹೊಂದಿದ ಪಾಲಕರೆಂಬ ಅರಿವು ನಮಗಿದೆಯೇ ? ನಮ್ಮ ಮಕ್ಕಳನ್ನು ದೊಡ್ಡನಾಯಕರನ್ನಾಗಿ ಮಾಡುವ ಧಾವಂತದಲ್ಲಿ ಮಕ್ಕಳನ್ನು ಬೆಳೆಸುವ ಸಂಸ್ಕೃತಿ ಎತ್ತಸಾಗಿದೆ? ಕೇವಲ ಮಕ್ಕಳು ಕೇಳಿದ್ದನ್ನುಕೊಡಿಸಿ ಕೊಟ್ಟರೆ ಸಾಕಾ ,ಎಷ್ಟಾದರೂ ಆಗಲಿ ಶಾಲಾ ಶುಲ್ಕ ಕಟ್ಟಿ ಶಾಲೆಗೆ ಕಳಿಸಿದ ಮಾತ್ರಕ್ಕೆ ಆ ಮಗು ಉತ್ತಮವಾಗಿಬೆಳೆಯಬಲ್ಲನೇ? ನನ್ನ ಮಗುವಿನ ಬೆಳವಣಿಗೆಯಲ್ಲಿ ನನ್ನ ಪಾತ್ರವೇನು? ಎಂಬುದನ್ನು ಗಂಭೀರವಾಗಿ ಆಲೋ ಚಿಸಬೇಕಾಗಿದೆ.ಆಧುನಿಕರಣ ಪಾಶ್ಚ್ಯಾತ್ಯಕರಣದ ಭರಾಟೆಯಲ್ಲಿ ಸಮಾಜದ ಸ್ವಾಸ್ಥ್ಯ ಕೆಟ್ಟು, ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ.ಏನನ್ನು ನಿರೀಕ್ಷಿಸಲು ಹೋಗಿ, ಬೇಡವಾದದ್ದನ್ನು ಕಲಿತು ಬರುವಂತೆ ಆಗಿದೆ. ಪಾಲಕರ ತಮ್ಮ ಬಿಡುವಿರದ ಕಾರ್ಯದಲ್ಲಿಮಕ್ಕಳ ಕಡೆ ಗಮನ ನೀಡದೆ ಮಕ್ಕಳು ಹಳಿ ತಪ್ಪುವಂತಾಗಿದೆ. ಇದರಿಂದ ಪಾಲಕರು ಎಚ್ಚೆತ್ತುಕೊಂಡು ಮಕ್ಕಳಿಗಾಗಿ ಎಂತಹವಾತಾವರಣ ನಿರ್ಮಾಣ ಮಾಡಬೇ ಕೆಂದು ತಿಳಿಯುವುದು ಅನಿವಾರ್ಯ ವಾಗಿದೆ.ಬದುಕಿನ ಜಂಜಾಟದಲ್ಲಿ ಜೀವನಾದರ್ಶಗಳೇ ಮಾಯವಾಗಿ ಅಸಹನೆ ದ್ವೇಷಾಸುಹಗಳೇ ಹೆಚ್ಚಾಗುತ್ತಿವೆ. ಸಮಾಜದವ್ಯವಸ್ಥೆ ಹಾಳಾಗುತ್ತಿದೆ. ಬೆಳೆಯುವ ಮನೆ ಮಕ್ಕಳಿಗೆ ಸೂಕ್ತಮಾರ್ಗದರ್ಶ ನದ ಅಭಾವ ಎದ್ದು ಕಾಣುತ್ತಿದೆ. ಆದ್ದರಿಂದಸಮಾಜದ ಸ್ವಾಸ್ಥ್ಯ ಹಾಳಾಗದಂತೆ ಮಕ್ಕಳನ್ನ ಬೆಳೆಸುವುದು ಹೆತ್ತವರ ಕರ್ತವ್ಯ. ವಂಶಾಭಿವೃದ್ಧಿಯನ್ನು ಬಯಸುವಪ್ರತಿಯೊಬ್ಬರೂ ತಮ್ಮ ವಂಶಗಳ ಕುಡಿಗಳು ಉತ್ಕೃಷ್ಟರಾಗಿರಬೇ ಕೆಂದು ಬಯಸುವುದು ಸಹಜ. ಹೀಗಾಗಲು ಮಕ್ಕಳಪ್ರತಿಯೊಂದು ಹಂತದ ಚಟುವಟಿಕೆಗಳನ್ನು ಸೂಕ್ಷ್ಮವಾಗಿಗಮನಿಸಬೇಕು. ಕೇವಲ ವಂಶದ ಅಭಿವೃದ್ಧಿಯ ಸಲುವಾಗಿಮಕ್ಕಳನ್ನು ಹೇರುವುದಕ್ಕೆ ಸೀಮಿತವಾಗಬಾರದು. ಮಕ್ಕಳು ದೇಶದ ಸಂಪತ್ತಾಗುವಂತೆ ಬೆಳೆಸುವ ಹೊಣೆಗಾರಿಕೆಹೆತ್ತವರದ್ದಾಗಿದೆ. ಅದಕ್ಕೂ ಮೊದಲು ಮಕ್ಕಳಿಗೆ ಕಲಿಸುವುದನ್ನು ದೊಡ್ಡವರು ಸ್ವತಃ ಅಭ್ಯಾಸಸಿದರೆ ಈ ಜಗತ್ತುಸ್ವರ್ಗವಾಗುತ್ತದೆ.ಕುಂಬಾರನ ಮಣ್ಣಿನ ಮುದ್ದೆಗೆ ಯಾವ ಆಕಾರ ಕೊಡುತ್ತಾನೋ , ಆ ಆಕಾರದ ಮಡಿಕೆ ತಯಾರಾಗುತ್ತದೆ. ಒಳ್ಳೆಯಆಕಾರ ನೀಡಿದರೆ ಅದಕ್ಕೆ ಬೆಲೆ ಜಾಸ್ತಿ ಒಮ್ಮೆ ತಯಾರಾದ ಮಡಿಕೆಯನ್ನು ಮತ್ತೊ ಮ್ಮೆ ಬದಲಾಯಿಸಲು ಸಾಧ್ಯವಿಲ್ಲ. ಆತ್ಮೀಯ ಪಾಲಕ ಬಂಧುಗಳೇ , ನಿಮ್ಮ ಮುದ್ದಿನ ಮಕ್ಕಳನ್ನು ಬೆಳೆಸುವ ಪರಿಯು ಹೀಗೆಯೇ . ಚಿಕ್ಕ ವಯಸ್ಸಿನಲ್ಲಿ ಆ ಮಕ್ಕಳಿಗೊಂದುಸಂಸ್ಕಾರ ನೀಡಿ. ದೊಡ್ಡವರಾದ ಮೇಲೆ ಒಳ್ಳೆಯ ಸಂಸ್ಕಾರ ನೀಡಬೇಕೆಂದರೆ ಅದು ಕಠಿಣವಾಗುತ್ತದೆ. ಅಂತೆಯೇ ಹಿರಿಯರುಹೇಳಿದ್ದಾರೆ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂದು.ನೀವು ನಿಮ್ಮ ಮಕ್ಕಳನ್ನು ಮುದ್ದಾಗಿ ಸಾಕುತ್ತೀರಿ ಅದು ತಪ್ಪಲ್ಲ. ಈ ಮಕ್ಕಳ ಬೆಳದು ತಂದೆ ತಾಯಿಗಳನ್ನು ಗುರುಹಿರಿಯರನ್ನು ಗೌರವಿಸುವ ಸಂಸ್ಕಾ ರವು ಕಲಿಸಿಕೊಡಬೇ ಕಾಗುತ್ತದೆ. ಅಂತಹ ಪರಿಸರ ನಮ್ಮಲ್ಲಿದೆಯೇ ? ಎಂಬುದನ್ನುಗಂಭೀರವಾಗಿ ಆಲೋ ಚಿಸಬೇಕಿದೆ. ಮಕ್ಕಳ ಭವಿಷ್ಯ ಉಜ್ವಲವಾಗಬೇ ಕಾದರೆ, ಹೆತ್ತವರು ಹಿರಿಯರ ಪಾತ್ರ ಅಗಾಧವಾಗಿದೆ.ಮಕ್ಕಳು ತಮ್ಮದೇ ನಡವಳಿಕೆ, ರೀತಿ ಕಂಡುಕೊಳ್ಳಲು ಅವರಿಗೆ ಉತ್ತಮ ಮಾರ್ಗದರ್ಶನ ಸಲಹೆಯನ್ನು ನೀಡುವುದು ಪಾಲಕರಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಸತ್ಯ, ಪ್ರೇಮ, ಶಾಂತಿ, ಅಹಿಂಸೆ ಮತ್ತು ಸದಾಚಾರದ ಬೀಜವನ್ನು ಬಾಲ್ಯದಲ್ಲೇಬಿತ್ತಬೇಕು. ಈ ಬೀಜ ಬಿತ್ತುವ ಕಾರ್ಯ ಪರಿವಾರದಲ್ಲೇ ಮೊದಲು ಆಗಬೇಕು ಸಂಸ್ಕಾರದ ಪಾಠ ಮತ್ತಮೊದಲುಮನೆಯಿಂದಲೇ ನಡೆಯಬೇಕು. ಅದಕ್ಕೆ ಅಲ್ಲವೇ ಮನೆಯ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಜನನಿಂದಕಲಿತ ಜನರು ಧನ್ಯರು. ಎಂಬ ನಾನ್ನುಡಿ ಪ್ರಚಲಿತದಲ್ಲಿರುವುದು ಪ್ರಸಿದ್ಧವಾಗಿರುವುದು. ಮನೆಯಲ್ಲೇ ಮಕ್ಕಳ ಬೆಳವಣಿಗೆಗೆಸರಿಯಾದ ವಾತಾವರಣ ಕಲ್ಪಿಸಬೇಕು. ಕೇವಲ ಮಕ್ಕಳಿಗೆ ಆಹಾರ, ಬಟ್ಟೆ, ಆಶ್ರಯ ವಿದ್ಯಾ ಭ್ಯಾಸಕೊಡಿಸುವುದು ಹೆತ್ತವರಕರ್ತವ್ಯವಲ್ಲ. ಅದರೊ ಟ್ಟಿಗೆ ಉತ್ತಮ ಸಂಸ್ಕಾರ ನೀಡಿ ಕುಟುಂಬವನ್ನು, ಸಮಾಜವನ್ನು ಗುರುಹಿರಿಯರನ್ನು ಗೌರವಿಸುವಪರಿಪಾಠ ಹಾಕಿಕೊ ಟ್ಟಾಗ ಅದಕ್ಕೊಂದು ಅರ್ಥ ಬರುತ್ತದೆ.ಮೃದುವಾದ ಮನಸ್ಸುಳ್ಳ ಮಕ್ಕಳ ವ್ಯಕ್ತಿತ್ವದಲ್ಲಿ ಯಾವುದೇ ಗುಣಗಳನ್ನಾಗಲಿ ಮೌಲ್ಯಗಳನ್ನಾಗಲಿ ಬಾಲ್ಯದಲ್ಲೇ ಬೆಳೆಸಿದರೆಅವು ಅವರಲ್ಲಿ ಜೀವನಪರ್ಯಂತ ಉಳಿಯುತ್ತದೆ. ಮೂರು ವರ್ಷದ ಬಗ್ಗೆ ನೂರು ವರ್ಷದ ತನಕ ಎನ್ನುವ ಹಾಗೆಚಿಕ್ಕಂದಿನಿಂದಲೇ ಶಿಸ್ತಿನ ಪಾಠವನ್ನು ಹೇಳಿಕೊಡಬೇಕು. ಜೊತೆಗೆ ಕಷ್ಟದ ಜೀವನವನ್ನು ಕೂಡ ಅವರಿಗೆ ತಿಳಿಸಬೇಕು. ಅವರುಕೇಳಿದ ತಕ್ಷಣ ಬೇಡಿದ ವಸ್ತುಗಳನ್ನು ಕೊಡಿಸಿಕೊಟ್ಟರೆ ಅದರ ಬೆಲೆ ಅವರಿಗೆ ತಿಳಿಯದು. ಕಷ್ಟ ಪಟ್ಟರೆ ಜೀವನದಲ್ಲಿ ಮುಂದೆಸುಖ ಪಡುವ ಅವಕಾಶಗಳು ಹೆಚ್ಚಾಗುತ್ತವೆ ಎಂಬುದನ್ನು ಅವರಿಗೆ ಮನದಟ್ಟು ಮಾಡಬೇಕು . ಕುರುಕಲ ತಿಂಡಿಗಳಸೇವನೆಯಿಂದ ಆಗಬಹುದಾದ ಅನಾರೋಗ್ಯದ ಬಗ್ಗೆ ತಿಳುವಳಿಕೆ ನೀಡಬೇಕು . ಅತಿಯಾದ ಸ್ವಾತಂತ್ರ್ಯದಸ್ವೇಚ್ಛಾಚಾರಕ್ಕೆಕಡಿವಾಣವಿರಲಿ. ಹೆಣ್ಣು ಮಕ್ಕಳ ಉಡುಪು ಪ್ರಚೋ ದನಕಾರಿಯಾದಂತೆ ಎಚ್ಚರವಹಿಸಿ, ಮಕ್ಕಳ ಜನ್ಮದಿನದಂದು ನಿಮ್ಮಸಂಸ್ಕೃತಿಗೆ ಅನುಗುಣವಾಗಿ ದೀಪ ಬೆಳಗಿಸುವುದರ ಮೂಲಕ ಆಚರಿಸುವುದು ಸೂಕ್ತ.ಸತ್ಯಂ ವಧ ಧರ್ಮಂ ಚರ ಎಂಬ ಉಪನಿಷತ್ತಿನ ಮಾತಿನಂತೆ ಪ್ರತಿಯೊಬ್ಬ ಮನುಷ್ಯ ಉತ್ತಮ ಬಾಳನ್ನು ಬಾಳಬೇಕಾದರೆನವರತ್ನಗಳಿಗಿಂತಲೂ ಬೆಲೆ ಬಾಳುವ ನೈತಿಕ ಮೌಲ್ಯಗಳ ಅರಿವನ್ನು ಪಾಲಕರು ಮಕ್ಕಳಲ್ಲಿ ಮೂಡಿಸಬೇಕು ಇತ್ತೀಚಿಗೆಹೆಚ್ಚಾಗುತ್ತಿರುವ ಹಿಂಸೆ, ಬಾಲಾಪರಾದ ನೋಡಿದಾಗ ನೈತಿಕ ಮೌಲ್ಯಗಳ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲವೆಂಬುದುಸ್ಪಷ್ಟವಾಗುತ್ತದೆ. ದೇಶದ ಪ್ರಮುಖ ಆಸ್ತಿಯಾಗಿರುವ ಮಕ್ಕಳಿಗೆ ಚಿಕ್ಕಂದಿನಿಂದಲೇ ನೈತಿಕ ಮೌಲ್ಯದ ಪಾಠವನ್ನು ಹಿರಿಯರಿಂದ ಹೇಳಿಸಿಕೊಂಡು ಬಂದರೆ ಇಂಥ ಹಿಂಸೆ ಅಪರಾಧ ಸದ್ದಿಲ್ಲದೆ ಅಡಗುತ್ತವೆ. ತಂತಾನೆ ಮಗು ಒಳ್ಳೆಯ ಗುಣಗಳನ್ನು ಕಲಿತುಸತ್ಪ್ರಜೆಯಾಗುತ್ತಾನೆ. ಇತ್ತೀಚಿಗೆ ಮಕ್ಕಳು ಹೆಚ್ಚಾಗಿ ಹಾಳಾಗುತ್ತಿರುವುದು ಸಮೂಹ ಮಾಧ್ಯಮಗಳಿಂದ ಇದು ಪಾಲಕರನ್ನಆತಂಕಕ್ಕೆ ತಳ್ಳಿದೆ. ಮೊಬೈಲ್, ಟಿವಿ ಅತಿಯಾದ ಬಳಕೆ ಹೆಜ್ಜೆ ತಪ್ಪಲು ಕಾರಣವಾಗಿದೆ. ಇದರ ಕಡೆ ಪಾಲಕರು ಹೆಚ್ಚಿನ ಗಮನವಹಿಸಿ. ಮಕ್ಕಳು ಅನುಕರಣಾ ಪ್ರಿಯರಾಗಿದ್ದರಿಂದ ನೀವು ಕೂಡ ಅದರ ಬಳಕೆಯನ್ನು ಮಿತಗೊ ಳಿಸಬೇಕು. ಸಮೂಹಮಾಧ್ಯಮಗಳಿಂದ ಆಗುವ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಮಕ್ಕಳಿಗೆ ತಿಳಿಸಬೇಕು ದೂರದರ್ಶನ ನೋಡಲುಸಮಯವನ್ನು ನಿಗದಿಪಡಿಸಿ ವಾರ್ತ ಮತ್ತು ಇತರ ಕೆಲ ಕಾರ್ಯಕ್ರಮಗಳನ್ನು ನೋಡಲು ಅನುವು ಮಾಡಿಕೊಡಿ.ಮಕ್ಕಳು ದೇವರ ಸಮಾನ, ದೇವರ ಮಾರ್ಗದಲ್ಲಿ ನಡೆಸುತ್ತಾ ಅವರ ಬಾಳನ್ನು ಬೆಳಗಿಸುತ್ತ ಅವರ ಜೀವನವನ್ನು ಕಟ್ಟಿಕೊಟ್ಟು ಭವಿಷ್ಯ ರೂಪಿಸುವುದು ಪಾಲಕರ ಆದ್ಯ ಕರ್ತವ್ಯ. ಅವರ ಕನಸಿಗೆ ರೆಕ್ಕೆ ಕಟ್ಟಿ ಆತ್ಮವಿಶ್ವಾಸ ಹೊಂದುವಂತೆ ಮಾಡಿ,ಗುರಿ ತಲುಪಲು ಪಾಲಕರೊಂದು ಪ್ರಬಲ ಅಸ್ತ್ರವಾಗಬೇಕು. ಅವರನ್ನು ದೊಡ್ಡವ್ಯಕ್ತಿಗಳನ್ನಾಗಿ ಬೆಳೆಸುವ ಭರಾಟೆಯಲ್ಲಿ ಅವರನ್ನುಕೋರ್ಸಿಗೋಸ್ಕರ ಮಾರ್ಕ್ಸ್ (ಅಂಕ) ವಾದಿಗಳನ್ನಾಗಿ ಮಾಡಬೇಡಿ ಶಿಕ್ಷಣದ ಜೊತೆ ಸಂಸ್ಕಾರ ಇದ್ದರೆ ಅದಕ್ಕೆ ಬೆಲೆ ಜಾಸ್ತಿ.ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಅವರೇ ದೇಶವನ್ನು ರಕ್ಷಿಸುವವರು ಎಂದೆಲ್ಲನಾವು ಮಕ್ಕಳಿಗೆ ಉಪದೇ ಶಗಳನ್ನುನೀಡುತ್ತೇವೆ. ಆದರೆ ಅವರು ಆ ರೀತಿ ಬೆಳೆಯಬೇಕಾದರೆ ಅದಕ್ಕೆ ಬೇಕಾದ ಉತ್ತಮ ಶಿಕ್ಷಣವನ್ನು, ಮಾರ್ಗದರ್ಶನವನ್ನುಮತ್ತು ಸಂಸ್ಕಾರವನ್ನು ನಾವು ನಿಷ್ಠೆಯಿಂದ ನೀಡಬೇಕಾಗಿದೆ. ಮಗು ತನ್ನ ಜೀವನದ ಗುರಿಯನ್ನು ತಾನೇಗುರುತಿಸಿಕೊಳ್ಳುವಂತೆ ನೋಡಿಕೊಂಡು, ಅವರಿಗೆ ಪಾಲಕರು ಕೇವಲ ಭೂಮಿಕೆ ಆಗಬೇಕು. ಪಾಲಕರಲ್ಲಿ ವಿಶೇಷ ಮನವಿಎಂದರೆ ಹೆಚ್ಚಿನ ಸಮಯವನ್ನು ಮಕ್ಕಳ ಜೊತೆ ಕಳೆಯಲು ಎಂದಿಗೂ ಮರೆಯಬೇಡಿ . ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲುಅವರಿಗೆ ಮುಕ್ತಅವಕಾಶ ಕಲ್ಪಿಸಿಕೊಡಿ. ಬೇರೆ ಮಗುವಿನೊಂದಿಗೆ ನಿಮ್ಮ ಮಗುವನ್ನು ಎಂದಿಗೂ ಹೋಲಿಸಿ ನೋಡಬೇಡಿ.ಸಂಸ್ಕಾರ ಕೊಡುವುದನ್ನು ಮರೆಯಬೇಡಿ.. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಗು ಮಾನವೀ ಯತೆಯ ಮೌಲ್ಯ ಕಲಿತುಮಹಾತ್ಮನಾಗಬೇಕಿದೆ, ಬುದ್ಧನಾಗಬೇಕಿದೆ ಮಹಾ ಮಾನವತವಾಗಬೇ ಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪಾಲಕರಮಾರ್ಗ ದರ್ಶನ, ತ್ಯಾಗ ,ಕಳಕಳಿಯ ಜವಾಬ್ದಾರಿ ಅತ್ಯಗತ್ಯವಾಗಿದೆ.ಶ್ರೀಮತಿ ಜಯಶ್ರೀ ಹಕ್ಕಂಡಿ ಅಳವಂಡಿ. ಸರಕಾರಿ ಪ್ರೌಢಶಾಲೆ ಇಸ್ಲಾಂಪುರ ಗಂಗಾವತಿ9482632510

