ದಿನಾಂಕ 18ರಂದು ನಾಗರಕಟ್ಟೆ ನಾಗದೇವತೆಗೆ ವಿಶೇಷ ಪೂಜೆ. ವೆಂಕಟೇಶ್ ಉಪ್ಪಾರ್….


ಗಂಗಾವತಿ… ಶ್ರಾವಣ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷ ವಿರುಪಾಪುರ ಸುಬ್ರಮಣ್ಯ ನಗರದ ನಾಗಪ್ಪ ಕಟ್ಟೆಯ ನಾಗದೇವತೆಯ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಯಂಕಪ್ಪ ಉಪ್ಪಾರ್ ಸಮಾಜದ ಹಿರಿಯ ಮುಖಂಡರು ಪಿ ವೆಂಕಟೇಶ್ವರ ರಾವ್ ತಿಳಿಸಿದರು. ಅವರು ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿ ದಿನಾಂಕ 18 ಸೋಮವಾರ ದಿನದಂದು ಬೆಳಿಗ್ಗೆ 7:00 ಗಂಟೆಗೆ ಗಂಗೆ ಪೂಜೆ. ಗೋಪೂಜೆ ನಾಗರಕಟ್ಟಿಯ ನಾಗದೇವತೆಗೆ ರುದ್ರಾಭಿಷೇಕ. ಪಂಚಾಮೃತ ಅಭಿಷೇಕ ಹಾಲಿನ ಅಭಿಷೇಕ ಅಷ್ಟೋತ್ತರ ಪಾರಾಯಣ. ವೈವಿಧ್ಯಮಯ ಹೂಗಳಿಂದ ಅಲಂಕಾರ. ಮುತ್ತೈದೆಯರಿಗೆ ಉಡಿ ತುಂಬುವಿಕೆ. ಪೂರ್ಣಕುಂಭದೊಂದಿಗೆ ಭಜನೆ ಸಕಲ ವಾದ್ಯ ವೈಭವದೊಂದಿಗೆ ಜರುಗಲಿದ್ದು ಗಣ್ಯರಿಗೆ ಸನ್ಮಾನ ಮಹಾ ಮಂಗಳಾರತಿ ಬಳಿಕ ಅನ್ನ ಸಂತರ್ಪಣೆ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಮುಖ್ಯಸ್ಥ ಯಂಕಪ್ಪ ಸೋಮನಾಥ ಪಂಪಾಪತಿ ನಗರಸಭೆಯ ಮಾಜಿ ಅಧ್ಯಕ್ಷ ದಾನಪ್ಪ ಉಪ್ಪಾರ್ ಹೇ ರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
