ವಿಜಯಲಕ್ಷ್ಮಿ ಹಿರೇಮಠಗೆ ಪ್ರಶಸ್ತಿನ.19ಕ್ಕೆ ಬೆಂಗಳೂರಿನಲ್ಲಿ ಪ್ರಧಾನ…

ಗಂಗಾವತಿ ನ.10: ಕಳೆದ ವರ್ಷಗಳಿಂದ ಸಮಾಜಿಕ ಮತ್ತು ಸಂಗೀತ ಸೇವೆಯಲ್ಲಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇಲ್ಲಿನ ವಿಜಯಲಕ್ಷ್ಮಿ ಹಿರೇಮಠಗೆ ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿಯಿಂದ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ * ಮಾಡಲಾಗಿದೆ.ನವಂಬರ್ 19ರಂದು ಬೆಂಗಳೂರಿನ `ರವೀಂದ್ರ ಕಲಾ ಕ್ಷೇತ್ರದ ನಯನ ರಂಗಮಂದಿರದಲ್ಲಿ ಸಂಜೆ ಹಮ್ಮಿಕೊಂಡಿರುವ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಸಂಘಟನೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
