ಭೀಮಾ ಕೋರೆಗಾಂವ್ ವಿಜಯೋತ್ಸವವು ಡಾಕ್ಟರ್ ಬಿ.ಆರ್.ಅಂಬೇಡ್ಕರರ ಮೂಲಕ ಆಧುನಿಕ ಭಾರತವನ್ನು ಕಟ್ಟಲು ಪ್ರೇರಣೆಯಾಯಿತು. ರಾಮು.ಟಿ.

ಭೀಮಾ ಕೋರೆಗಾಂವ್ ವಿಜಯೋತ್ಸವವು ಡಾಕ್ಟರ್ ಬಿ.ಆರ್.ಅಂಬೇಡ್ಕರರ ಮೂಲಕ ಆಧುನಿಕ ಭಾರತವನ್ನು ಕಟ್ಟಲು ಪ್ರೇರಣೆಯಾಯಿತು. ರಾಮು.ಟಿ.

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಒಂದನೇ ವಾರ್ಡ್ ಅಂಬೇಡ್ಕರ್ ಕಾಲೋನಿಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಅನ್ನಧಾತ ರೈತರಿಗೆ ಸನ್ಮಾನ ಕಾರ್ಯಕ್ರಮ ಜರಿಗಿತ್ತು. ಟಿ.ರಾಮು ಮಾತನಾಡಿ ಭೀಮಾ ಕೋರೆಗಾಂವ್ ಕದನ ಎನ್ನುವುದು ಕೇವಲ ಚಾರಿತ್ರಿಕ ಯುದ್ದವಲ್ಲ. ಅದು ಶೋಷಿತರ ಆತ್ಮ ಗೌರವದ ಜ್ವಲಂತ ಪ್ರತೀಕ 1818ರ ಜನವರಿ 1 ರಂದು ನೆಡೆದ ಈ ಹೋರಾಟವು ಅಸಮಾನತೆ ಮತ್ತು ದಬ್ಬಾಳಿಕೆಯ ವಿರುದ್ದದ ನಿರಂತರ ಪ್ರತಿರೋದಕ್ಕೆ ಸಾಕ್ಷಿಯಾಗಿದೆ.ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಸ್ಥಾಪನೆಗೆ ಇಂದಿಗೂ ಇದು ದಾರಿದೀಪವಾಗಿದೆ ಎಂದರು. ಯುವ ಮುಖಂಡ ರಾಜಣ್ಣ ಮಾತನಾಡಿ ರೈತ ದೇಶದ ಬೆನ್ನೆಲುಬು. ರೈತರಿಗೆ ಸರಿಯಾಗಿ ವಿದ್ಯುತ್, ಸರಿಯಾದ ರೀತಿಯಲ್ಲಿ ನೀರು ಹಾಗೂ ರೈತ ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ಬೆಲೆಯನ್ನು ನಮ್ಮ ಸರಕಾರಗಳು ಸರಿಯಾಗಿ ಕೊಟ್ಟರೆ ರೈತರು ಇಡಿ ದೇಶಕ್ಕಲ್ಲಾ ಇಡಿ ವಿಶ್ವಕ್ಕೆ ಅನ್ನ ನೀಡುತ್ತಾರೆ ಎಂದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಪದ್ಮಾವತಿ ಮಾತನಾಡಿ ಇವತ್ತಿನ ದಿನ ಪ್ರತಿಯೊಬ್ಬರು ಒಂದು ಅನ್ನ ತಿನ್ನಬೇಕೆಂದರೆ ದೇವರಿಗಿಂತಲೂ ಮೊದಲು ರೈತರನ್ನು ನೆನೆಸಿಕೊಂಡು ಅನ್ನವನ್ನು ತಿನ್ನಬೇಕು ಎಂದರು.ಈ ಸಂದರ್ಭದಲ್ಲಿ ಶ್ರೀ ಜಡೇಶತಾತಾ, ಶ್ರೀ ಹುಲುಗಪ್ಪ ತಾತಾ, ಕರೆಪ್ಪ, ಹೇಮಣ್ಣ, ಶಂಕ್ರಪ್ಪ, ಹನುಮಂತಪ್ಪ, ಮಲ್ಲಪ್ಪ, ಬಡಿಗೇರ ವೀರೇಶ, ಹೆಚ್.ಪಂಪಾಪತಿ ಸೇರಿದಂತೆ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *