ಇತಿಹಾಸ ಸೃಷ್ಟಿಸಿದ ಶ್ರೀ ವಾಸವಿ ಮಹಾ ಆರತಿ .. ಮುಂದಿನ ನಡೆ ವಾಸವಿ ದೇವಸ್ಥಾನದ ನಿರ್ಮಾಣದ ಕಡೆ… ರೂಪ ರಾಣಿ ಲಕ್ಷ್ಮಣ್

ಗಂಗಾವತಿ. ನಗರದ ಆರ್ಯವೈಶ್ಯ ಸಮಾಜ ಬಾಂಧವರು ಶ್ರೀ ಕನ್ನಿಕಾ ಪರಮೇಶ್ವರಿ ಜಯಂತೋತ್ಸವದ ಪ್ರಯುಕ್ತ ದಿನಾಂಕ 7 ರಂದು ಸಂಜೆ ಜರುಗಿದ ಅಮ್ಮನವರ ಬೃಹತ್ ಮೆರವಣಿಗೆ ಹಾಗೂ ಗಾಂಧಿ ವೃತದಲ್ಲಿ ಆಯೋಜಿಸಿದ ವಾಸವಿ ಮಹಾ ಆರತಿ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಂತಾಗಿದೆ ಜೊತೆಗೆ ನಮ್ಮ ಮುಂದಿನ ನಡೆ ಶ್ರೀ ವಾಸವಿ ಅಮ್ಮನವರ ದೇವಸ್ಥಾನದಲ್ಲಿ ನಿರ್ಮಾಣದ ಕಡೆ ಎಂದು ಅಧ್ಯಕ್ಷ ರೂಪ ರಾಣಿ ಲಕ್ಷ್ಮಣ ರಾಯಚೂರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು… ನಗರೇಶ್ವರ ದೇವಸ್ಥಾನ ದಿಂದ ಹೊರಟ ಮೆರವಣಿಗೆ ದಾರಿ ಉದ್ದಕ್ಕೂ ಚಂಡಿ ವಾದ್ಯ ಡಿಜೆ ಹಾಡುಗಳು ನೃ ತ್ಯ್ ಸೇರಿದಂತೆ ವಿಶೇಷ ಗಮನ ಸೆಳೆದವು ಬಳಿಕ ಮಹಾತ್ಮ ಗಾಂಧಿಯ ವೃತದಲ್ಲಿ ಶ್ರೀ ವಾಸವಿ ಅಮ್ಮನವರಿಗೆ ಸುನಿಲ್ ವೈದ್ಯ ತಂಡದವರಿಂದ ವೇದ ಮಂತ್ರ ಘೋಷಣೆಯೊಂದಿಗೆ ಮಹಾ ಆರತಿ. ನೆರೆದ ಸಹಸ್ರಾರು ಜನರಲ್ಲಿ ಭಕ್ತಿ ಭಾವ ಬೆಳೆಸುವಲ್ಲಿ ಸಫಲತೆ ಗೊಂಡಿತು….
