ಮೊರಬ : ಶ್ರದ್ಧಾ ಭಕ್ತಿ ಸೌಹಾರ್ಧತೆಗೆ ಸಾಕ್ಷಿ – (ಹೋಳಿಗೆಮ್ಮ ಹಬ್ಬ)ಅಮ್ಮಳನ್ನು ಕಳುಹಿಸುವ ಹಬ್ಬ…

ಮೊರಬ : ಶ್ರದ್ಧಾ ಭಕ್ತಿ ಸೌಹಾರ್ಧತೆಗೆ ಸಾಕ್ಷಿ – (ಹೋಳಿಗೆಮ್ಮ ಹಬ್ಬ)ಅಮ್ಮಳನ್ನು ಕಳುಹಿಸುವ ಹಬ್ಬ

ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಮೊರಬ ಗ್ರಾಮದಲ್ಲಿ ಜು 1 ರಂದು ಸಂಜೆ, ಶ್ರದ್ಧಾ ಭಕ್ತಿ ಸೌಹಾರ್ಧತೆಗೆ ಸಾಕ್ಷಿಯಾದ ಹೋಳಿಗೆಮ್ಮ ಹಬ್ಬ ಜುರುಗಿತು. ಆಮ್ಮಳನ್ನು ಕಳುಹಿಸುವ ಧಾರ್ಮಿಕ ಆಚರಣೆ, ಗ್ರಾಮದಲ್ಲಿ ಹಿಂದೂ ಸಂಪ್ರದಾಯದಂತೆ ಹಾಗೂ ಧಾರ್ಮಿಕ ನೆಲೆಗಟ್ಟಿನಲ್ಲಿ ಜರುಗಿತು. ವಾರ ಮುಂಚೆನೇ ದಿನ ನಿಗದಿ ಗೊಳಿಸಿ ಗ್ರಾಮದಲ್ಲೆಲ್ಲಾ , ತಳವಾರ ನಿಂದ ಸಾರ್ ಹಾಕಿಸಲಾಗುತ್ತೆ. ಅಮ್ಮ ಕಳುಹಿಸುವ ದಿನದಂದು ಮುಂಜಾನೆಯಿಂದಲೇ ಗ್ರಾಮದ ಪ್ರತಿ ಮನೆ ಮನೆಯಲ್ಲಿಯೂ , ಅಮ್ಮಳನ್ನು ಕಳುಹಿಸುವ ಧಾರ್ಮಿಕ ಕಾರ್ಯಕ್ಕೆ ಪೂರ್ವ ತಯಾರಿ ನಡೆಯುತ್ತೆ. ಗ್ರಾಮದಲ್ಲಿರುವ ಸುಮಾರು 12ನೂರಕ್ಕೂ ಹೆಚ್ಚು ಮನೆಯವರೆಲ್ಲರೂ ಒಟ್ಟಾಗಿ , ಸರ್ವ ಜನಾಂಗದವರೆಲ್ಲರೂ ಮನೆಗೊಬ್ಬರಂತೆ ಹಬ್ಬದ ಆಚರಣೆಯಲ್ಲಿ ಭಾಗವಹಿಸುವುದು ಜಾರಿಯಲ್ಲಿದೆ. ಜಂಗಮ ಲಿಂಗಾಯತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು , ಹತ್ತಾರು ಮುಸಲ್ಮಾನ ಸಮಾಜದ ಕುಟುಂಬಗಳು ವಾಸವಿದ್ದಾರೆ. ಹೋಳಿಗೆಮ್ಮ ಹಬ್ಬದ ಸಂದರ್ಭದಲ್ಲಿ , ಯಾವುದೇ ಜಾತಿ ಮತ ಧರ್ಮ ಭೇದ ಎಣಿಸುವುದಿಲ್ಲ ಸರ್ವರೂ ಒಗ್ಗೂಡಿ ಹಬ್ಬ ಆಚರಿಸುವದೇ ಇಲ್ಲಿಯ ವಿಶೇಷ. ಹಲವು ಗ್ರಾಮೀಣ ಭಾಗಗಳಲ್ಲಿ ಹಲವು ಕಟ್ಟು ಪಾಡುಗಳೊಂದಿಗೆ ಆಚರಣೆ ಮಾಡಲಾಗುತ್ತದೆ ,

ಭಾರೀ ನಿಯಮಗಳನುಸಾರ ಜರುಗಿಸಲಾಗುತ್ತದೆ. ಸಂಜೆ ಹೊತ್ತಲ್ಲಿ ಮೊರಬ ಗ್ರಾಮದ ಪ್ರತಿ ಮನೆಗೊಬ್ಬರಂತೆ , ನಿಯಮಾನುಸಾರ ಜಾತಿ ಧರ್ಮ ಲಿಂಗ ಭೆದವಿಲ್ಲದೇ ಸೌಹಾರ್ದತೆಯಿಂದ ಹೊಳಿಗೆಮ್ಮ ಹಬ್ಬದಲ್ಲಿ ಭಾಗಿಯಾಗುವರು. ಗ್ರಾಮದಲ್ಲಿನ ಪ್ರತಿ ಮನೆಯ ಒರ್ವರಂತೆ , ವಯಸ್ಸಿನ ಅಂತರವಿಲ್ಲದೇ ಸರ್ವರೂ ಶ್ರದ್ಧಾ ಭಕ್ತಿಯಿಂದ ಸೌಹಾರ್ದತೆಯಿಂದ ಒಗ್ಗಟ್ಟಾಗಿ ಹೋಳಿಗೆಮ್ಮಳನ್ನು ಕಳುಹಿಸಲಾಯಿತು. *ಸಂಪ್ರದಾಯಿಕ ಆಚರಣೆ*- ಹೋಳಿಗೆಮ್ಮ ಅಚರಣೆಯ ಸಂದರ್ಭದಲ್ಲಿ , ಅನುಸರಿಸುವ ಕ್ರಮಗಳಲ್ಲಿ ಗ್ರಾಮ ಗ್ರಾಮಗಳಲ್ಲಿನ ಆಚರಣೆಯಲ್ಲಿ ಅತ್ಯಲ್ಪ ವ್ಯತ್ಯಾಸವಿರುತ್ತದೆ ವಿನಃ ಉಳಿದಂತೆ ಎತಾವತ್ತಾಗಿ ಆಚರಿಸಲಾಗುತ್ತದೆ. ಮನೆಯನ್ನು ಶುಭ್ರಗೊಳಿಸಿ ತಮ್ಮ ತನು ಮನವ ಶುಚಿಗೊಳಿಸಿ ಸಿದ್ದತೆ ನಡೆಸಲಾಗುತ್ತೆ , ಹೋಳಿಗೆ ಸೇರಿದಂತೆ ವಿವಿದ ಬಗೆಯ ಖಾದ್ಯಗಳನ್ನು ಅಮ್ಮಳಿಗೆ ನೈವೇದ್ಯ ಮಾಡಲಾಗುತ್ತದೆ. ತದನಂತರ ಕುಡಿಕೆಯ ರೂಪದಲ್ಲಿರುವ ಆಮ್ಮಳಿಗೆ , ಶಾಸ್ತ್ರೊಕ್ತವಾಗಿ ಉಡಿ ತುಂಬಿ ಸಂಕಷ್ಟಗಳಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಲಾಗುತ್ತದೆ. ಗ್ರಾಮದಿಂದ ಪರ್ಲಾಂಗದೂರದ ಗುಡಿ ಬಳಿಯೋ ಅಥವಾ , ದೈವೀಸ್ವರೂಪದ ಬೇವಿನ ಮರದ ಬಳಿ ಅಮ್ಮಳನ್ನು ಕಳುಹಿಸಲಾಗುತ್ತೆ. ಗ್ರಾಮದಿಂದ ಅಮ್ಮಳನ್ನು ಕಳುಹಿಸಲು ಹೊರಟವರೆಲ್ಲಾ ಗ್ರಾಮದಂಚಿನಲ್ಲಿ , ಒಂದುಗೂಡಿ ಒಂದೇ ಸಮನೆ ಗ್ರಾಮದಿಂದ ಪರ್ಲಾಂಗ ದೂರವಿರುವ. ಅಮ್ಮಳ ಮರದ ಬುಡಕ್ಕೆ ಭಕ್ತಿ ಪೂರ್ವಕವಾಗಿ ನಮಿಸಿ , ಅಮ್ಮಳ ಹುಡಿಯನ್ನ ಅರ್ಪಿಸಿ ಎಲ್ಲರೂ ಒಂದೇ ಸಮಯಕ್ಕೆ ಮರಳಿ ಗ್ರಾಮಕ್ಕೆ ದಾವಿಸುತ್ತಾರೆ. *ಮುಸಲ್ಮಾನರೂ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ ಹೋಳಿಗೆಮ್ಮ ಹಬ್ಬ*- ಹೋಳಿಗೆ ಅಮ್ಮಳನ್ನು ಕಳುಹಿಸುವ ಸಂದರ್ಭದಲ್ಲಿ ಗ್ರಾಮದ ಪ್ರತಿಯೊಂದು ಮನೆಯಿಂದ ಓರ್ವರಂತೆ , ವಿಶೇಷವಾಗಿ ಮೊರಬ ಗ್ರಾಮದಲ್ಲಿ ಮುಸ್ಲೀಂ ಸಮುದಾಯದ ಇಪ್ಪತ್ತೈದಕ್ಕೂ ಹೆಚ್ಚು ಮನೆಗಳಿದ್ದು. ಪ್ರತಿ ಮನೆಯಿಂದ ಒರ್ವರಂತೆ ನಿಯಮಾನುಸಾರ ಎಲ್ಲಾ ಮನೆಯವರು , ಇತರರಂತೆ ಶ್ರದ್ಧಾ ಭಕ್ತಿಯಿಂದ ಅಮ್ಮಳನ್ನು ಕಳುಹಿಸುತ್ತಾರೆ. ಅದು ಅವರು ಸ್ವತಃ ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಾರೆ , ಈ ಸಂದರ್ಭದಲ್ಲಿ ಯಾರೂ ಯಾರಿಗೂ ಯಾವುದೇ ಒತ್ತಡ ಹೇರದೇ ಆಚರಿಸಲಾಗುತ್ತೆ. ಊರಚೆಗೆ ತೆರಳುವ ಮುನ್ನ ಊರ ತಳವಾರನು ಊರನ್ನೆಲ್ಲಾ ಸುತ್ತಾಡಿ , ಅಮ್ಮಳನ್ನು ಕಳುಹಿಸುವುದಕ್ಕಾಗಿ ಹೊರಟು ಬರಲು ಕೆಲ ಹೊತ್ತು ಗಡವು ನೀಡುತ್ತಾನೆ. ಪ್ರತಿ ಮನೆಗೊಬ್ಬರಂತೆ ಗ್ರಾಮದಂಚಿನಲ್ಲಿ ಬಂದು ನಿಂತ ಮೇಲೆ , ಯಾರಾದರೂ ಬರುವವರು ಇದ್ದಾರೋ ಏನೋ ಎಂದು ತಳವಾರ ಮತ್ತೊಮ್ಮೆ ಊರನ್ನೆಲ್ಲಾ ಸುತ್ತಾಡಿಕೊಂಡು ಬಂದು ಖಚಿತ ಪಡಿಸಿಕೊಳ್ಳುತ್ತಾನೆ. ನಂತರವಷ್ಟೇ ಇಡೀ ಊರಿನಲ್ಲಿ ಮನೆಗೊಬ್ಬರಂತೆ , ಅಮ್ಮಳನ್ನು ಕಳುಹಿಸುವುದಕ್ಕಾಗಿ ದೈವಸ್ಥರ ನೇತೃತ್ವದಲ್ಲಿ ಊರಾಚೆಗೆ ತೆರಳಲಾಗುತ್ತೆ. ಊರಾಚೆಯಲ್ಲಿ ಗ್ರಾಮ ದೇವತೆ ಅರ್ಚಕರ ಅಣತಿಯಂತೆ , ನಿಯಮಾನುಸಾರ ಹೋಳಿಗೆಮ್ಮಳನ್ನು ಶ್ರದ್ಧಾ ಭಕ್ತಿಯಿಂದ ಪೂಜೆಗೈದು ಕಳುಹಿಸಿಕೊಡಲ‍ಾಗುತ್ತೆ. ಈ ಸಂದರ್ಭದಲ್ಲಿ ಗ್ರಾಮದ ಕಡೆ ಹಿಂದಿರುಗಿ ಮನೆಗೆ ತೆರಳುವಾಗ , ಯಾರೂ ಕೂಡ ಯಾವುದೇ ಕಾರಣಕ್ಕೆ ಹಿಂದಿರುಗಿ ನೋಡುವಂತಿಲ್ಲ ಏನೇ ಕಾರಣಕ್ಕೆ ಯಾರೊಸದಿಗೂ ಮಾತನಾಡುವಂತಿಲ್ಲ. ಆಮ್ಮಳನ್ನು ವಿಧಿ ವತ್ತಾಗಿ ಕಳುಹಿಸಿ ಮನೆಗೆ ಮರಳಿದ ನಂತರ , ಆಮ್ಮಳಿಗೆ ನೈವ್ಯೇದ್ಯ ಗೈದುಳಿದ ಖಾದ್ಯ ಆಹಾರವನ್ನು , ಆಮ್ಮಳ ಪ್ರಸಾದವಾಗಿ ಭಕ್ತಿಯಿಂದ ಸ್ವೀಕರಿಸಲಾಗುತ್ತದೆ. ಗ್ರಾಮ ದೇವತೆ ಆರಾಧನೆಯೊಂದಿಗೆ ಪ್ರತಿ ವರ್ಷವೂ ಊರವರೆಲ್ಲ ಸೇರಿ , ಒಂದೇ ಸಮಯಕ್ಕೆ ಅಮ್ಮಳನ್ನು ಕಳುಹಿಸುವ ಧಾರ್ಮಿಕ ಜಾನಪದೀಯ ಅಚರಣೆ ಜರಿಗಿಸಲಾಗುತ್ತೆ. ಹೋಳಿಗೆಮ್ಮ ಕಳುಹಿಸುವಾಗ ಸರ್ವರೂ ಸರ್ವ ಅಲಿಖಿಯ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕಿದೆ , ಹೋಳಿಗೆಮ್ಮಳ ಹಬ್ಬವನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಮಾತ್ರ ಅಮ್ಮ ಶಾಂತಳಾಗುತ್ತಾಳೆಂಬ ನಂಬಿಕೆ ಆಸ್ತಿಕರಲ್ಲಿಸೆ. ವಿಷೇಶ ಏನೆಂದರೆ ಹೋಳಿಗೆಮ್ಮಳ ಹಬ್ಬದೂಟಕ್ಕೆ , ಮನೆ ಮಂದಿ ಹೊರತು ಪಡಿಸಿ ಬೇರೆ ಯಾರನ್ನೂ ಯಾವುದೇ ಕಾರಣಕ್ಕೆ ಕರೆಯುವಂತಿಲ್ಲ.

