ಶಾಸಕ ಜನಾರ್ದನ ರೆಡ್ಡಿ ಹತ್ಯೆಗೆ ಸಂಚು:ಪೊಲೀಸ್ ಪಾಟೀಲ್ ಖಂಡನೆ….

ಶಾಸಕ ಜನಾರ್ದನ ರೆಡ್ಡಿ ಹತ್ಯೆಗೆ ಸಂಚು:ಪೊಲೀಸ್ ಪಾಟೀಲ್ ಖಂಡನೆ….

ಗಂಗಾವತಿ.03ಶಾಸಕ ಗಾಲಿ ಜನಾರ್ದನ ರೆಡ್ಡಿ ಹತ್ಯೆಗೆ ಬಳ್ಳಾರಿಯಲ್ಲಿ ಸಂಚು ನಡೆಸಿರುವುದು ಖಂಡನೀಯ ಎಂದು ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆನಂದಗೌಡ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.ಈ ಕುರಿತು ಮಾತನಾಡಿದ ಅವರು, ಶಾಸಕ ಗಾಲಿ ಜನಾರ್ದನ ರೆಡ್ಡಿ ನಗರದಲ್ಲಿ ಶ್ರೀಚೆನ್ನಬಸವ ಶಿವಯೋಗಿಗಳ ಜಾತ್ರೆಯಲ್ಲಿ ಪಾಲ್ಗೊಂಡು ಬಳ್ಳಾರಿಗೆ ತೆರಳಿದ ತಕ್ಷಣ ಅಲ್ಲಿಯ ಶಾಸಕ ಭರತ್ ರೆಡ್ಡಿ ಮತ್ತು ಅವರ ಬೆಂಬಲಿಗರು ಮನೆಯ ಮೇಲೆ ದಾಳಿ ನಡೆಸಿದ್ದಲ್ಲದೆ ತಮ್ಮ ಗನ್ ಮ್ಯಾನ್ ಗುಂಡಿನ ದಾಳಿ ನಡೆಸಿದ್ದಾರೆ. ಇದನ್ನು ಗಮನಿಸಿದರೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಹತ್ಯೆಗೆ ಸಂಚು ಮಾಡಿರುವದು ಸಾಕ್ಷಿಯಾಗಿದೆ ಎಂದರು.2028ಕ್ಕೆ ಬಳ್ಳಾರಿ ಸೇರಿದಂತೆ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ವ್ಯಾಪಕ ಬೆಂಬಲ ಇದೆ ಎಂದು ಅರಿತು ಈಗಲೇ ಬಳ್ಳಾರಿ ಶಾಸಕ ಭರತ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಮತ್ತು ಸಹೋದರರ ಮೇಲೆ ದಾಳಿ ನಡೆಸಿರುವ ಕೃತ್ಯ ತಿಳಿಸಿದ್ದಾರೆ. ಕೂಡಲೆ ಸರ್ಕಾರ ತಾರತಮ್ಯ ಮಾಡದೆ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *