ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳು ಅವಶ್ಯ: ಮಲ್ಲಿಕಾರ್ಜುನ ಗೋಟರು..

ಗಂಗಾವತಿ: >ಹಿರೇಜಂತಕಲ್ಲ್ ವಾರ್ಡ್ ೨೩ ಅಂಬೇಡ್ಕರ್ ಪ್ರತಿಮೆ ಮುಂದೆ ಇಂದು ವಿಶ್ವ ಕಾರ್ಮಿಕ ದಿನಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳ ಒದಗಿಸುವ ಮೂಲಕ ಅವರ ಜೀವನದ ಹಿತವನ್ನು ಕಾಪಾಡಲು ಸರಕಾರ ಮುಂದಾಗಬೇಕು ಎಂದು ಜೈಭೀಮ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಗೋಟರು ಹೇಳಿದರು. ಇವತ್ತು ಇಡೀ ವಿಶ್ವ ಕಾರ್ಮಿಕ ದಿನಾಚರಣೆ ಮಾಡುತ್ತದೆ, ಅದು ಸಂತೋಷದ ಸಂಗತಿ ಅದರೆ.ನಮಗೆ ಸರಕಾರದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಕರೆ ನೀಡಿದರು. ಕಾರ್ಮಿಕರು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತಾರೆ. ಅದರೆ ಅವರ ಜೀವನಕ್ಕೆ ಬೆಲೆ ಕಟ್ಟಲು ಸಾದ್ಯವಿಲ್ಲ ಎಂದು ತಿಳಿಸಿದರು. ಮೇಷನ್ ಕೀಟ್ ಗಳು ನೀಡುವ ಮೂಲಕ ಕಾರ್ಮಿಕರ ದಿನಾಚರಣೆ ಮಾಡಿದರುಮೇ ದಿನವನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಅಥವಾ ಕಾರ್ಮಿಕರ ದಿನ ಎಂದು ಕರೆಯುತ್ತಾರೆ, ಕಾರ್ಮಿಕ ವರ್ಗದ ಕೊಡುಗೆಯನ್ನು ಸ್ಮರಿಸಲು ಮತ್ತು ತೀವ್ರ ಮತ್ತು ಅಸುರಕ್ಷಿತ ಪರಿಸರದಲ್ಲಿ ಕೆಲಸ ಮಾಡುವವರ ಕಷ್ಟಗಳ ಹೋರಾಡಲು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತೆ. ಎಂದು ಜೈ ಭೀಮ್ ಕಟ್ಟಡ ಕಾರ್ಮಿಕರು ಸಂಘದ ಉಪಾಧ್ಯಕ್ಷ ಮಂಜುನಾಥ ಹಂಚಿನಾಳ ತಿಳಿಸಿದರು.ಮುಂದುವರಿದ ಮಾತನಾಡಿದ ರಮೇಶ್ ಮಾಗಿ ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಜಾಗತಿಕವಾಗಿ ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನ’ವನ್ನಾಗಿ ಆಚರಿಸಲಾಗುತ್ತದೆ. ಇದನ್ನು ಮೇ ಡೇ, ಲೇಬರ್ ಡೇ ಹಾಗೂ ವರ್ಕರ್ಸ್ ಡೇ ಎಂತಲೂ ಕರೆಯಲಾಗುತ್ತದೆ. ಕಾರ್ಮಿಕ ವರ್ಗದ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೋಷಣೆಯಿಂದ ರಕ್ಷಿಸುವುದು ಕಾರ್ಮಿಕ ದಿನದ ಉದ್ದೇಶವಾಗಿದೆ, ಸುಮಾರು ನೂರಾರು ಕಾರ್ಮಿಕರಿಗೆ ಮೇಷನ್ ಕೀಟ್ ಗಳು ನೀಡಿ,ಅರ್ಥಪೂರ್ಣವಾಗಿ ಆಚರಣೆ ಮಾಡಿದರು.ಈಸಂದರ್ಭದಲ್ಲಿ ಚಿನ್ನಪ್ಪ ,ಜಗದೀಶ್, ರಾಮ ಕಿರಿಕಿರಿ, ವಿರೇಶ ಮೀನಗಾರ, ಸೋಮನಾಥ ಕಂಠಿ,ಹನುಮಂತ. ಪಂಪಣ್ಣ, ಸತ್ಯಪ್ಪ ಚನ್ನಳ್ಳಿ, ಬಸವರಾಜ ,ಸಾವಿತ್ರಮ್ಮ ಮಾಗಿ ವಿರೇಶ.ಇತರರು ಇದ್ದರು.