ಹೆಂಗಸರು ತಾವು ಆಮ್ಮಳಿಗೆ ಅರ್ಪಿಸಿದ ಎಡೆಯನ್ನು, ಮೆನೆಯಲ್ಲಿಯ ಹಸಿದ ಬಾಲಕರಿಗೆ ದನ ಕರುಗಳಿಗೆ ಸಾಕು ಪ್ರಾಣಿಗಳಿಗೆ ನೀಡುತ್ತಾರೆ. ಆದರೆ ಮನೆ ಮಂದಿಯನ್ನು ಹೊರತು ಪಡಿಸಿದಂತೆ, ಬೇರೆ ಯಾರಿಗೂ ಕೊಡುವುದಿಲ್ಲ ಆದನ್ನು ಹೊಸ್ತಿಲಾಚೆ ಕೊಂಡ್ಯೊಯ್ಯುವಂತಿಲ್ಲ. ಮನೆಯೊಳಗಿನ ಜನರು ಹಾಗೂ ಸಾಕು ಪ್ರಾಣಿಗಳು ಸಂತೃಪ್ತಗೊಂಡರೆ, ಶ್ರೀ ಗ್ರಾಮ ದೇವತೆ ಊರಮ್ಮ ದೇವಿ ಸಂತೃಪ್ತಳಾಗಿ ಆಶೀರ್ವದಿಸಿದ್ದಾಳೆ ಎಂದು ನಂಬುತ್ತಾರೆ. ಊಟ ವನ್ನು ಬೇರೆಯವರಿಗೆ ಕೊಡುವಂತಿಲ್ಲ , ಕೊಟ್ಟರೆ ಮನೆಯಲ್ಲಿನ ಹುಲುಸು(ಅದೃಷ್ಟ ದೇವತೆ ಮುನಿಸಿಕೊಂಡು ಹೊರಟು ಹೋಗುತ್ತಾಳೆಂಬ ನಂಬಿಕೆ) ಇದು ಹೋಳಿಗೆ ಹಬ್ಬದ ನಿಯಮವಾಗಿದೆ. ಇಂತಹ ವಿಶಿಷ್ಠ ಅಚರಣೆಯು ಊರಲ್ಲಿ ಸೌಹಾರ್ಧತೆಯನ್ನು ಹಿಮ್ಮಡಿಗೊಳಿಸುತ್ತದೆ , ಮುಸಲ್ಮಾನರು ಮೊದಲ್ಗೊಂಡು. ಸರ್ವ ಜನಾಂಗದವರು ಒಟ್ಟಾಗಿ ಸಮಾನ ಮನಸ್ಕರಾಗಿ ಸ್ವಯಂ ಪ್ರೇರಣೆಯಿಂದ , ಆಚರಣೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವು ಭಾರೀ ವಿಶೇಷವೇ ಸರಿ. ಈ ಮೂಲಕ ಮೊರಬ ಗ್ರಾಮದಲ್ಲಿನ ಹೋಳಿಗೆಮ್ಮ ಆಚರಣೆ ಸೌಹಾರ್ದತೆಗೆ ಸಾಕ್ಷಿಯಾಗಿದ್ದು , ” ಸರ್ವ ಜನಾಂಗದ ಶಾಂತಿಯ ತೋಟ “ವಾಗಿ ಆಸ್ತಿಕರ ಮನಸ್ಸೂರೆಗೊಳಿಸಿದೆ ಮೊರಬ ಗ್ರಾಮ.

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *